spot_img
spot_img

ಬೌದ್ಧ ಸಾಹಿತ್ಯ – ಹಲವು ನೆಲೆಗಳು’ ರಾಷ್ಟ್ರೀಯ ವಿಚಾರ ಸಂಕಿರಣ

Must Read

spot_img
   ಕಲಬುರ್ಗಿಯ ಪಾಲಿ ಇನ್ಸ್ಟಿಟ್ಯೂಟ್ ಮತ್ತು ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಸ್ಕೂಲ್ ಆಫ್ ಕಾಮರ್ಸ್ ಕನ್ನಡ ಭಾಷಾ ವಿಭಾಗದ ಸಹಯೋಗದಲ್ಲಿ ಆಗಸ್ಟ್ 3, 2024, ಶನಿವಾರ  ಜಯನಗರ 9ನೇ ಬ್ಲಾಕ್ ನಲ್ಲಿರುವ ಜೈನ್ ವಿವಿಯ ಜೆಜಿಐ ನಾಲೆಡ್ಜ್ ಕ್ಯಾಂಪಸ್ ಕಾನ್ಫರೆನ್ಸ್ ಹಾಲ್ನಲ್ಲಿ  ‘ಬೌದ್ಧ ಸಾಹಿತ್ಯ : ಹಲವು ನೆಲೆಗಳು’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು
ವಿಚಾರ ಸಂಕಿರಣದ ಉದ್ಘಾಟನೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಮುಡ್ನಾಕೂಡು ಚಿನ್ನಸ್ವಾಮಿ ಮಾಡಿ ಮಾತನಾಡುತ್ತ, ಬೌದ್ಧ ಸಾಹಿತ್ಯ ಪುರಾತನ ಬುದ್ದಿವಂತಿಕೆಯ ಸಂಪತ್ತು, ಬುದ್ಧ ವಚನಗಳು ಪಾಲಿ ಭಾಷೆಯಲ್ಲಿದೆ ತ್ರಿಪಿಟಿಕ ಎಂಬ ಸಾಹಿತ್ಯ ವಿನಯ, ಸುತ್ತ, ಅಭಿಧಮ್ಮ ಎಂದು ವಿಗಂಡಿಸಲಾಗಿದೆ. ಜಗತ್ತಿನ ಮೊಟ್ಟ ಮೊದಲ ಮನಶಾಸ್ತ್ರಜ್ಞ ಬುದ್ಧ ಉಪದೇಶಿಸಿದ್ದು ಮಧ್ಯಮಮಾರ್ಗ ಯಾವುದು ಶಾಶ್ವತ ವಲ್ಲ :ಎಲ್ಲವೂ ಬದಲಾಗುತ್ತದೆ. ದುಃಖ ಹೋಗಲಾಡಿಸಿ ಸುಖ ಪಡೆಯಲು ಬುದ್ಧನ ಚಿಂತನೆ ಗಳು ಸ್ಥಾಯಿ ಯಾದ ಕತ್ತಲೆ ಯಲ್ಲಿ ಸೂರ್ಯ ನಂತೆ ಬೆಳಕಾಗಿ ಕಾಣುತ್ತದೆ. ವೈಚಾರಿಕತೆಯ ಬೌದ್ಧ ಸಾಹಿತ್ಯ   ಭವಿಷ್ಯತ್ತಿನ ಧರ್ಮ ಎಂದು ಪ್ರಸಿದ್ಧ ವಿಜ್ಞಾನಿ ಐನ್ ಸ್ಟೀನ್ ಮಾತು ಸಾರ್ವಕಾಲಿಕ ಎಂದು ಅಭಿಪ್ರಾಯ ಪಟ್ಟರು.
     ಜೈನ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರವೀಂದ್ರ ಭಂಡಾರಿ, ಜೈನ್ (ಡೀಮ್ಡ್ ಟು ಬಿ ಯುನಿವರ್ಸಿಟಿ) ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದರು.
ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಭಾಷಾ ವಿಭಾಗದ ಮುಖ್ಯಸ್ಥೆ ಡಾ. ರಜನಿ ಜೈರಾಮ್ ಅಧ್ಯಕ್ಷತೆ ವಹಿಸಿದ್ದರು.
