ಮಾತು ಮನುಷ್ಯನಿಗೆ ಮಾತ್ರ ದೊರೆತ ಪ್ರಕೃತಿ ಕೊಡುಗೆ. ಕಡಿಮೆ ಮಾತನಾಡುವವರಿಗೆ ಅವರ ಮಾತು ತುಂಬಾ ತುಟ್ಟಿ ಎಂದು ಛೇಡಿಸುತ್ತಾರೆ. ಮೌನ ಪ್ರಿಯರಿಗೆ ಮಾತನಡಲು.
ಹಣ ಕೊಡಬೇಕಾ? ಎಂದು ಅಪಹಾಸ್ಯ ಮಾಡುವ ಕಾಲವೊಂದಿತ್ತು. ಆದರೆ ಅದೀಗ ನಿಜವಾಗಿದೆ. ನಾವು ಮಾತನಾಡುವ ಮಾತಿಗೆ ನಿಜವಾಗಲೂ ಬೆಲೆ ತೆರಬೇಕಾಗಿದೆ.
ಅತ್ಯಾಧುನಿಕ ಸಂಪರ್ಕ ಮಾಧ್ಯಮವಾದ ಮೊಬೈಲ್ ದೊಡ್ಡ ಜಗತ್ತನ್ನು ಚಿಕ್ಕದಾಗಿಸಿದೆ. ದೂರವಿದ್ದವರನ್ನು ಸನಿಹವಾಗಿಸಿದೆ.ಆತ್ಮೀಯರಿಗೆ, ಗೆಳೆಯರಿಗೆ, ಬಂಧುಗಳಿಗೆ ಖುದ್ದಾಗಿ ಭೇಟಿಯಾಗಿ ತಿಳಿಸುವ ವಿಷಯವನ್ನು ಮೊಬೈಲಿನಲ್ಲಿ ತಿಳಿಸಿ ಸಮಯ ಉಳಿಸಿಕೊಳ್ಳುವದರ ಜೊತೆಗೆ ಕೆಲಸ ಕಾರ್ಯ ನೆರವೇರಿಸಿಕೊಳ್ಳಬಹುದು.
ದ್ವೇಷ ಅಸೂಯೆ ಕೋಪ ತಾಪಗಳಂಥ ನೆಗಟಿವ್ ಫೀಲಿಂಗ್ಸಗಳನ್ನು ಇದರಲ್ಲಿ ಅಭಿವ್ಯಕ್ತಿಸಿದರೆ ವೈರಿಗಳನ್ನಾಗಿಸಿಕೊಳ್ಳುವದು ಗ್ಯಾರಂಟಿ.
ಅನೇಕರಿಗೆ ಈ ಫೋನಿನಲ್ಲಿ ಹೇಗೆ ಮಾತನಾಡಬೇಕೆಂಬುದು ಗೊತ್ತಿರುವುದಿಲ್ಲ ಒತ್ತಡದ ವೇಗದ ದುನಿಯಾದಲ್ಲಿ ಬೇಗ ಬೇಗ ಸಾಗುವದು ಅನಿವಾರ್ಯ ಹೀಗಾಗಿ ಮೊಬೈಲಿನಲ್ಲಿ ಮಾತನಾಡುವ ಕಲೆಯನ್ನು ಕಲಿಯುವುದು ಅಗತ್ಯವಾಗಿದೆ.
ಮೊಬೈಲನ್ನು ಉತ್ತಮ ಗೆಳೆಯನ್ನಾಗಿಸಿಕೊಳ್ಳಲು ಈ ಸಲಹೆ ಪಾಲಿಸಿ.
- ಮಾತನಾಡುವ ಮುನ್ನ ಯಾರೊಂದಿಗೆ ಮತ್ತು ಯಾವ ವಿಷಯವನ್ನು ಮಾತನಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿಕೊಳ್ಳಿ.
- ಸುತ್ತು ಬಳಸಿ ಮಾತನಾಡಬೇಡಿ, ಮಾತು ನೇರವಾಗಿರಲಿ.
- ಅಪರಿಚಿತರೊಂದಿಗೆ ಮಾತನಾಡುವಾಗ ಸಂಕ್ಷಿಪ್ತವಾಗಿ ನಿಮ್ಮ ಪರಿಚಯ ಮಾಡಿಕೊಳ್ಳಿ.
- ಏರುದನಿಯಲ್ಲಿ ಅಥವಾ ಮೆಲುದನಿಯಲ್ಲಿ ಮಾತನಾಡಬೇಡಿ. ನಿಮ್ಮ ದ್ವನಿ ಸ್ಪಷ್ಟವಾಗಿ ಕೇಳಿಸುವಂತಿರಲಿ.
- ಮಾತು ಸಂಕ್ಷಿಪ್ತವಾಗಿರಲಿ.
- ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾತನಾಡಿ.
- ಸಾರ್ವಜನಿಕ ಸ್ಥಳಗಳಲ್ಲಿ ಜೋರಾಗಿ ಮಾತನಾಡಿ ಇತರರಿಗೆ ತೊಂದರೆ ಕೊಡಬೆಡಿ.
- ಅನಗತ್ಯ ವಿಷಯಗಳನ್ನು ಹೇಳಲು ಮುಂದಾಗಬೇಡಿ.
- ತಲೆ ಕೊರೆಯಬೇಡಿ, ಅರ್ಥವಿಲ್ಲದ ಪದಗಳನ್ನು ಬಳಸಬೇಡಿ.
- ಮಾತಿನಲ್ಲಿ ಸಭ್ಯತೆ ಮತ್ತು ಶಿಷ್ಟಾಚಾರವಿರಲಿ.
- ವ್ಯಕ್ತಿತ್ವಕ್ಕೆ ಕುಂದು ತರುವ ಅಗ್ಗದ ಹಗುರವಾದ ಮಾತುಗಳನ್ನಾಡಬೇಡಿ
- ಸ್ನೇಹಪೂರ್ವಕವಾಗಿ ಮಾತನಾಡಿ. ಭಾವೋದ್ವೇಗಕ್ಕೆ ಒಳಗಾಗಬೇಡಿ.
- ಮಾತು ಜಾರಿದರೆ ಪ್ರಮಾದ. ಜಾಗೃತೆಯಾಗಿ ಮಾತನಾಡಿ.
- ಸಾರ್ವಜನಿಕ ಪ್ರದೇಶಗಳಲ್ಲಿ ವೈಯುಕ್ತಿಕ ಬದುಕಿನ ವಿಚಾರಗಳನ್ನು ಮಾತನಾಡಬೇಡಿ.
ಎಚ್ಚರ:
- ಮೊಬೈಲಿನ ಅತಿಯಾದ ಬಳಕೆ ಕಿವುಡತನ ತರಬಲ್ಲದು.
- ನಪುಂಸಕತ್ವಕ್ಕೂ ಕಾರಣವಾಗಬಲ್ಲದು.
ಮೊಬೈಲಿನ ಇತಿ ಮಿತಿ ತಿಳಿದು ಹಿತ ಮಿತವಾಗಿ ಬಳಸಿದರೆ ಅದು ಸುಖದ ಸಾಧನ ಮತ್ತು ಅತ್ಯುತ್ತಮ ಗೆಳೆಯನಾಗುವುದು ಖಚಿತ.
ಜಯಶ್ರೀ.ಜೆ. ಅಬ್ಬಿಗೇರಿ ಸರಕಾರಿ ಪ ಪೂ ಕಾಲೇಜು ಹಿರೇಬಾಗೇವಾಡಿ 9449234142