ಸಿಂದಗಿ: ಹಿಂದೆ ಈ ಭಾಗದಲ್ಲಿ ನನ್ನ ಪತಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಎರಡು ಬಾರಿ ಶಾಸಕರಾಗಿ ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದು ಜನರು ಮರೆತಿಲ್ಲ ಅವರು ಮಾಡಿರುವ ಅಭಿವೃದ್ದಿಯೇ ಅವರ ಗೆಲುವಿಗೆ ಶ್ರೀರಕ್ಷೆ ಆಗಲಿವೆ ಎಂದು ಭೂಸನೂರ ಪತ್ನಿ ಲಲಿತಾಬಾಯಿ ರಮೇಶ ಭೂಸನೂರ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದಲ್ಲಿ ಅವರು ಪತಿಯ ಪರವಾಗಿ ವಾರ್ಡ ನಂ 1 ರಲ್ಲಿ ಮನೆಮನೆಗೆ ಮತಯಾಚನೆ ಮಾಡಿ ಕನ್ನಡಪ್ರಭದೊಂದಿಗೆ ಮಾತನಾಡಿ ರಮೇಶ ಭೂಸನೂರ ಅವರು ಮಂಡಳ ಪಂಚಾಯತಿಯಿಂದ ಆಯ್ಕೆಯಾಗುತ್ತಾ ಜನರ ಆಶೀರ್ವಾದದಿಂದ ಎರಡು ಬಾರಿ ಶಾಸಕರಾಗಿದ್ದಾರೆ ಹೀಗಾಗಿ ಅವರಿಗೆ ಜನರ ಕಷ್ಟದ ಬಗ್ಗೆ ಮತ್ತು ಅಭಿವೃದ್ದಿ ಹೇಗೆ ಮಾಡಬೇಕು ಎನ್ನುವುದು ತುಂಬಾ ಗೊತ್ತಿದೆ, ಅವರು ಶಾಸಕರಾಗಿದಾಗ ಪ್ರತಿಯೊಂದು ಹಳ್ಳಿಗಳಿಗೆ ತಮ್ಮದೆಯಾದ ಅಭಿವೃದ್ದಿ ಕೆಲಸ ಮಾಡಿದ್ದಾರೆ, ಯಾವುದೇ ಬೇದಭಾವ ಮಾಡದೇ ಜನರ ಸೇವೆಯಲ್ಲಿ ತೊಡಗಿದ್ದಾರೆ, ಅವರ ಅಭಿವೃದ್ದಿ ಜನರು ಮರೆತಿಲ್ಲ,ಮರೆಯುವುದೂ ಇಲ್ಲ ಹೀಗಾಗಿ ಈ ಬಾರಿ ನನ್ನ ಪತಿಗೆ ಗೆಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜ್ಯೋತಿ ಬಗಲಿ,ಮಂಗಳಾ ಗುಡಿಮಠ,ಸುವರ್ಣ ಹಳಿಮನಿ,ಕಮಲಾಬಾಯಿ,ಇಂದ್ರಾಬಾಯಿ ಶೆಟ್ಟಿ,ಗಂಗುಬಾಯಿ ಅಮಲಝರಿ,ಶೈಲಾ ಹೊಸಮನಿ ಸೇರಿದಂತೆ ಇತರೆ ಮಹಿಳಾ ಕಾರ್ಯಕರ್ತರು ಸಾಥ ನೀಡಿದರು.