spot_img
spot_img

ಶಿಸ್ತುಬದ್ಧ ಆರ್ ಎಸ್ ಎಸ್ ಪಥಸಂಚಲನ; ಟೀಕಾಕಾರರಿಗೆ ಉತ್ತರ

Must Read

- Advertisement -

ಶಿಸ್ತುಬದ್ಧ, ಲಯಬದ್ಧ ನಡಿಗೆ, ದ್ವೇಷದ ಮಾತುಗಳಿಲ್ಲ, ಪ್ರಚೋದನಾತ್ಮಕ ಘೋಷಣೆಗಳಿಲ್ಲದೆ ಹೆಜ್ಜೆ ಹೆಜ್ಜೆಗೂ ಭಾರತಾಂಬೆಯ ಸ್ಮರಣೆಯೊಂದಿಗೆ ನಿನ್ನೆ ಬೀದರ ನಗರದಲ್ಲಿ ನಡೆದ ಆರ್ ಎಸ್ ಎಸ್ ಸಂಘಟನೆಯ ಪಥ ಸಂಚಲನ ಟೀಕಾಕಾರರಿಗೆ ಸಮರ್ಥ ಉತ್ತರ ನೀಡುವಂತಿತ್ತು.

ಕೊರೋನಾದ ಸಂಕಷ್ಟವನ್ನು ಎದುರಿಸಲು ಪ್ರತಿಯೊಬ್ಭರೂ ಮಾಸ್ಕ್ ಧರಿಸಿ ಶಿಸ್ತುಬದ್ಧ ಚಲನೆಯೊಂದಿಗೆ ಹೊರಟ ಕಕಾಣುತ್ತಿಲ್ಲಆರ್ ಎಸ್ ಎಸ್ ಎಂಬ ದೇಶಭಕ್ತ ಸಂಘಟನೆಯ ಧ್ಯೇಯ ಶಾಂತಿ, ಸೌಹಾರ್ದತೆ ಎಂಬುದನ್ನು ಸಾರಿ ಸಾರಿ ಹೇಳಿದರು. ಇದನ್ನೆಲ್ಲ ಮೊದಲಿನಿಂದಲೂ ನೋಡುತ್ತಿದ್ದರೂ ಕೆಲವು ಪೂರ್ವಗ್ರಹ ಪೀಡಿತ, ಕುತ್ಸಿತ ಮನಸುಗಳು ಈ ಸಂಘಟನೆಯನ್ನು ತಾಲಿಬಾನಿ ಉಗ್ರ ಸಂಘಟನೆಯೊಂದಿಗೆ ಹೋಲಿಸುತ್ತಿರುವ ಅತ್ಯಂತ ವಿಷಾದನೀಯ ಸಂಗತಿ ನಮ್ಮ ದೇಶದಲ್ಲಿ ಮಾತ್ರ ಸಂಭವಿಸಲು ಸಾಧ್ಯ. ಇಲ್ಲಿ ಈ ದೇಶದ ಅನ್ನ ತಿಂದು ವೈರಿ ದೇಶವನ್ನು ಹೊಗಳುವ ದ್ರೋಹಿಗಳಿದ್ದಾರೆ. ಸಾಂವಿಧಾನಿಕ ಹಕ್ಕುಗಳ ನೆಪದಲ್ಲಿ ದೇಶದ ವಿರುದ್ಧವೇ ಮಾತನಾಡುವ ಜನರಿದ್ದಾರೆ. ಅಂಥವರಿಗೂ ಕೂಡ ಬದುಕುವ ಹಕ್ಕನ್ನು ಕೊಟ್ಟ ಮಹಾನ್ ಸಂಸ್ಕೃತಿ ಈ ದೇಶದ್ದು.

