ಮೂಡಲಗಿ – ಇತ್ತೀಚೆಗೆ ಕರ್ನಾಟಕ ಸರ್ಕಾರ ನಡೆಸಿದ್ದ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯಾದ ಕೆ-ಸೆಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಮೂಡಲಗಿಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೦೭ ಜನ ಹಳೆಯ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ.
ಮಹಾವಿದ್ಯಾಲಯದ ಶಿಲ್ಪಾ ಉಪ್ಪಿನ (ಸಮಾಜಕಾರ್ಯ), ಸ್ನೇಹಾ ಹೆಳವರ (ಭೌತಶಾಸ್ತ್ರ), ಅಪರ್ಣಾ ಸಣ್ಣಕ್ಕಿ, ವಿದ್ಯಾಶ್ರೀ ಹಂಜಿ, ಶ್ರೀಶೈಲ ಸಂಕಾನಟ್ಟಿ (ಮೂವರು ಅರ್ಥಶಾಸ್ತ್ರ), ಈರಣ್ಣ ತುಕ್ಕನ್ನವರ (ಭೂಗೋಳಶಾಸ್ತ್ರ) ಹಾಗೂ ಯಮನಪ್ಪ ಕೇರಿ (ರಾಜ್ಯಶಾಸ್ತ್ರ) ಅವರು ಉತ್ತೀರ್ಣರಾದ ವಿದ್ಯಾರ್ಥಿಗಳು.
ಸಾಧಕರಿಗೆ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶಾಸಕ ಬಾಲಚಂದ್ರ ಜಾರಕಿಹೊಳಿ, ಸರ್ವ ಸದಸ್ಯರು, ಪ್ರಾಂಶುಪಾಲರಾದ ಮಹೇಶ ಕಂಬಾರ, ಬೋಧಕ ಹಾಗೂ ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

