ರಾಯಬಾಗ ತಾಲೂಕಿನ ಹಾರೂಗೇರಿ ಹಾಗೂ ಹಾರೂಗೇರಿ ಕ್ರಾಸ್ ಗಳು ಅತ್ಯಂತ ವೇಗವಾಗಿ ಬೆಳೆಯುತ್ತಿವೆ. ಒಂದು ರೀತಿಯಲ್ಲಿ ಮಹಾರಾಷ್ಟ್ರ ದ ಗಡಿ ಪ್ರದೇಶ ಎನ್ನಿಸಿಕೊಳ್ಳುವ ಈ ಎರಡೂ ಸ್ಥಳಗಳಿಗೆ ಕರ್ನಾಟಕ, ಮಹಾರಾಷ್ಟ್ರ ದ ಜನರು ಸಾಕಷ್ಟು ಪ್ರಮಾಣದಲ್ಲಿ ಭೇಟಿ ಕೊಡುತ್ತಾರೆ. ಅದರಲ್ಲೂ ಹಾರೂಗೇರಿ ಕ್ರಾಸ್ ನಲ್ಲಿ ನಾಲ್ಕು ಕೂಡು ರಸ್ತೆಗಳಿದ್ದು ಗೋಕಾಕ, ಅಥಣಿ, ಜಮಖಂಡಿ ಹಾಗೂ ಮೀರಜ್ ಗೆ ಗೆ ಹೋಗುವ ಬಸ್ ಗಳು ನಿಲುಗಡೆಯಾಗುತ್ತವೆ.
ಮೀರಜ್ ಗೆ ಆಸ್ಪತ್ರೆಗೆ ಹೋಗುವ ಜನರು, ಸಾಂಗಲಿಗೆ ವ್ಯವಹಾರ ಉದ್ದೇಶದಿಂದ ಹೋಗುವವರು ಹಾರೂಗೇರಿ ಕ್ರಾಸ್ ನಲ್ಲಿ ಇಳಿದು ಜಮಖಂಡಿ ಯಿಂದ ಬರುವ ಬಸ್ ಗಾಗಿ ಕಾಯುತ್ತಾರೆ ಆದರೆ ಬಸ್ ಬರುವುದರೊಳಗೇ ನೈಸರ್ಗಿಕ ಕರೆ ಏನಾದರೂ ಬಂದರೆ ತೊಂದರೆ ತಪ್ಪಿದ್ದಲ್ಲ.
ಕ್ರಾಸ್ ನಲ್ಲಿ ಸಾಕಷ್ಟು ಜನಜಂಗುಳಿ ಇದ್ದರೂ ಇಲ್ಲಿಂದ ಹೊರಡುವ ಜನರಿಗೆ ಮೂತ್ರಾಲಯ ಇಲ್ಲ. ಮೂತ್ರ ಮಾಡಬೇಕೆನ್ನುವವರು ಎಷ್ಟೋ ಅಂಗಡಿ, ಮನೆಗಳನ್ನು ದಾಟಿಕೊಂಡು ಹೊಲದಲ್ಲಿ ಹೋಗಬೇಕಾಗುತ್ತದೆ. ಅಷ್ಟರಲ್ಲಿ ಬಸ್ ಬಂದು ಬಿಡುತ್ತದೆಯೇನೋ ಎಂಬ ಆತಂಕ ಕಾಡುತ್ತದೆ.
ಹಾರೂಗೇರಿ ಪುರಸಭೆಯವರು ಈ ಬಗ್ಗೆ ವಿಚಾರ ಮಾಡಬೇಕು. ಅತಿ ಅಗತ್ಯದ ಬೇಡಿಕೆಯಾದ ಮೂತ್ರಾಲಯವನ್ನು ಹಾರೂಗೇರಿ ಕ್ರಾಸ್ ನಲ್ಲಿ ಆದಷ್ಟು ಬೇಗ ನಿರ್ಮಾಣ ಮಾಡಬೇಕು. ಮೂತ್ರಾಲಯವನ್ನು ಬರೀ ನಿರ್ಮಾಣ ಮಾಡಿದರೆ ಸಾಲದು ಅದು ಸ್ವಚ್ಛವಾಗಿರುವಂತೆ ನಿರ್ವಹಣೆ ಮಾಡುವುದು ಕೂಡ ಅಷ್ಟೇ ಮುಖ್ಯವಾದದ್ದು.
ಪುರಸಭೆಯವರು ಇತ್ತ ಗಮನ ಕೊಡುವರೇ ?
ಉಮೇಶ ಬೆಳಕೂಡ 9448863309