spot_img
spot_img

ನಾಗರಿಕರಿಗೆ ಸೌಲಭ್ಯ ನೀಡದ ಮೂಡಲಗಿ ನಾಗರಿಕ ಸೌಲಭ್ಯ ಸಂಕೀರ್ಣ

Must Read

- Advertisement -

ಆರೋಗ್ಯ ಕೇಂದ್ರಕ್ಕೆ ಬೇಕು ಕಾಯಕಲ್ಪ

ಮೂಡಲಗಿ – ನಾಗರಿಕರಿಗಾಗಿ ಅದರಲ್ಲೂ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಅನುಕೂಲವಾಗಬಲ್ಲ ನಾಗರಿಕ ಸೌಲಭ್ಯಗಳ ಸಂಕೀರ್ಣ ನಿರ್ಮಾಣವಾಗಿ ಆರು ವರ್ಷ ಕಳೆದರೂ ಜನರಿಗೆ ಉಪಯೋಗವಾಗದೆ ಹಾಳಾಗಿ ಹೋಗುತ್ತಿದೆ.

ಜಿಲ್ಲಾ ಪಂಚಾಯತ ಬೆಳಗಾವಿಯ ಯೋಜನೆ  ಅಡಿಯಲ್ಲಿ ೨೦೧೭ ರಲ್ಲಿ  ೨೦೧೭-೧೮ KHSDRP ಯೋಜನೆಯಡಿ ಸುಮಾರು ೩೦ ಲಕ್ಷ ರೂ. ಗಳ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ನಾಗರಿಕ ಸೌಲಭ್ಯಗಳ ಸಂಕೀರ್ಣ ಎಂಬ ಸುಂದರ ಹೆಸರಿಟ್ಟು ನಿರ್ಮಾಣ ಮಾಡಲಾಗಿದೆ.

- Advertisement -

ಇಲ್ಲಿ ಹೊಟೇಲ್ ತೆರೆಯಲು, ಹಣ್ಣು ಹಂಪಲು ಮಾರಾಟ ಮಾಡಲು ಹಾಗೂ ಡೈರಿ ಉತ್ಪನ್ನಗಳ ಮಾರಾಟ ಮಾಡಲು ಮಳಿಗೆಗೆಳನ್ನು ನಿರ್ಮಿಸಲಾಗಿದೆ. ತುಂಬಾ ವ್ಯವಸ್ಥಿತವಾಗಿ ನಿರ್ಮಿಸಲಾಗಿರುವ ಈ ಕಟ್ಟಡದಲ್ಲಿ ಶೌಚಾಲಯಗಳ ವ್ಯವಸ್ಥೆಯನ್ನೂ ಮಾಡಲಾಗಿದ್ದು ಎಲ್ಲವೂ ನಿಷ್ಪ್ರಯೋಜಕವಾಗಿದೆ.

ಹೀಗೆ ಹಾಳಾಗಲು ಬಿಡುವಂತಿದ್ದರೆ ಈ ಸಂಕಿರ್ಣವನ್ನು ಯಾಕೆ ನಿರ್ಮಾಣ ಮಾಡಬೇಕಿತ್ತು ? ನಾಗರಿಕರ ತೆರಿಗೆ ಹಣವನ್ನು ಯಾಕೆ ಪೋಲು ಮಾಡಬೇಕಿತ್ತು ? ಎಂಬುದು ಸಾರ್ವಜನಿಕರ ಪ್ರಶ್ನೆ.

- Advertisement -

ಈ ಸಂಕೀರ್ಣದ ಬಗ್ಗೆ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿಯವರನ್ನು ಕೇಳಿದಾಗ, ಸದರಿ ಸಂಕೀರ್ಣದಲ್ಲಿ ಅಂಗಡಿಗಳನ್ನು ತೆರೆಯುವವರು ಸರ್ಕಾರದ ನಿಯಮಾವಳಿಗಳಂತೆ ಅತ್ಯಂತ ಕಡಿಮೆ ದರದಲ್ಲಿ ತಿಂಡಿ ತಿನಿಸುಗಳನ್ನು ನೀಡಬೇಕಾಗುತ್ತದೆ. ಹೀಗಾಗಿ ಎರಡು ಸಲ ಟೆಂಡರ್ ಕರೆದರೂ ಈ ಸಂಕೀರ್ಣದಲ್ಲಿ ಅಂಗಡಿ ತೆರೆಯಲು ಯಾರೂ ಮುಂದೆ ಬರುತ್ತಿಲ್ಲ ಎಂದರು.

