ಯುಗಾದಿ ಬಂತೆಂದರೆ ಬೇವು ಕೂಡ ಹೂ ಬಿಟ್ಟು ಪರಿಮಳ ಸೂಸುತ್ತದೆ. ಮಾವಿನ ಜೊತೆಯಲ್ಲಿ ತೋರಣಕ್ಕೆ ಮತ್ತು ಬೇವು ಬೆಲ್ಲವನ್ನು ತಿನ್ನುವುದು ನಮ್ಮ ಹಿರಿಯರು ರೂಡಿಸಿಕೊಂಡು ಬಂದ ಪದ್ಧತಿ. ಆರೋಗ್ಯಕ್ಕಾಗಿ ಅವರು ಕೊಡುವ ಮಹತ್ವ ಆಶ್ಚರ್ಯಕರವಾಗಿರುತ್ತದೆ.
ಬೇವಿನ ಮರ ಎಲೆ ಹೂವು ಕಾಯಿ ಬೇರು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.
ಬೇಸಿಗೆ ಕಾಲಕ್ಕೆ ಬೇವಿನ ಮರ ತಂಪು ಎಂದು ಜಾನಪದ ನಾಣ್ಣುಡಿ ಇದೆ.
ಬೇವಿನ ಹಿಂಡಿ ಗಿಡ ಗಳಿಗೆ ಬೇರು ಹುಳು ತಿನ್ನುವುದರಿಂದ ಮುಕ್ತಿ ಕೊಡುತ್ತದೆ.
ಜಾನುವಾರು ಉಗುಣ, ನೊಣ,ಸೊಳೆ,…. ನಿವಾರಣೆ ಅಂತೂ ಬೇವು ವ್ಯವಸಾಯದ ಮಿತ್ರ.
- ಊರಲ್ಲಿ ಸಿಡುಬು ಬಂದಾಗ ಬೇವಿನ ಎಲೆಗಳನ್ನು ನೀರಿನಲ್ಲಿ ಅರೆದು ಸೇವಿಸುವುದರಿಂದ ಸಿಡುಬನ್ನು ತಡೆಗಟ್ಟಬಹುದು ಮತ್ತು ಬೇವಿನ ಎಲೆಗಳನ್ನು ನೀರಿನಲ್ಲಿ ಅರೆದು ಕುಡಿಯುವುದರಿಂದ ಸಿಡುಬಿನ ತೀವ್ರತೆ ಹೆಚ್ಚುವುದಿಲ್ಲ.
- ಬೇವಿನ ಎಲೆಗಳನ್ನು ತುಪ್ಪದಲ್ಲಿ ಹುರಿದು ಸೇವಿಸುವುದರಿಂದ ಗಾಯ ಗುಣವಾಗುತ್ತದೆ.
- ಬೇವಿನ ಎಣ್ಣೆಯನ್ನು ಹೊಟ್ಟೆಗೆ ತೆಗೆದುಕೊಳ್ಳುವುದು ಮತ್ತು ಹಚ್ಚುವುದರಿಂದ ಚರ್ಮರೋಗ ಬೇಗನೆ ಗುಣವಾಗುತ್ತದೆ.
- ಬೇರನ್ನು ನೀರಿನಲ್ಲಿ ತೈದು ಹಚ್ಚುವುದರಿಂದ ಮೊಡವೆ ಗುಣವಾಗುತ್ತದೆ. ಇದಕ್ಕಾಗಿ ವಿಶೇಷವಾಗಿ ತಯಾರಿಸಲು ನನ್ನಲ್ಲಿ ಇದೆ.
- ಒಂದು ಒಳಮುಷ್ಟಿ ಎಷ್ಟು ಸೊಪ್ಪನ್ನು ಜೇನಿನೊಂದಿಗೆ ಸೇವಿಸುವುದರಿಂದ ಮಲೇರಿಯಾ ಜ್ವರ ಗುಣವಾಗುತ್ತದೆ.
