ವಂಚನೆ ಆರೋಪ: ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಬಂಧನ

Must Read

ಬೀದರ – ನಗರದ ಡಿಸಿಸಿ ಬ್ಯಾಂಕಿಗೆ ಸುಳ್ಳು ಮಾಹಿತಿ ಕೊಟ್ಟು, ಸಾರ್ವಜನಿಕರ ಹಣ ವಂಚಿಸಿರುವ ಆರೋಪದಡಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ (ಎನ್‌ಎಸ್‌ಎಸ್‌ಕೆ) ಅಧ್ಯಕ್ಷ ಡಿ.ಕೆ. ಸಿದ್ರಾಮ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಜನವಾಡ ಠಾಣೆ ಪೊಲೀಸರು ಶುಕ್ರವಾರ ಬೆಳಿಗ್ಗೆ ಭಾಲ್ಕಿಗೆ ತೆರಳಿ, ಡಿ.ಕೆ.ಸಿದ್ರಾಮ ಅವರನ್ನು ಅವರ ನಿವಾಸದಲ್ಲಿ ವಶಕ್ಕೆ ಪಡೆದರು. ಆನಂತರ ಅವರನ್ನು ಬೀದರ್‌ ಜಿಲ್ಲಾ ನ್ಯಾಯಾಲಯದ ಎದುರು ಹಾಜರುಪಡಿಸಿದರು. ನ್ಯಾಯಾಲಯವು ಸಿದ್ರಾಮ ಅವರನ್ನು 14 ದಿನಗಳ ಕಾಲ
ಬಂಧನಕ್ಕೆ ಒಪ್ಪಿಸಿ ಆದೇಶಿಸಿತು.

ಬಂಧನ ಪ್ರತಿಭಟಿಸಿ ಡಿಕೆ ಸಿದ್ದರಾಮ ಅವರು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ವಿರುದ್ಧ ವಾಗ್ದಾಳಿ ನಡೆಸಿದರು.

ಈಶ್ವರ ಖಂಡ್ರೆ ಕಾನೂನು ದುರುಪಯೋಗ ಮಾಡಿಕೊಂಡಿದ್ದು ನನಗೆ  ಧಮಕಿ ಹಾಕುತ್ತಾರೆ.. ಸಿಐಡಿಗೆ ಒಪ್ಪಿಸಿ ತನಿಖೆ ಮಾಡಿಸುತ್ತಾರೆ ಎಂದು ಹೇಳಿದ್ದಾರೆ ನಾವು ಏನು ತಪ್ಪು ಮಾಡಿಲ್ಲ ಅವರು ಸಿಐಡಿಗೆ ಕೊಡಲಿ, ಸಿಬಿಐಗೆ ಕೊಡಲಿ ನಾವು ಹೆದರುವುದಿಲ್ಲ. ಎಲ್ಲವೂ ಬ್ಯಾಂಕ್ ಮೂಲಕ ವ್ಯವಹಾರ ನಡೆದಿದೆ. ರೈತರಿಗೆ ಪಾವತಿಯಾಗಿರುವ ಹಣದಲ್ಲಿಯೂ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿದರು

ಯಾರ್‍ಯಾರ ವಿರುದ್ಧ ಪ್ರಕರಣ?:                                              ಹಣ ವಂಚನೆಗೆ ಸಂಬಂಧಿಸಿದಂತೆ ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ, ಮಾಜಿ ವ್ಯವಸ್ಥಾಪಕ ಅಪರಂಜಿ ಬಿ.ಎಸ್‌., ಡಿಸಿಸಿ ಬ್ಯಾಂಕಿನ ಮಾಜಿ ಸಿಇಒ ಮಹಾಜನ್‌ ಮಲ್ಲಿಕಾರ್ಜುನ, ಬ್ಯಾಂಕಿನ ಮಾಜಿ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ, ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಸದಾಶಿವ ಪಾಟೀಲ, ಇಮಾಮಪುರ ಡಿಸಿಸಿ ಬ್ಯಾಂಕಿನ ಶಾಖೆ ಮಾಜಿ ವ್ಯವಸ್ಥಾಪಕ ಸೈಯದ್‌ ರಾಹಿಲ್‌ ಅಹಮ್ಮದ್‌, ಎನ್‌ಎಸ್‌ಎಸ್‌ಕೆ ಇತರೆ ನಿರ್ದೇಶಕರ ವಿರುದ್ಧ ಜನವಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group