ಈ ನಾಗರಿಕ ಸೌಲಭ್ಯಗಳ ಸಂಕೀರ್ಣ ದಲ್ಲಿ ಅಂಗವಿಕಲರಿಗೆ, ವಿಧವೆಯರಿಗೆ, ಬಡಮಹಿಳೆಯರಿಗೆ ಅಂಗಡಿ ತೆರೆಯಲು ಮಳಿಗೆ ನೀಡಬೇಕೆಂಬ ಸರ್ಕಾರಿ ಆದೇಶವಿದೆ. ಆದರೆ ಯಾರೂ ಮುಂದೆ ಬರುತ್ತಿಲ್ಲ. ಹೀಗಾದರೆ ಈ ಸಂಕೀರ್ಣವು ಸಾರ್ವಜನಿಕರಿಗೆ ಸೌಲಭ್ಯ ನೀಡುವುದೆಂದು ? ಈಗಾಗಲೇ ಆರು ವರ್ಷಗಳಿಂದ ೩೦ ಲಕ್ಷದಷ್ಟು ಹಣ ಪೋಲಾಗಿದೆ. ಇನ್ನಾದರೂ ಕೂಡ ಈ ಸಂಕೀರ್ಣದ ಉಪಯೋಗ ಮಾಡಿಕೊಂಡು ಬಡಜನರಿಗೆ ಉಪಯೋಗವಾಗಲು ಬಿಡಬೇಕಾಗಿದೆ ಇದರ ಜೊತೆಗೇ ಇಲ್ಲಿ ಅಂಗಡಿ ತೆರೆಯುವವರ ಹಿತಾಸಕ್ತಿಯನ್ನೂ ಕಾಯಬೇಕಾಗಿದೆ. ಇಂದಿರಾ ಕ್ಯಾಂಟೀನ್ ನಂಥ ಕಡಿಮೆ ದರದ ಅಂಗಡಿಗಳಿಗೆ ಸರ್ಕಾರದ ಬೆಂಬಲ ಇರುತ್ತದೆ. ಹಾಗೆಯೇ ಈ ಸಂಕೀರ್ಣಗಳಿಗೂ ಸರ್ಕಾರ ಅನುದಾನ ನೀಡಬೇಕು ಅಥವಾ ಸಾಮಾನ್ಯ ದರದಂತೆ ಇಲ್ಲಿ ಅಂಗಡಿ ತೆರೆಯಲು ಅವಕಾಶ ಮಾಡಿಕೊಡಬೇಕಾಗಿದೆ.

ಮೂಡಲಗಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇನ್ನೂ ಹಲವಾರು ಸೌಲಭ್ಯಗಳು ಆಗಬೇಕಿದೆ. ಆಸ್ಪತ್ರೆಯ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣವಾಗಬೇಕು ಇದರಿಂದ ರೋಗಿಗಳಿಗೆ ೨೪ ತಾಸೂ ಆರೋಗ್ಯ ಸೌಲಭ್ಯ ಸಿಗುವಂತಾಗುತ್ತದೆ. ಮೂಡಲಗಿಯು ತಾಲೂಕಾಗಿರುವುದರಿಂದ ಇಷ್ಟರಲ್ಲಿಯೇ ಇದು ತಾಲೂಕಾಸ್ಪತ್ರೆ ಎನಿಸಿಕೊಳ್ಳಲು ೧೦೦ ಹಾಸಿಗೆಗಳ ಆಸ್ಪತ್ರೆ, ತಾಯಿ ಮಕ್ಕಳ ಆರೋಗ್ಯ ಆಸ್ಪತ್ರೆಗಳನ್ನು ತೆರೆಯಬೇಕಾಗಿದೆ.

ಸುಮಾರು ಮೂರು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಮೂಡಲಗಿ ಆರೋಗ್ಯ ಕೇಂದ್ರಕ್ಕೆ ಒಂದು ಮಜಬೂತಾದ ಕಾಂಪೌಂಡ್ ಅಗತ್ಯವಿದೆ. ಹಳೆಯ ಕಟ್ಟಡಗಳ ಪುನರುತ್ಥಾನವಾಗಬೇಕು. ಹಿಂದುಗಡೆ ನಿರ್ಮಾಣವಾಗಿರುವ ಪೋಸ್ಟ್ ಮಾರ್ಟೆಮ್ ಮಾಡುವ ಕಟ್ಟಡ ಕೂಡ ನಿರುಪಯೋಗಿಯಾಗಿದ್ದು ಅದನ್ನು ಆಧುನೀಕರಿಸಿ ಉಪಯೋಗಕ್ಕೆ ತೆರೆಯಬೇಕು.

ಈಗಾಗಲೇ ಸಾಕಷ್ಟು ಸೌಲಭ್ಯಗಳನ್ನು ಹೊಂದಿರುವ ಮೂಡಲಗಿ ಪ್ರಾಥಮಿಕ ಆರೋಗ್ಯಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಆಗಮಿಸುತ್ತಾರೆ. ಪ್ರತಿಯೊಬ್ಬರಿಗೂ ಆರೋಗ್ಯ ಸೌಲಭ್ಯ ಅಲ್ಲದೆ ಇನ್ನೂ ಹಲವು ರೀತಿಯ ಅನುಕೂಲಗಳು ದೊರೆತರೆ ಬಡ ಜನರು ಸಮಾಧಾನದ ನಿಟ್ಟುಸಿರು ಬಿಡುವಂತಾಗುತ್ತದೆ. ಸರ್ಕಾರ, ಶಾಸಕರು, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಲಿ.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group