- ಎಳೆಯ ರಸವನ್ನು ಸ್ವಲ್ಪ ಬೆಚ್ಚಗೆ ಮಾಡಿ ಎಡಕಣ್ಣು ನೋವಿದ್ದರೆ ಬಲ ಕಿವಿಗೆ ಬಲ ಕಣ್ಣು ನೋವಿದ್ದರೆ ಎಡ ಕಿವಿಗೆ ಬಿಡುವುದರಿಂದ ಕಣ್ಣು ನೋವು ಗುಣವಾಗುತ್ತದೆ.
- ಒಂದು ಸ್ಪೂನ್ ಬೇವಿನ ರಸ ಒಂದು ಸ್ಪೂನ್ ಆಡು ಮುಟ್ಟದ ಸೊಪ್ಪಿನ ರಸ ಒಂದು ಸ್ಪೂನ್ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಕಾಮಾಲೆ ಗುಣವಾಗುತ್ತದೆ.
- ಸೊಪ್ಪಿನ ಅರಸ ದೊಂದಿಗೆ ಉರಿದ ಇಂಗನ್ನು ಸೇರಿಸಿ ಸೇವಿಸುವುದರಿಂದ ಹೊಟ್ಟೆಯ ಕ್ರಿಮಿ ನಾಶವಾಗುತ್ತದೆ.
- ಎಲೆಯ ಬೂದಿಯೊಂದಿಗೆ ಇತರೆ ಔಷಧೀಯ ಮೂಲಿಕೆಯನ್ನು ಸೇರಿಸಿ ನಾನು ತಯಾರಿಸುವ ಔಷಧಿ ಮೂತ್ರದ ಕಲ್ಲನ್ನು ಕರಗಿಸುತ್ತದೆ.
- ಪ್ರತಿದಿನ ಬೇವಿನ ಎಲೆಯೊಂದಿಗೆ ಬಗನೆ ಗಿಡದ ಎಲೆಯನ್ನು ಸೇರಿಸಿ ಹರೆದು ಹಚ್ಚುವುದರಿಂದ ಇಂದ್ರಲುಪ್ತ (ಅಲ್ಲಲ್ಲಿ ಕೂದಲು ಉದುರವುದು) ಗುಣವಾಗುತ್ತದೆ.
- ಎಲೆಗಳನ್ನು ನೀರಿನಲ್ಲಿ ಕುದಿಸಿ ಆರಲು ಬಿಟ್ಟು ಆ ನೀರಿನಿಂದ ತಲೆ ಸ್ನಾನ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಗುಣವಾಗುತ್ತದೆ.
- ಬಾಣಂತಿ ಕೋಣೆಯಲ್ಲಿ ಬೇವಿನ ಸೊಪ್ಪು ಇಡುವುದರಿಂದ ಯಾವುದೇ ದುಷ್ಟ ಶಕ್ತಿ ಪ್ರವೇಶಿಸುವುದಿಲ್ಲ ಮಗು ಮತ್ತು ಬಾಣಂತಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
- ಚಕ್ಕೆಯ ಕಷಾಯವನ್ನು ಪ್ರತಿದಿನ ಸೇವಿಸುವುದರಿಂದ ಮಧುಮೇಹ ಹತೋಟಿಗೆ ಬರುತ್ತದೆ.
- ಮೇಲಿಂದ ಮೇಲೆ ವಾತ ಶೂಲೆ ಇರುವ ಜಾಗಕ್ಕೆ ಬೇರನ್ನು ತೈದು ಲೇಪಿಸುವುದರಿಂದ ವಾತರೋಗ ಶಮನವಾಗುತ್ತದೆ.
- ಕಷಾಯವನ್ನು ಪ್ರತಿದಿನ 21 ಎಲೆಗಳನ್ನು ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ.
- ಬೇವು ಮತ್ತು ಓಮ್ ಅನ್ನು ಸೇರಿಸಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಗುಣವಾಗುತ್ತದೆ.
- ಬೇವಿನ ಕಷಾಯ ಸೇವಿಸುವುದರಿಂದ ಪಿತ್ತ ಗಾದೆ ಗುಣವಾಗುತ್ತದೆ.
- ಬೇವಿನ ಮರದಲ್ಲಿ ಬರುವ ಹಾಲು ಸಿಹಿ ಇರುತ್ತದೆ ಆದರೂ ಇದು ಕ್ಯಾನ್ಸರ್ ರೋಗವನ್ನು ಗುಣಪಡಿಸುತ್ತದೆ.
