spot_img
spot_img

Mudalagi: ಮಣ್ಣು ಪರೀಕ್ಷೆ ಮತ್ತು ಹಸಿರೆಲೆ ಗೋಬ್ಬರದ ಮಹತ್ವ ಕಾರ್ಯಕ್ರಮ

Must Read

- Advertisement -

ಮೂಡಲಗಿ: ರೈತರು ಬೇಸಾಯ ಮಾಡುವ ಮೊದಲು ತಮ್ಮ ಜಮೀನದಲ್ಲಿ ಮಣ್ಣು ಪರೀಕ್ಷೆ ಮಾಡಿಕೊಂಡು ಭೂಮಿಗೆ ಫೋಷಕಾಂಶ ಗೊಬ್ಬರವನ್ನು ನೀಡಲು  ಸಣಬು, ಗೊಬ್ಬರ ಗಿಡ ಬೆಳೆಗಳನ್ನು ಸಮಯ ಅನುಸಾರ ಭೂಮಿಯಲ್ಲಿ ಬಳಕೆ ಮಾಡುವದರಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯ ಎಂದು ತುಕ್ಕಾನಟ್ಟಿ ಬರ್ಡ್ಸ್ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ಎಮ್.ಎನ್.ಮಲಾವಡಿ ಹೇಳಿದರು.

ಅವರು ತಾಲೂಕಿನ ನಾಗನೂರ ಗ್ರಾಮದ ಅಮೋಘಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೈತ ಕ್ಷೇತ್ರ ಪಾಠ ಶಾಲೆಯ ಕಾರ್ಯಕ್ರಮದ ಅಡಿಯಲ್ಲಿ ಮಣ್ಣು ಪರೀಕ್ಷೆ ಮತ್ತು ಹಸಿರೆಲೆ ಗೊಬ್ಬರದ ಮಹತ್ವ ಕಾರ್ಯಕ್ರಮದಲ್ಲಿ ರೈತ-ರೈತ ಮಹಿಳೆಯನ್ನು ಉದ್ಧೇಶಿಸಿ ಮಾತನಾಡಿದರು

ಯೋಜನೆಯ ಕೃಷಿ ಮೇಲ್ವಿಚಾರಕ ಮೈಲಾರಪ್ಪ ಪೈಲಿ ಮಾತನಾಡಿ,  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಅನೂಕ್ಕೂಲವಾಗುವ ದೃಷ್ಟಿಯಿಂದ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥಾಪಕರಾದ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಕೃಷಿ ಅಧ್ಯಯನ ಪ್ರವಾಸ, ಬೇಸಾಯಕ್ಕೆ ಯಂತ್ರೋಪಕ ಖರೀದಿ, ಸಸಿ ನಾಟಿ, ಮಾದರಿಯ ಹೈನುಗಾರಿಕೆಯ ಕೋಟಿಗೆ ರಚನೆ ಸೇರಿದಂತೆ ಹಲವಾರು ಯೋಜನೆ ರೂಪಿಸಿರುವದನ್ನು ಯೋಜನೆಯ ಸದಸ್ಯರು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು. 

- Advertisement -

ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಗಣಪತಿ ಬಟ್ಟಿ, ಸೇವಾಪ್ರತಿನಿಧಿ ಮದಿನಾ ನಾಯಕವಾಡಿ,ಒಕ್ಕೂಟದ ಅಧ್ಯಕ್ಷೆ ರೇಣುಕಾ ಪೂಜಾರಿ ಮತ್ತು ಅಣ್ಣಪ್ಪ ಬೆನಕನಹಳ್ಳಿ ಸ್ವ-ಸಹಾಯ ಸಂಘದ ಸದಸ್ಯರು ರೈತರು ಇದ್ದರು.

- Advertisement -
- Advertisement -

Latest News

ದಸರಾ ಕ್ರೀಡಾಕೂಟ: ಬೂದಿಹಾಳ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಬೈಲಹೊಂಗಲ: 2024-25 ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಲಕ್ಷ್ಮಿ...
- Advertisement -

More Articles Like This

- Advertisement -
close
error: Content is protected !!
Join WhatsApp Group