spot_img
spot_img

ಸರ್ವ ಧರ್ಮವನ್ನು ಸಮನಾಗಿ ಕಾಣುವ ಪಕ್ಷ ಕಾಂಗ್ರೆಸ್ ! ಮಾಜಿ ಸಚಿವೆ ಉಮಾಶ್ರೀ ಹೇಳಿಕೆ

Must Read

- Advertisement -

ಬಡವರ ರಕ್ತ ಹೀರುತ್ತಿರುವ ಬಿಜೆಪಿ ಗೆ ಪಾಠ ಕಲಿಸಿ

ಸಿಂದಗಿ: ಸುಳ್ಳಿಗೆ ಇನ್ನೊಂದು ಹೆಸರೇ ಬಿಜೆಪಿ ಸರಕಾರ ಧರ್ಮ ಧರ್ಮಗಳಲ್ಲಿ ವಿಷದ ಬೀಜ ಬಿತ್ತಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ ಸರ್ವಧರ್ಮವನ್ನು ಸಮನಾಗಿ ಕಾಣುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

ತಾಲೂಕಿನ ಮೋರಟಗಿ ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಪರ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಮತಯಾಚಿಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಗಡಿ ಭಾಗದಲ್ಲಿ ನಾನು ಅದು ಮಾಡಿದ್ದೇನೆ ಇದು ಮಾಡಿದ್ದೇನೆ ಎಂದು ಹೇಳುತ್ತಾ ಅದಾನಿ ಅಂಬಾನಿಯಂಥ ಉದ್ಯಮಿಗಳ ಕೋಟಿ ಕೋಟಿ ಸಾಲ ಮನ್ನಾ ಮಾಡಿ, ಕೋಟಿ ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಸರಕಾರದ ವಿರುದ್ಧ ಕಿಡಿ ಕಾರಿ, ಹೆಣ್ಣು ಮಕ್ಕಳ ಕಣ್ಣೀರು ವರೆಸುವ ಕೆಲಸ ಮಾಡಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುವ ಇವರು ಅಡುಗೆ ಅನಿಲ ಬೆಲೆ ಸೇರಿದಂತೆ ಪೆಟ್ರೋಲ್ ಡಿಸೈಲ್ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿಸಿ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದು ನಿಲ್ಲುವ ಪರಿಸ್ಥಿತಿ ತಂದಿದ್ದಾರೆ.ಈ ಉಪಚುನಾವಣೆ ಭ್ರಷ್ಟ ಸರಕಾರಕ್ಕೆ ತಾವೆಲ್ಲರೂ ಪಾಠ ಕಲಿಸಲು ಸಜ್ಜಾಗಿ ಎಂದು ಕರೆ ನೀಡಿದರು.

- Advertisement -

ಈ ಸಂದರ್ಭದಲ್ಲಿ ಮಾಜಿ ಜಿ. ಪಂ. ಎನ್ ಆರ್ ತಿವಾರಿ, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಮೈಬುಬಸಾಬ್ ಕಣ್ಣಿ, ನಿಂಗನಗೌಡ ಪಾಟೀಲ್, ವೀರನಗೌಡ ಪಾಟೀಲ್, ಸಿದ್ದು ಮಂದೇವಾಲಿ, ಬಸಣ್ಣ ಮಸಳಿ, ಸಲೀಮ್ ಕಣ್ಣಿ, ಮುರಗೇಂದ್ರ ಕೋರಿ, ದವಲಸಾಬ್ ದೇವಣಗಾವ್ ಸೇರಿದಂತೆ ಕಾರ್ಯಕರ್ತರು ಇದ್ದರು.

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group