ಬೆಂಗಳೂರಿನಲ್ಲಿ ಮೋಡಿ ಮಾಡಿದ ಮೂಡಲಗಿ ಚೂಡಾ

Must Read

ಮೊದಲಿನಿಂದಲು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ತಿಂಡಿ ತಿನಿಸುಗಳು ಜನರಿಗೆ ಹೊಸ ರುಚಿಯನ್ನು ನೀಡಿ ಆಕರ್ಷಣೆ ಮೂಡಿರೋದು ವಾಡಿಕೆ ಇದೆ.

ಈಗ ಬೆಳಗಾವಿ ಜಿಲ್ಲೆಯ ಮೂಡಲಗಿಯ ಚುರುಮುರಿ ಚೂಡ ಫೇಮಸ್ ಆಗಿರೊದು ಬೆಳಕಿಗೆ ಬಂದಿದೆ. ಬೆಂಗಳೂರಿನ ಗಾಂಧಿ ನಗರದಲ್ಲಿ ಭರತ್ ಅವರ ಸಪ್ತಗಿರಿ ಕಾಂಡಿಮೆಂಟ್ಸ್ ನಲ್ಲಿ ನಮ್ಮ ಮೂಡಲಗಿಯ ಕಲಾವಿದ ಮಂಜುನಾಥ ರೇಳೆಕರ ಸಹಾಯದಿಂದ ಚುರುಮುರಿ ಚೂಡ ತಯಾರಿಸಿದ್ದು ತುಂಬಾ ಸ್ಪೇಷಲ್ ಎನಿಸಿದೆ. ಚುರುಮುರಿ ಚೂಡಾ ಎಂಬ ಉಪ್ಪು ಹುಳಿ ಖಾರ ಸ್ವಾದದ ವಿಶೇಷ ತಿಂಡಿ ಬೆಂಗಳೂರಿಗರನ್ನು ಈಗಾಗಲೇ ಆಕರ್ಷಿಸಿದೆ.

ಈ ಸ್ಥಳದಲ್ಲಿ ಸಿನಿಮಾ ಮಂದಿ ಹೆಚ್ಚು ಇದ್ದುದರಿಂದ ನಿರ್ಮಾಪಕರು, ನಿರ್ದೇಶಕರು ಮತ್ತು ಸಿನಿಮಾ ನಟರೂ ಸಹ ಚೂಡ ಸವಿದು ಅದಕ್ಕೆ ಫಿದಾ ಆಗಿದ್ದಾರೆ. ಹೆಮ್ಮೆ ಏನೆಂದರೆ ಈ ಚೂಡಾ ಗೆ ಮೂಡಲಗಿ ಚೂಡಾ ಎಂದು ನಾಮಕರಣ ಮಾಡಲಾಗಿದೆ.

ಮೂಡಲಗಿ ಚೂಡಾವನ್ನು ರಾಜಧಾನಿಯ ಬಾಗಿಲವರೆಗೂ ತೆಗೆದುಕೊಂಡು ಹೋಗಿ ಅಲ್ಲಿನವರಿಗೆ ಅದರ ಸ್ವಾದ ತಟ್ಟಿಸಿರುವ ಯುವ ಕಲಾವಿದ ಮಂಜುನಾಥನಿಗೆ ಉತ್ತರ ಕರ್ನಾಟಕದ ಜನತೆ ಥ್ಯಾಂಕ್ಸ್ ಹೇಳಲೇಬೇಕು. ಹಾಗೆಯೇ ಇಲ್ಲಿನ ಜನರು ಬೆಂಗಳೂರಿಗೆ ಹೋದಾಗ ಈ ಚುರುಮುರಿ ಚೂಡಾ ಸವಿದರೆ ನಮ್ಮ ತವರಿನ ನಂಟನ್ನು ಗಟ್ಟಿಯಾಗಿ ಹಿಡಿದುಕೊಂಡಂಥ ಅನುಭವ ನೀಡುತ್ತದೆ. ನೀವೂ ಕೂಡಾ ಬೆಂಗಳೂರಿಗೆ ಹೋದಾಗ ಮೂಡಲಗಿ ಚೂಡಾ ಸವಿಯಿರಿ ಎಂಬುದು ನಮ್ಮ ಮನವಿ.

ಸ್ಥಳ: ಸಪ್ತಗಿರಿ ಕಾಂಡಿಮೆಂಟ್ಸ್ ಗಾಂಧಿ ನಗರ 6 ನೇ ಕ್ರಾಸ್ ಬೆಂಗಳೂರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group