ಮೂಡಲಗಿ: ಅಪ್ಪಟ ಗ್ರಾಮೀಣ ಕ್ರೀಡೆಯಾದ ಕುಸ್ತಿಗೆ ಉತ್ತರ ಕರ್ನಾಟಕದ ಭಾಗದಲ್ಲಿ ಎಲ್ಲಿಲ್ಲದ ಮಹತ್ವವಿದೆ. ಈ ಭಾಗದ ಯಾವುದೇ ಜಾತ್ರೆ ನಡೆಯಲಿ ಅಲ್ಲಿ ಕ್ರೀಡೆಯಾಗಿ ಕುಸ್ತಿ ಇರಲೇಬೇಕು. ಕುಸ್ತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಜಾತ್ರೆಗಳಲ್ಲಿ ಹಿರಿಯರು ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಶ್ಲಾಘಿಸಿದರು.
ಮೇ 30-ಮಂಗಳವಾರ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಶ್ರೀ ದ್ಯಾಮವ್ವದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿಗೆ ಚಾಲನೆ ನೀಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಕ್ರೀಡೆಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಕಾಣುತ್ತೇವೆ. ಗ್ರಾಮೀಣ ಜನರು ಜಾತಿ ಭೇದ ಮರೆತು ಎಲ್ಲರೂ ಒಂದಾಗಿ ಜಾತ್ರೆಗಳನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ. ಇದು ನಮ್ಮ ಹಿರಿಯರ ಕಾಲದಿಂದ ಬಂದ ಪರಂಪರೆಯನ್ನು ನಾವೆಲ್ಲರೂ ಕೂಡಿ ಒಂದಾಗಿ ಜಾತ್ರೆಗಳನ್ನು ಆಚರಿಸೋಣ ಎಂದರು.
17 ವರ್ಷಗಳ ನಂತರ ನಡೆಯುತ್ತಿರುವ ಈ ಜಾತ್ರಾ ಮಹೋತ್ಸವವು ಹಳ್ಳೂರ, ಶಿವಾಪೂರ ಹಾಗೂ ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮಗಳ ಭಕ್ತರು ಕೂಡಿ ವಿಜೃಂಭಣೆಯಿಂದ ಆಚರಿಸುತ್ತಾ ಭಂಡಾರದಲ್ಲಿ ಮಿಂದೇಳುವುದು ಒಂದು ವಿಶೇಷ. ಗ್ರಾಮದಲ್ಲಿ ದೇವಿಯ ಹೊನ್ನಾಟವಾಡುತ್ತಾ ಮನೆ ಮನೆಯಲ್ಲಿ ಉಡಿ ತುಂಬಿಸಿಕೊಳ್ಳುವ ಕಾರ್ಯಕ್ರಮ ಅದ್ದೂರಿಯಿಂದ ನಡೆಯುತ್ತಿರುವ ದೃಶ್ಯವನ್ನು ಜನತೆ ಕಣ್ತುಂಬಿಕೊಂಡು ದೇವಿಯ ದರ್ಶನ ಪಡೆದು ಭಕ್ತಿ-ಭಾವ ಮರೆಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮಳೆ, ಬೆಳೆ ಚನ್ನಾಗಿ ಬಂದು ರೈತರ ಮೊಗದಲ್ಲಿ ಮಂದಹಾಸ ಮೂಡಲೆಂದು ಗ್ರಾಮದೇವತೆಯಲ್ಲಿ ಪ್ರಾರ್ಥಿಸುತ್ತೇನೆಂದರು.
ಇದೇ ಸಂದರ್ಭದಲ್ಲಿ ಶ್ರೀ ದ್ಯಾಮವ್ವ ದೇವಿ ಟ್ರಸ್ಟ್ ಕಮಿಟಿ ವತಿಯಿಂದ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ, ಪಂಜಾಬ, ಹರಿಯಾಣ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಿಂದ 90 ಜನ ಪುರುಷ ಹಾಗೂ ಮಹಿಳಾ ಕ್ರೀಡಾ ಪಟುಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಾಳೇಶ ಶಿವಾಪೂರ, ಶ್ರೀಕಾಂತ ಕೌಜಲಗಿ, ಸುರೇಶ ಮಗದುಮ್ಮ, ಲಕ್ಷ್ಮಣ ಹೊಸಮನಿ, ನಿಂಗಪ್ಪ ಪಿರೋಜಿ, ಪ್ರಕಾಶ ಮಾದರ, ಡಾ. ಬಸವರಾಜ ಪಾಲಭಾಂವಿ, ಕುಮಾರ ಗಿರಡ್ಡಿ, ಶಿವಗೌಡ ಪಾಟೀಲ, ಕೆಂಪಣ್ಣ ಮುಧೋಳ, ಈಶ್ವರ ಬೆಳಗಲಿ, ಪರಗೌಡ ಪಾಟೀಲ, ಕುಮಾರ ಲೋಕನ್ನವರ, ಮುರಿಗೆಪ್ಪ ಮಾಲಗಾರ, ಮಲ್ಲು ಗೋಡಿಗೌಡರ, ಮಹಾಂತೇಶ ಕುಡಚಿ, ಸುರೇಶ ಕತ್ತಿ, ಸಂಗಮೇಶ ಕೌಜಲಗಿ, ಕೆಂಪಣ್ಣ ಅಂಗಡಿ, ಶಿವಪ್ಪ ಕೌಜಲಗಿ, ಪರಪ್ಪ ಗಿರೆಣ್ಣವರ, ಗೀರಿಶ ಗೋಡಿಗೌಡರ, ಶಿವಪ್ಪ ನಿಡೋಣಿ, ರಾಮಗೌಡ ಪಾಟೀಲ, ದುಂಡಪ್ಪ ಬಡಿಗೇರ, ಸೇರಿದಂತೆ ದೇವಸ್ಥಾನದ ಟ್ರಸ್ಟ್ ಕಮೀಟಿ ಸದಸ್ಯರು ಉಪಸ್ಥಿತರಿದ್ದರು.