Homeಸುದ್ದಿಗಳುಶಬರಿಮಲೆಯಲ್ಲಿ ನೀರಪುತ್ರಿ ಮಹೋತ್ಸವ : ಬೆಳಗಾವಿ-ಬಾಗಲಕೋಟ ಗುರುಸ್ವಾಮಿಗಳು ಭಾಗಿ

ಶಬರಿಮಲೆಯಲ್ಲಿ ನೀರಪುತ್ರಿ ಮಹೋತ್ಸವ : ಬೆಳಗಾವಿ-ಬಾಗಲಕೋಟ ಗುರುಸ್ವಾಮಿಗಳು ಭಾಗಿ

ಮೂಡಲಗಿ: ಕೇರಳದ ಪವಿತ್ರ ಕ್ಷೇತ್ರ ಶಬರಿಮಲೆಯಲ್ಲಿ ಆಯೋಜಿಸಲಾದ ನೀರಪುತ್ರಿ ಮಹೋತ್ಸವದಲ್ಲಿ ರಾಜ್ಯದ ಬೆಳಗಾವಿ ಮತ್ತು ಬಾಗಲಕೋಟ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಗುರುಸ್ವಾಮಿಗಳು ಅತಿಥಿಗಳಾಗಿ ಬಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾವಹಿಸಿದ್ದ ಅಖಿಲ ಭಾರತ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ರಾಜ್ಯ ಧರ್ಮ ಪ್ರಚಾರಕರಾದ ಬೆಳಗಾವಿಯ ಮಾರುತಿ ಕೋಳಿ ಅವರು ಶಬರಿಮಲೆಯಲ್ಲಿ ನೀರಪುತ್ರಿ ಮಹೋತ್ಸವ ಈ ವರ್ಷ ಬಹಳ ವೈಭವದಿಂದ, ಆಧ್ಯಾತ್ಮಿಕ ಉತ್ಕರ್ಷದಿಂದ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತಮಂಡಳಿಯಿಂದ ಯಶಸ್ವಿಯಾಗಿ ನಡೆಯಿತು. ಯಾತ್ರೆಯು ಕೆರಳದ ಅರನ್ಮುಲ ಪಟ್ಟಣದಿಂದ ಪ್ರಾರಂಭವಾಗಿ ೮೦ ಕಿಲೋಮೀಟರ್ ದೂರದ ಶಬರಿಮಲೆ ಕ್ಷೇತ್ರದವರೆಗೆ ಶರಣು ಘೋಷದೊಂದಿಗೆ ಸಾಗಿದ್ದು ಭಕ್ತರಿಗೆ ಆಧ್ಯಾತ್ಮಿಕ ಶಕ್ತಿಯನ್ನು ತುಂಬಿತು.

ಚೆರುಪುಜಕ್ಕಟ್ಟು ದೇವಿ ದೇವಸ್ಥಾನದ ಪರಿಸರದಲ್ಲಿ ಸಾವಯವ ಕೃಷಿಯ ಮೂಲಕ ಬತ್ತದ ಬೆಳೆಯಲ್ಲಿ ವಿಖ್ಯಾತ ಕಲಾಕಾರ ಎಡಯಾರ್ನ್ಮುಲ ಸುನಿಲ್ ಕುಮಾರ್ ಗುರುವರು ಚಿತ್ರಗಳನ್ನು ಬಿಡಿಸಿದ್ದು ವಿಶೇಷ ಗಮನ ಸೆಳೆಯಿತು. ಕಳೆದ ವರ್ಷ ಬಿಡಿಸಿದ್ದ ಅಯ್ಯಪ್ಪಸ್ವಾಮಿ ಚಿತ್ರದ ನಂತರ ಈ ವರ್ಷ ಶ್ರೀ ಪದ್ಮನಾಭಸ್ವಾಮಿ ಚಿತ್ರವು ಭಕ್ತರಲ್ಲಿ ಭಾವನಾತ್ಮಕ ಉತ್ಸಾಹ ತುಂಬಿತು ಎಂದು ತಿಳಿಸಿದ್ದಾರೆ.

ಮಹೋತ್ಸವದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪಿ. ಎಸ್. ಪ್ರಶಾಂತ್, ಶಬರಿಮಲೆ ತಂತ್ರಿ ಬ್ರಹ್ಮಶ್ರೀ ಶ್ರೀ ಕಂದರರು ರಾಜೀವ, ಅತಿಥಿಗಳಾಗಿ ಅಖಿಲ ಭಾರತ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷ ಬಾಗಲಕೋಟೆಯ ಡಾ. ಲಕ್ಷ್ಮಣ್ ಅಬ್ದುಲ್ಪುರ ಗುರುಸ್ವಾಮಿ, ಬೆಳಗಾವಿಯ ಆನಂದ್ ನಾರಾಯಣ ಶೆಟ್ಟಿ, ವೀರೇಶ್ ಪಾಟೀಲ, ಹೈದರಾಬಾದ್ ಗುಂಪು ಮತ್ತು ಮಾಲ್ತಲಂ ಭಗವತಿ ಪೇಟಂನ ಶಿವ ನರಸಿಂಹನ್, ಅಲೈರ್ ಶಾಸಕ ಬೀರಲ್ಲಯ್ಯ, ಹೈದರಾಬಾದ್ ಮಹಾಶಾಸ್ತ ಸೇವಾ ಸಂಘಮ್ ಸ್ಥಾಪಕ ಅಧ್ಯಕ್ಷ ಡಾ.ಎಸ್. ರಾಜು ಗುರುಸ್ವಾಮಿ ಸೇರಿದಂತೆ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳ ಹಲವಾರು ಜಿಲ್ಲೆಗಳಿಂದ ಭಕ್ತರು ಭಾಗವಹಿಸಿ ಈ ಆಧ್ಯಾತ್ಮಿಕ ಸಮಾರಂಭ ಮಹೋತ್ಸವವನ್ನು ಯಶಸ್ವಿಗೊಳಿಸಿದರು ಎಂದು ಮಾರುತಿ ಕೋಳಿ ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group