Homeಸುದ್ದಿಗಳುಲಿಂ.ಸಿದ್ದಲಿಂಗ ಸ್ವಾಮೀಜಿಗಳು ನಮ್ಮ ಜೊತೆಯೇ ಇದ್ದು ಆಶೀರ್ವದಿಸುತ್ತಿದ್ದಾರೆ - ಡಾ. ಪ್ರಭೂ ಸಾರಂಗದೇವ ಶಿವಾಚಾರ್ಯರು

ಲಿಂ.ಸಿದ್ದಲಿಂಗ ಸ್ವಾಮೀಜಿಗಳು ನಮ್ಮ ಜೊತೆಯೇ ಇದ್ದು ಆಶೀರ್ವದಿಸುತ್ತಿದ್ದಾರೆ – ಡಾ. ಪ್ರಭೂ ಸಾರಂಗದೇವ ಶಿವಾಚಾರ್ಯರು

ಸಿಂದಗಿ: ತಾಲೂಕಿನ ಉದ್ದಗಲಕ್ಕೂ ಪ್ರಸಿದ್ದರಾಗಿ, ಸಾರ್ಥಕ ಬದುಕು ನಡೆಸಿ, ಭವರೋಗ ನಿವಾರಿಸುವಲ್ಲಿ ಹೆಸರಾಗಿದ್ದ ಶ್ರೀ ಮ.ನಿ. ಪ್ರ ಸಿದ್ದಲಿಂಗ ಸ್ವಾಮೀಜಿಗಳು ಲಿಂಗಕೈರಾಗಿ ಒಂದು ವರ್ಷ ಪೂರೈಸುತ್ತಿದ್ದು, ಶ್ರೀಗಳ ಅನನ್ಯ ಸೇವೆ ನೆನೆದು ಶ್ರೀಗಳು ನಮ್ಮೊಂದಿಗೆ ಇಂದಿಗೂ ಇದ್ದು, ಮಠಕ್ಕೆ ಬರುವ ಭಕ್ತರಿಗೆ ಆಶಿರ್ವದಿಸುತ್ತಿದ್ದಾರೆ ಎಂದು ಸಾರಂಗ ಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ಲಿಂ.ಸಿದ್ದಲಿಂಗ ಸ್ವಾಮೀಜಿಗಳ ಪ್ರಥಮ ಪುಣ್ಯ ಸ್ಮರಣೆ ಮತ್ತು ಲಿಂ.ಪೂಜ್ಯರ ಗದ್ದುಗೆ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತಾನಾಡಿ, ಗ್ರಾಮೀಣ ಜನರು ಸ್ವಲ್ಪ ಆರೋಗ್ಯಕ್ಕೆ ಸರಿಯಿಲ್ಲದಿದ್ದರು ಆಸ್ಪತ್ರೆಗಳಿಗೆ ಧಾವಿಸದೇ ವಿರಕ್ತಮಠಕ್ಕೆ ಬಂದು ಭೂತ, ಪಿಶಾಚಿಗಳಂತಹವುಗಳನ್ನು ಪೂಜ್ಯರ ಪ್ರಸಾದ ಮತ್ತು ಅವರ ಗುಣದಿಂದ ಆರಾಮವಾದ ಘಟನೆಗಳು ಅಚ್ಚರಿಗೊಳಿಸಿದ್ದು ಮರೆಯುವಂತಿಲ್ಲ ಅವರು ದೈವೀ ಸಂಭೂತ ಶ್ರೀಗಳಾಗಿದ್ದರು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗಣ್ಯ ವ್ಯಾಪಾರಸ್ಥರಾದ ಅಶೋಕ ವಾರದ ಮಾತನಾಡಿ, ವಿರಕ್ತಮಠದಲ್ಲಿ ಶ್ರೀಗಳು ಇಂದಿಗೂ ಇದ್ದಾರೆ ಎನ್ನುವ ಭಾವನೆ ನಮ್ಮೆಲ್ಲರಲ್ಲಿದೆ. ಶೂನ್ಯಭಾವನೆ, ಅನಾಥ ಪ್ರಜ್ಞೆ ಯಾರಿಗೂ ಕಾಡುತ್ತಿಲ್ಲ. ಶ್ರೀಗಳ ಅನುಗ್ರಹ ಅವರ ತಪಸ್ಸಿನ ಶಕ್ತಿ ನಮ್ಮೆಲ್ಲರಿಗೆ ಸ್ಫೂರ್ತಿಯಾಗಿದೆ. ಅವರ ಆಶೀರ್ವಾದ ಎಲ್ಲಾ ಭಕ್ತರಿಗೆ ಲಭಿಸುತ್ತದೆ. ತೆರೆದ ಪುಸ್ತಕದಂತೆ ಜೀವನ ನಡೆಸಿರುವ ಅವರ ಜೀವನವೇ ನಮಗೆ ಸಂದೇಶ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಮಠಾಧೀಶರು ಸೇರಿದಂತೆ ತಾಲೂಕಿನ ಭಕ್ತ ಸಮೂಹ ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group