ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ

Must Read

ಬೆಳಗಾವಿ – ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದಲ್ಲಿ  ಗ್ರಂಥಾಲಯ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಷಾನ ವಿಭಾಗದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಆಚರಿಸಲಾಯಿತು.

ಕಾರ‍್ಯಕ್ರಮದ ಅಂಗವಾಗಿ ದಿನಾಂಕ:೧೪/೧೧/೨೦೨೪ ರಂದು ಉಪ ನಿರ‍್ದೇಶಕರು,ನಗರ ಕೇಂದ್ರ ಗ್ರಂಥಾಲಯ ಬೆಳಗಾವಿ. ರಾಮಯ್ಯ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪುಸ್ತಕ ಪ್ರದರ್ಶನ  ಉದ್ಘಾಟಿಸುವ ಮೂಲಕ “Read a book” ಎಂಬ ಶೀರ್ಷಿಕೆಯಡಿ ರ‍್ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ ನೀಡಿದರು.

ಗ್ರಂಥಪಾಲಕರಾದ ವಿ.ಎಮ್‌. ಬಂಕಾಪುರ ಇವರು ಅಧ್ಯಕ್ಷೀಯ ನುಡಿ ನುಡಿದರು. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದಲ್ಲಿ, ವಿವಿಧ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅದರ ಸದುಪಯೋಗ ಪ್ರತಿಯೊಬ್ಬರು ಪಡೆಯಬೇಕು ಅಲ್ಲದೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಉಪ ಗ್ರಂಥಪಾಲಕರಾದ ಡಾ. ಸುಮನ ಮುದ್ದಾಪೂರ ಇವರು ಸ್ವಾಗತಿಸಿದರು. ಡಾ. ರಮೇಶ ಕುರಿ ಹಾಗೂ ಎಲ್ಲ ಸಿಬ್ಬಂದಿಗಳು, ವಿದ್ಯಾರ‍್ಥಿಗಳು ಮತ್ತು ಸಂಶೋಧನಾ ವಿದ್ಯಾರ‍್ಥಿಗಳು ಉಪಸ್ಥಿತರಿದ್ದರು. ಅಶ್ವಿನಿ ಲಠ್ಠೆ ನಿರೂಪಿಸಿದರು, ಸೋಮನಗೌಡ ಪಾಟೀಲ ವಂದನಾರ‍್ಪನೆ ಮಾಡಿದರು.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group