ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ

0
323

ಸರ್ಕಾರಿ ಶಾಸಕರ ಮಾದರಿ ಶಾಲೆ ಗುರ್ಲಾಪುರ ದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮ ದಿ. 9 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಜಿ ಆರ್ ಪತ್ತಾರ ಸಮೂಹ ಸಂಪನ್ಮೂಲ ವ್ಯಕ್ತಿಗಳು ಮೂಡಲಗಿ ಮಾತನಾಡಿ ನಮ್ಮ ಸಂವಿಧಾನ ನಮ್ಮ ಹೆಮ್ಮೆ ನಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಜೊತೆಗೆ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡುವುದರ ಮೂಲಕ ಮಕ್ಕಳಿಗೆ ಅರಿವು ಮೂಡಿಸಿದರು. 

ಬಿ ವಾಯ ಮೋಮಿನ ಅವರು ಮಕ್ಕಳಿಗೆ ಸಂವಿಧಾನ ಮಾಹಿತಿ ನೀಡುತ್ತಾ ಕೆಲವು ಪ್ರಶ್ನೆಗಳನ್ನು ಕೇಳುತ್ತಾ ಮಕ್ಕಳಿಗೆ ಪ್ರೇರಣೆ ಮಾಡಿದರು. 

ಈ ಸಂದರ್ಭದಲ್ಲಿ ಶ್ರೀಮತಿ ಎ ಡಿ ಪಡಗಾನೂರ್, ಶ್ರೀಮತಿ ಎಸ್ ಜಿ ರಾಮದುರ್ಗ ಮೇಡಂ, ಎಲ್ ಆರ್ ಸಾಲಿಮಠ ಸರ್ ಹಾಗೂ ಅತಿಥಿ ಶಿಕ್ಷಕಿಯರಾದ ಶ್ರೀಮತಿ ಕೆಂಪವ್ವ ಪಾಟೀಲ್, ಶ್ರೀಮತಿ ಜ್ಯೋತಿ ಕಲ್ಯಾಣಿ , ಕುಮಾರಿ ವಿದ್ಯಾಶ್ರೀ ನೇಮಗೌಡರ ಇದ್ದರು. ಕೊನೆಯಲ್ಲಿ ಎಸ ಬಿ ದರೂರ ಮಾತನಾಡಿ ನಮ್ಮ ಸಂವಿಧಾನ ಶಿಲ್ಪಿ ಡಾ// ಬಿ ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಬಗ್ಗೆ , ಅವರು ಕೊಟ್ಟ ಕೊಡುಗೆ ಬಗ್ಗೆ ಮಾತನಾಡಿ ಕಾರ್ಯಕ್ರಮದಲ್ಲಿ ಎಲ್ಲರನ್ನು ವಂದಿಸಿದರು. ಈ ಸಂದರ್ಭದಲ್ಲಿ ಎಲ್ಲಾ ತರಗತಿ ಮಕ್ಕಳು ಹಾಜರಿದ್ದರು.