ಸಿಂದಗಿ; ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಹೆಸರಿನ ಮೇಲೆ ನಿರ್ಮಾಣವಾಗಿರುವ ತೋಂಟದ ಸಿದ್ದಲಿಂಗ ಶ್ರೀ ಪ್ರಶಸ್ತಿ ನನಗೆ ದೊರಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಭಾವಿಸುತ್ತೇನೆ ಎಂದು ಸ್ಥಳೀಯ ಎಸ್‌ಜಿ ಪಿಯು ಕಾಲೇಜಿನ ಪ್ರಾಚಾರ್ಯ ಎ. ಆರ್. ಹೆಗ್ಗಣನದೊಡ್ಡಿ ಸಂತಸ ಪಟ್ಟರು
ಅವರಿಗೆ ಡಿಸೆಂಬರ್ ೧ ರಂದು ವಿಜಯಪುರ ನಗರದಲ್ಲಿ ಕನ್ನಡ ಪುಸ್ತಕ ಪರಿಷತ್ತು ವಿಜಯಪುರ ಹಮ್ಮಿಕೊಂಡಿರುವ ಕನ್ನಡ ಪುಸ್ತಕ ಪರಿಷತ್ತು ಸಮ್ಮೇಳನ ೨೦೨೪ ರಲ್ಲಿ ಅವರು ಶಿಕ್ಷಣ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಮನಗಂಡು ಕನ್ನಡ ಪುಸ್ತಕ ಪರಿಷತ್ತಿನವರು ಕೊಡ ಮಾಡಿದ ತೋಂಟದ ಸಿದ್ದಲಿಂಗ ಶ್ರೀ ಪ್ರಶಸ್ತಿ ಗೆ ಭಾಜನರಾದ ಹಿನ್ನೆಲೆಯಲ್ಲಿ ಎಚ್.ಜಿ ಕಾಲೇಜಿನ ಉಪನ್ಯಾಸಕ ವೃಂದ ನೀಡಿದ ಗೌರವವನ್ನು ಸ್ವೀಕರಿಸಿ ಮಾತನಾಡಿದರು.
ಇಂದು ಅನೇಕ ಪ್ರಶಸ್ತಿಗಳು ಲಾಬಿಗಾಗಿ ಮತ್ತು ಹಣಕ್ಕಾಗಿ ನಡೆಯುತ್ತಿವೆ. ನಿಜವಾದ ಸೇವೆಯನ್ನ ಮನಗಂಡು ನೀಡಿದ ಪ್ರಶಸ್ತಿಗಳು ಆತ್ಮ ತೃಪ್ತಿಯನ್ನು ನೀಡುತ್ತವೆ ಮತ್ತು ಅದರ ಜೊತೆಗೆ ಇನ್ನೂ ಆ ಕಾರ್ಯದಲ್ಲಿ ಸಕ್ರಿಯ ಆಗುವಂತೆ ಪ್ರೇರೇಪಿಸುತ್ತವೆ. ತೋಟದ ಸಿದ್ದಲಿಂಗ ಮಹಾಸ್ವಾಮಿಗಳು ಮೂಲತಃ ಸಿಂದಗಿ ಅವರು ಗದುಗಿನ ತೋಟದಾರ ಮಠದ ಪೀಠಾಧ್ಯಕ್ಷರಾದ ಮೇಲೆ ಅನೇಕ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಮತ್ತು ಅನ್ನದಾಸೋಹ ಜ್ಞಾನ ದಾಸೋಹ ನಿರಂತರವಾಗಿ ಮಾಡಿದಂತವರು. ಬಸವಣ್ಣನವರ ವಿಚಾರಗಳನ್ನು ನಾಡಿನ ತುಂಬೆಲ್ಲ ಪ್ರಚಾರ ಮತ್ತು ಪ್ರಚಾರ ಮಾಡಿ ಜನರಲ್ಲಿ ವೈಜ್ಞಾನಿಕ ಪ್ರಜ್ಞೆಯನ್ನ ಮತ್ತು ವೈಚಾರಿಕ ಪ್ರಜ್ಞೆಯನ್ನ ತುಂಬಿದಂತಹ ಮಹಾನ್ ಯೋಗಿಗಳು. ಅವರ ಹೆಸರಿನ ಮೇಲೆ ಪ್ರಶಸ್ತಿ ಸ್ವೀಕಾರ ಪಡೆದುಕೊಂಡ ನಾನು ನಿಜವಾಗಲು ಪುಣ್ಯವಂತ ಎನ್ನುವ ಭಾವ ನನ್ನಲ್ಲಿ ಮೂಡಿದೆ ಎಂದರು.
