- Advertisement -
ಪಾತಾಳ ಗರುಡ ಇದು ಕನ್ನಡದ ಹೆಸರಾದರೂ ನಮ್ಮ ವಾಡಿಕೆಯಲ್ಲಿ ಇರುವ ಶಬ್ದ ಸರ್ಪಗಂಧ ಇದು ಸಂಸ್ಕೃತದ ಹೆಸರು. ಇದಕ್ಕೆ ಇನ್ನೊಂದು ಹೆಸರು ಮುಂಗುಸಿ ಗಿಡ.
ಸಾಧಾರಣ ಮಲೆನಾಡಲ್ಲಿ ಅಲ್ಲಲ್ಲಿ ಕಂಡುಬರುವ ಸಸ್ಯ. ಹುಲ್ಲುಗಾವಲಿನಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಭೂ ಸಾಗುವಳಿಯಿಂದ ಅವಸಾನದ ಅಂಚಿನಲ್ಲಿ ಇದೆ.
ಇದರ ಬೇರು ಮತ್ತು ಪಂಚಾಂಗ ಹೆಚ್ಚು ಔಷಧಿಯಾಗಿ ಉಪಯೋಗಿಸುತ್ತಾರೆ. ಮಾರುಕಟ್ಟೆಯಲ್ಲಿ ನೈಜ ಬೇರು ಸಿಕ್ಕುವುದು ಕಷ್ಟ. ಚಿತ್ರದಲ್ಲಿ ನೈಜ ವಲ್ಲದ್ದು ಮತ್ತು ನೈಜ ಎರಡನ್ನು ತೋರಿಸಿದ್ದೇನೆ.
- Advertisement -
- ಇದರ ಬೇರನ್ನು ನಿಂಬೆರಸದಲ್ಲಿ ತೇಯ್ದು ತೆಗೆದುಕೊಳ್ಳುವುದರಿಂದ ಹೈ ಬಿಪಿ ಗುಣವಾಗುತ್ತದೆ.
- ಇದರ ಪಂಚಾಂಗದ ಪುಡಿಯನ್ನು ದೇಶಿ ಹಸುವಿನ ತುಪ್ಪದಲ್ಲಿ ಸೇವಿಸುವುದರಿಂದ ನಿದ್ರಾಹೀನತೆ ಗುಣವಾಗುತ್ತದೆ.
- ಇದರ ಬೇರನ್ನು ಜೇನುತುಪ್ಪದಲ್ಲಿ ತೇಯ್ದು ಸೇವಿಸಿದರೆ ಕೆಮ್ಮು ಗುಣವಾಗುತ್ತದೆ.
- ಇದರ ಬೇರಿನಿಂದ ಹದವರಿತು ಮಾಡಿದ ಔಷಧಿಯಿಂದ ಎದೆಯ ಗಂಟುಗಳು ಗುಣವಾಗುತ್ತದೆ. ನಾನು ತಯಾರಿಸುವ ಮೊಲೆ ಹುಣ್ಣಿನ ಔಷಧಿಯಲ್ಲಿ ಈ ಬೇರು ಉಪಯೋಗಿಸುತ್ತೇನೆ.
- ಬೇರನ್ನು ಅಕ್ಕಿ ತೊಳೆದ ನೀರು (ಕಡೆಕಚ್ಚೂ) ತೈಯ್ದು ಹಚ್ಚುವುದರಿಂದ ಸರ್ಪಸುತ್ತು ಗುಣವಾಗುತ್ತದೆ.
- ವಿಶೇಷ ಸೂಚನೆ: ಇದು ತುಂಬಾ ಒಳ್ಳೆಯ ಔಷಧಿಯಾದರೂ ಹದವರಿತು ಮಾಡದಿದ್ದರೆ ಅಲ್ಸರ್, ಹೊಟ್ಟೆ ಹಸುವಿನ ನಷ್ಟ, ವಾತರಿಕೆ, ವಾಂತಿ, ಹೊಟ್ಟೆ ನೋವು, ತಲೆನೋವು, ಉಸಿರಾಟದ ತೊಂದರೆ ,ಎದೆ ನೋವು ,ಚರ್ಮದ ದದ್ದುಗಳು, ಅರೆ ನಿದ್ರಾ ಅವಸ್ತೆ ,ಪಾರ್ಕಿಂಗ್ ಸನ್, ಅತಿಸಾರ ಮೂತ್ರಕೋಶ ಮತ್ತು ಪಿತ್ತಕೋಶದ ಕಲ್ಲುಗಳು, ಸಂಧಿವಾತ ಇಷ್ಟು ರೋಗಗಳು ಬರುವ ಸಾಧ್ಯತೆ ಇದೆ.
ಹಳ್ಳಿ ವೈದ್ಯವಾದರೂ ನುರಿತ ವೈದ್ಯರಿಂದ ಕಲಿತು ಈ ಬೇರನ್ನು ಉಪಯೋಗಿಸುವುದು ಒಳ್ಳೆಯದು.
ಸುಮನಾ ಮಳಲಗದ್ದೆ 9980182883.