- Advertisement -
ಬಿಸಿಲ ಮಳೆ
ಸುರಿಯುತಿದೆ ಪ್ರತಿದಿನ ಬಿಸಿಲಮಳೆ
ಪ್ರಕೃತಿ ತನ್ನ ಕೋಪವ ತೀರಿಸಲೆಂದು
ಹನಿ ಹನಿ ನೀರಿಗೂ ತತ್ವಾರ
ಪ್ರಾಣಿ ಪಕ್ಷಿಗಳಿಗೆ ಜೀವಕಂಟಕ ಈ ಬಿಸಿಲ ಮಳೆ
ಹಸಿರು ಸಿರಿಯ ನಾಶದ ಫಲದಿ
ಕೆರೆ ಕುಂಟೆ ನದಿಗಳ ಅಪಹರಣ ಕಾರಣದಿ
ಕಾನನದ ವಿನಾಶದ ದುಷ್ಪಲವಾಗಿ
ಸುರಿಯುತಿದೆ ಭೂಮಂಡಲಕೆ ಬಿಸಿಲಮಳೆ
- Advertisement -
ಮನುಜ ಮಾಡಿದ ಪರಿಸರ ನಾಶದ ಕುಕೃತ್ಯಕೆ
ಸೇಡು ತೀರಿಸುವ ರೀತಿಯಲಿ
ಹಿಂದೆಂದೂ ಕಾಣದ ರೀತಿಯಲಿ ಬಿಸಿಗಾಳಿಯ ಶಿಕ್ಷೆ (ಕರಿನೀರ ಶಿಕ್ಷೆಯ ತರದಿ) ವಿಧಿಸುತಿದೆ
ಇನ್ನಾದರೂ ಕೃಪೆದೋರು ಓ ವರುಣದೇವ
ಬೆಂದೊಡಲ ಹಸಿಮಾಡಿ
ರವಿಕಿರಣದ ಪೌರುಷ ಕುಗ್ಗಿಸಿ
ತಂಗಾಳಿಯ ಸೂಸು
ಬದುಕು ಹಸನಾಗಿಸು
ಶಿವಕುಮಾರ ಕೋಡಿಹಾಳ, ಮೂಡಲಗಿ