ಮಹಾವಿದ್ಯಾಲಯದ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಮಾತನಾಡಿ, ಜಗದ್ಗುರು ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಒಬ್ಬ ಸಾಮಾನ್ಯರ ಸ್ವಾಮೀಜಿ, ಪುಸ್ತಕದ ಸ್ವಾಮೀಜಿ, ಆಧುನಿಕ ಬಸವಣ್ಣ ಎಂದೇ ಕರೆಸಿಕೊಂಡ ಪೂಜ್ಯರು. ಪುಸ್ತಕದ ಮೇಲೆ ಸಾಹಿತ್ಯದ ಮೇಲೆ ಕನ್ನಡದ ಮೇಲೆ ಅಪಾರ ಗೌರವಗಳನ್ನು ಅಭಿಮಾನವನ್ನು ಇಟ್ಟುಕೊಂಡಂತಹ ಮಹಾನ್ಯೋಗಿಗಳು ಅವರ ಹೆಸರ ಮೇಲೆ ಕನ್ನಡ ಪುಸ್ತಕ ಪರಿಷತ್ತಿನವರು ಪ್ರಶಸ್ತಿಯನ್ನು ನಿರ್ಮಾಣ ಮಾಡಿ ಯೋಗ್ಯ ವ್ಯಕ್ತಿಗಳಿಗೆ ನೀಡುತ್ತಿರುವ ಕಾರ್ಯ ಅತ್ಯಂತಶ್ಲಾಘನೀಯವಾಗಿದೆ ಎಂದರು.
ನಂತರ ಮಹಾವಿದ್ಯಾಲಯದ ಎಲ್ಲಾ ಉಪನ್ಯಾಸಕ ಬಳಗದವರು ಪ್ರಶಸ್ತಿ ವಿಜೇತ ಎ. ಆರ್. ಹೆಗ್ಗನದೊಡ್ಡಿ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಉಪನ್ಯಾಸಕರಾದ ಎಸ್.ಎ. ಪಾಟೀಲ, ಬಿ.ಎಸ್ ಬಿರಾದಾರ, ಆರ್. ಬಿ.ಹೊಸಮನಿ, ಎಂ. ಎನ್. ಅಜ್ಜಪ್ಪ, ಎಸ್. ಪಿ.ಬಿರಾದಾರ, ಎಫ್.ಎ. ಹಾಲಪ್ಪನವರ, ಮುಕ್ತಾಯಕ್ಕ ಕತ್ತಿ, ಡಾ. ಶಾಂತಿಲಾಲ ಚೌಹಾನ, ಸತೀಶ ಬಸರಕೋಡ, ಸಿದ್ದಲಿಂಗ ಕಿಣಗಿ, ಎ ಆರ್ ಸಿಂದಗಿಕರ, ಗಂಗಾರಾಮ ಪವಾರ, ಜ್ಯೋತಿ ಚನ್ನೂರ ಮತ್ತು ಸಂಗಮೇಶ ಜೋಶಿ, ರವಿ ಉಪ್ಪಾರ, ಭಗವಾನ ದಾಸ, ಚೆನ್ನಪ್ಪ ಲಾಲಸಂಗಿ, ಮಲ್ಲಿಕಾರ್ಜುನ ಕಲಾಲ, ಶಿವಕುಮಾರ್ ಬಾಡ ಸೇರಿದಂತೆ ಅನೇಕರು ಇದ್ದರು