- Advertisement -
ಮನೆ ಅಂಗಳದಲ್ಲಿ ಅರಳುವ ನಂಜು ಬಟ್ಟಲು ಹೂವು ಗಳನ್ನು ಪೇಸ್ಟ್ ಮಾಡಿ ಸ್ವಚ್ಛ ವಾಗಿ ತೊಳೆದ ಬಿಳಿ ಬಟ್ಟೆಗೆ ಹಚ್ಚಿ ಒಣಗಿಸಿ ಮಾರನೇ ದಿನ ಮತ್ತೆ ಇದೇರೀತಿ ಅದೇ ಬಟ್ಟೆಗೆ ಮತ್ತೋಂದು ಪದರು ಮಾಡಬೇಕು.ಹೀಗೆ ಏಳು ದಿನ ದ ನಂತರ ಅದನ್ನು ಚೆನ್ನಾಗಿ ಹೊಸೆದು ಬತ್ತಿಮಾಡಿ ಹಣತೆ ಯಲ್ಲಿ ಶುದ್ಧ ಹರಳೆಣ್ಣೆ ಅಥವಾ ಎಳ್ಳೆಣ್ಣೆ ಹಾಕಿ ದೀಪ ಹಚ್ಚಿ.
ಮೇಲೆ ಒಂದು ಹಣತೆಯನ್ನು ಸ್ವಲ್ಪ ತುಪ್ಪ ಸವರಿ ದೀಪ ಉರಿಯಲು ಅನುವು ಆಗುವಂತೆ ಮುಚ್ಚಿ. ಮೇಲಿನ ಹಣತೆ ಯಲ್ಲಿ ಕಾಡಿಗೆ ಶೇಖರಿಸಿ.ಇದಕ್ಕೆ ಸ್ವಲ್ಪ ತುಪ್ಪ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.
ಗಾಳಿ ಆಡದಂತೆ ಚಿಕ್ಕ ಡಬ್ಬಿಯಲ್ಲಿ ಇಟ್ಟುಕೊಳ್ಳಬೇಕು. ಇದನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣಿಗೆ ತಂಪು ಮತ್ತು ಆಕರ್ಷಕ. ಮಾರುಕಟ್ಟೆ ಯಲ್ಲಿ ಸಿಗುವ ಪೆಟ್ರೋಲಿಯಂ ಉತ್ಪನ್ನಗಳ ಕೃತಕ ಕಪ್ಪು ಅಲ್ಲ.
- Advertisement -
ಸುಮನಾ ಮಳಲಗದ್ದೆ 9980182883.