ಇತ್ತೀಚೆಗೆ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಕುಮಾರಸ್ವಾಮಿ ಆರ್ ಎಸ್ ಎಸ್ ಸಂಘಟನೆಯ ವಿರುದ್ಧ ಹರಿಹಾಯ್ದರು. ಸಿದ್ಧರಾಮಯ್ಯ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ಅದೊಂದು ತಾಲಿಬಾನಿ ಸಂಘಟನೆ ಎಂದರು. ತೀರ ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆ ನಡೆಸಿದ ನರಮೇಧ, ಸ್ತ್ರೀ ದ್ವೇಷ, ಪತ್ರಕರ್ತರ ಮೇಲಿನ ದೌರ್ಜನ್ಯ ಇವುಗಳನ್ನು ಕಂಡೂ ಅಂಥ ಗುಂಪಿಗೆ ಭಾರತದ ಒಂದು ಸೇವಾಸಂಸ್ಥೆಯನ್ನು ಹೋಲಿಕೆ ಮಾಡುತ್ತಾರೆಂದರೆ ಇವರ ಮನಸುಗಳು ಎಷ್ಟು ರೋಗಗ್ರಸ್ತವಾಗಿವೆ, ಇವರು ಅಧಿಕಾರವಿಲ್ಲದೆ ಎಷ್ಟು ಹತಾಶರಾಗಿದ್ದಾರೆನ್ನುವುದು ಇದರಿಂದ ಸಾಬೀತಾಗುತ್ತದೆ. ಅಷ್ಟಕ್ಕೂ ಈ ಮಹಾನ್ ಪುರುಷರಿಬ್ಬರೂ ಆರ್ ಎಸ್ ಎಸ್ ಸಂಘಟನೆಯನ್ನು ತೆಗಳುವುದು ಈ ರಾಜ್ಯಕ್ಕೋ ದೇಶಕ್ಕೋ ಉಪಕಾರವಾಗಲಿ ಅಂತಲ್ಲ ಬದಲಾಗಿ ಯಾವುದೋ ಒಂದು ಕೋಮಿಗೆ ಖುಷಿಯಾಗಲಿ, ಅವರ ಮತಗಳೆಲ್ಲಾ ಸಾರಾಸಗಟಾಗಿ ತಮಗೇ ಬರಲಿ ಎಂಬ ದುರಾಲೋಚನೆಯೇ ಹೊರತು ಮತ್ತೇನೂ ಒಳ್ಳೆಯ ಉದ್ದೇಶವೇ ಅದರಲ್ಲಿ ಕಾಣುತ್ತಿಲ್ಲ. ಸಂಪೂರ್ಣ ಸೇವಾ ನಿರತವಾಗಿರುವ ಆ ಸಂಘಟನೆಯನ್ನು ತೆಗಳಿ ಇವರು ಏನು ಸಾಧಿಸಲು ಹೊರಟಿದ್ದಾರೆನ್ನುವುದೇ ತಿಳಿಯದು ಯಾಕೆಂದರೆ ಆರ್ ಎಸ್ ಎಸ್ ನಂಥ ಸಂಘಟನೆಯನ್ನು ಕಾರಣವಿಲ್ಲದೆ ತೆಗಳಿದವರು ಇನ್ನೂವರೆಗೂ ಯಾರೂ ಉದ್ಧಾರವಾಗಿಲ್ಲ. ಇದಕ್ಕೆ ಒಂದೇ ಜ್ವಲಂತ ಉದಾಹರಣೆಯೆಂದರೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು. ಅವರೇ ಹೇಳಿದಂತೆ ಈ ಸಂಘಟನೆಯನ್ನು ತೆಗಳಿದ್ದರಿಂದಲೇ ಅವರಿಗೆ ಸೋಲಾಯಿತಂತೆ ! ಇಷ್ಟು ಗೊತ್ತಿದ್ದೂ ಇವರಿಗೆ ಇನ್ನೂ ಜ್ಞಾನೋದಯವಾಗಿಲ್ಲವೆಂದರೆ…..!!

- Advertisement -

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ನಮ್ಮ ಊರ ಜಾತ್ರೆಯೊಂದನ್ನು ನಿಮ್ಮ ಬದುಕಿನ ಯಾತ್ರೆಗೆ ಹೋಲಿಸುತ್ತ….

ಹಾಯ್, ಹಲೋ, ನಮಸ್ಕಾರ...ಸ್ನೇಹಿತರೆ ನೀವೆಲ್ಲ ಹೇಗಿದ್ದೀರಿ? ಬಹಳಷ್ಟು ಜನ ಪರವಾಗಿಲ್ಲ ಚೆನ್ನಾಗಿದ್ದೀವಿ ಅಂತೀರಿ ಇನ್ನು ಕೆಲವಷ್ಟು ಜನ ಅಯ್ಯೋ ಅದ್ ಏನ್ ಕೇಳ್ತೀರಾ ಬಿಡಿ ಅನ್ನುವಂತಹ...
- Advertisement -

More Articles Like This

- Advertisement -
close
error: Content is protected !!
Join WhatsApp Group