- ಸೂರ್ಯಾಸ್ತದ ಹೊತ್ತಿಗೆ ಬೇವಿನ ಹೊಗೆ ಹಾಕುವುದರಿಂದ ಸೊಳೆ ಮುಂತಾದ ಕೀಟ ಮನೆಗೆ ಪ್ರವೇಶ ಇರುವುದಿಲ್ಲ.
ಇದು ನನ್ನ ಹಿಂದಿನ ಯುಗಾದಿಯ ಲೇಖನ
ಯುಗಾದಿ ಎಂದರೆ ಮಾವು ಬೇವುಗಳ ಸಮಾಗಮ ಮಾವು ಚಿಗುರಿ ಬಿಟ್ಟು ನಳನಳಿಸುತ್ತಿದೆ ಬೇವು ಹೂ ಬಿಟ್ಟು ಪರಿಮಳ ಸೂಸುತ್ತಿರುತ್ತದೆ. ಎರಡು ವನಸ್ಪತಿಗಳ ಸಂಗಮ. ಮಾವು ಸೌಭಾಗ್ಯ ಸಂಕೇತ ಬೇವು ಆರೋಗ್ಯದ ಸಂಕೇತ. ಇವೆರಡನ್ನು ಮಿಲನ ಮಾಡಿ ಯುಗದ ಆದಿಗೆ ಉಪಯೋಗಿಸಲು ಸೂಚಿಸಿದ ಹಿರಿಯರಿಗೆ ಒಂದು ಸಲಾಂ. ಹಬ್ಬದ ದಿನ ಸಂಭ್ರಮಿಸಿದ ತೋರಣ ವನ್ನು ಔಷಧಿಯಾಗಿಯೂ ಉಪಯೋಗಿಸಬಹುದು. ಮಾವು ಮತ್ತು ಬೇವು ಎರಡೂ ಸೇರಿಸಿ ಮಾಡಿದ ತೋರಣವನ್ನು ಬಾಡಿದ ನಂತರ ಬಿಸಾಡಬೇಡಿ
- ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಪ್ರತಿದಿನ ತೆಗೆದುಕೊಳ್ಳುವುದರಿಂದ ಶುಗರ್ ಹತೋಟಿಗೆ ಬರುತ್ತದೆ.
- ಅರೆಬರೆ ಪುಡಿ ಮಾಡಿ ಹುರಿದು ಬಾಣಲೆಗೆ ಬೆಂಕಿ ಹತ್ತಿದಾಗ ಕೆಳಗಿಳಿಸಿ. ಗಟ್ಟಿ ಮುಚ್ಚಳ ಹಾಕಿ ಇಡಿ.ಇದು ಹೊಗೆ ಬರುತ್ತದೆ ಆದರೆ ಬೆಂಕಿ ಹತ್ತುವುದಿಲ್ಲ.ಪೂರ್ಣ ಬೂದಿ ಆದಾಗ ಗಾಳಿಸಿ ಸ್ವಲ್ಪ ಸೈಂಧವ ಲವಣ ಸೇರಿಸಿ ಪ್ರತಿದಿನ ಬೆಳಿಗ್ಗೆ ಹಲ್ಲು ಉಜ್ಜುವ ಮೂಲಕ ಹಲ್ಲು ನೋವು, ಹಲ್ಲಿನ ಸಮಸ್ಯೆ ಮತ್ತು ವಸಡಿನ ಸಮಸ್ಯೆಗಳು ಗುಣವಾಗುತ್ತದೆ ಆದಷ್ಟು ದಿನ ನಿತ್ಯ ದ ಅನೇಕ ಕಾಯಿಲೆಗಳು ಸಣ್ಣಪುಟ್ಟ ಇಂತಹ ರೇಮಿಡಿ ಮಾಡುವುದರಿಂದ ಗುಣಪಡಿಸಲು ಮತ್ತು ಕಾಯಿಲೆ ಯಿಂದ ದೂರ ಇರಲು ಸಹಕಾರಿ.
ಸುಮನಾ ಮಳಲಗದ್ದೆ 9980182883.