 ಸಮಾರಂಭದಲ್ಲಿ ಸ್ಕೂಲ್ ಆಫ್ ಕಾಮರ್ಸ್ ಕನ್ನಡ ಭಾಷಾ ವಿಭಾಗದ ಸಂಚಾಲಕಿ ರಾಜೇಶ್ವರಿ ವೈ. ಎಂ. ಆಶಯ ನುಡಿಗಳನ್ನಾಡಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಪಾಲಿ ಇನ್ಸ್ಟಿಟ್ಯೂಟ್ ನ ನಿರ್ದೇಶಕರಾದ ಪ್ರೊ ಮಲ್ಲೇಪುರಂ ಜಿ ವೆಂಕಟೇಶರವರು ‘ಬೌದ್ಧ ಸಾಹಿತ್ಯ ಪೂರ್ವಾಪರಗಳು’ ಕುರಿತು ಸಂವಾದ ನಡೆಕೊಟ್ಟರು.
ಬೆಂಗಳೂರು ಮಹಾಬೋಧಿ ಸೊಸೈಟಿ ತ್ರಿಪಿಟಿಕ ಗ್ರಂಥಮಾಲಾ ಯೋಜನೆಯ ನಿರ್ದೇಶಕ ಡಾ. ಬಿ. ವಿ. ರಾಜಾರಾಮ್ ‘ಬೌದ್ಧ ಸುತ್ತಸಾಹಿತ್ಯ’ ಕುರಿತು ವಿಚಾರ ಮಂಡಿಸುವವರು. ಬಸವೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯೆ  ಡಾ. ಶೀಲಾದೇವಿ ಮಳಿಮಠ ಹಾಗೂ ವಿಜಯ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್. ಎಲ್. ಮಂಜುನಾಥ್ ಪ್ರತಿಕ್ರಿಯಿಸಿದರು.ಬೌದ್ಧ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣದ ಸಂಚಾಲಕ ರಾಜಕುಮಾರ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಟಿ. ಎನ್. ವಾಸದೇವಮೂರ್ತಿ ‘ಧಮ್ಮಪದ ಸಾಹಿತ್ಯ’ ಕುರಿತು ವಿಚಾರ ಮಂಡಿಸಿದರು.
ವಿಜಯ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕಿ ಡಾ.ಅರ್ಚನಾ ಹಾಗೂ ಎನ್ಎಂಕೆಆರ್ವಿ ಮಹಿಳಾ ವಿದ್ಯಾಲಯದ ಮುಖ್ಯಸ್ಥೆ ಡಾ. ಸಂಧ್ಯಾ ಹೆಗಡೆ ಪ್ರತಿಕ್ರಿಯಿಸಿದರು
‘ಜಾತಕ ಕಥಾ ಸಾಹಿತ್ಯ’ದ ಬಗ್ಗೆ ಬೌದ್ಧ ವಿದ್ವಾಂಸರಾದ ಮೊಳಕಾಲ್ಮೂರು  ಶ್ರೀನಿವಾಸಮೂರ್ತಿ ವಿಚಾರ ಮಂಡಿಸಿದರು . ಎಸ್ಎಸ್ಎಂಆರ್ ವಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಪ್ರತಿಮಾ ವಿಜಯ್  ಹಾಗೂ ಕ್ರಿಸ್ತ ಜಯಂತಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಕುಪ್ಪನಹಳ್ಳಿ ಎಂ. ಭೈರಪ್ಪ ಪ್ರತಿಕ್ರಿಯಿಸಿದರು.
- Advertisement -
- Advertisement -

Latest News

ಸಾಮಾಜಿಕ ಕ್ರಾಂತಿಗೆ ಸಿದ್ಧರಾಮೇಶ್ವರ ಕೊಡುಗೆ ಮಹತ್ತರವಾದುದು – ಸಿದ್ಧಲಿಂಗ ಕಿಣಗಿ

ಸಿಂದಗಿ; ೧೨ ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು, ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group