ಬೀದರ – ಜಿಲ್ಲೆಯ ಹುಮನಾಬಾದ್ ನಲ್ಲಿ ಸ್ಥಳೀಯ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಯಿತು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸರಸ್ವತಿದೇವಿ ಮತದಾನ ಅತ್ಯಂತ ಪವಿತ್ರ ಹಾಗೂ ದೇಶದ ಪ್ರತಿಯೊಬ್ಬ ಅರ್ಹ ನಾಗಕರಿಕರ ಶ್ರೇಷ್ಠವಾದ ಕರ್ತವ್ಯ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಅಪ್ಪಾಸಾಹೆಬ ನಾಯಕ, ಗ್ರೇಡ(2) ತಹಶೀಲ್ದಾರ್ ಜಯಶ್ರೀ, ತಾ.ಪಂ ಇ.ಒ ಮುರಗೆಪ್ಪ, ಬಿಇಒ ಶಿವಗುಂಡಪ್ಪ ಸಿದ್ದಣ್ಗೋಳ್, ಉಪ ಖಜಾನೆ ಅಧಿಕಾರಿ ಮಾಣಿಕ ನೇಳಗಿ ಮತ್ತಿತರರು ಮಾತನಾಡಿದರು.
ತಹಶೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.