ಮೂಡಲಗಿ -ತಾಲೂಕಿನ ಹಳ್ಳೂರ ಗ್ರಾಮದ ಶ್ರೀ ಹಳ್ಳದರಂಗ ಕೋ-ಆಪ್ ಕ್ರೆಕೆಟ್ ಸೊಸಾಯಿಟಿಯು 19 ವರ್ಷಗಳಿಂದ ಜನರೊಡನೆ ಸಹಕಾರ ನೀಡುತ್ತಾ, ಪ್ರಗತಿ ಹೊಂದುತ್ತಾ ಬಂದಿದ್ದು ಈಗ ಸೊಸಾಯಿಟಿಯ ಹೊಸ ಶಾಖೆಯನ್ನು ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಆರಂಭಿಸಲಾಗಿದೆ.
ಶಾಖೆಯ ಉದ್ಘಾಟನಾ ಸಮಾರಂಭ ಸಾನ್ನಿಧ್ಯ ವಹಿಸಿದ ಹಂದಿಗುಂದ ಶ್ರೀ ಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿಗಳು ಮಾತನಾಡುತ್ತ, ಸಂಘ ಸಂಸ್ಥೆಗಳು ಬೆಳೆಯಬೇಕಾದರೆ ಸಹಕಾರ ಅಗತ್ಯ. ಸಾಲಗಾರರು ಸಾಲದ ರೂಪದ ಹಣವನ್ನು ದುರುಪಯೋಗಮಾಡಿಕೊಳ್ಳದೆ ಕೊಟ್ಟ ಮಾತಿನಂತೆ ಸದ್ಭಳಕೆ ಮಾಡಿಕೊಂಡು ಜೀವನ ಆರ್ಥಿಕ ಮಟ್ಟವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ಬ್ಯಾಂಕಿನ ಸಿಬ್ಬಂದಿಗಳು ಗ್ರಾಹಕರೊಡನೆ ಉತ್ತಮ ಬಾಂಧವ್ಯ ಬೆಳೆಸಿ ತಮ್ಮ ನಿಯಮದ ಪ್ರಕಾರ ಸಾಲಗಾರರಿಗೆ ಹೆದರದೆ ಸಾಲದ ಸೌಲಭ್ಯ ಒದಗಿಸಬೇಕು. ಜನರೊಡನೆ ಬೆರೆತು ಸಹಕಾರ ನೀಡುವ ಸಂಘ, ಸಂಸ್ಥೆಗಳು ಮಾತ್ರ ಹೆಮ್ಮರವಾಗಿ ಬೆಳೆಯುತ್ತವೆ. ಈ ಸೊಸಾಯಿಟಿಯು ಇನ್ನೂ ಹೆಚ್ಚು ಹೆಚ್ಚಾಗಿ ಶಾಖೆಗಳು ತೆರೆಯಲಿ, ಹಳ್ಳದರಂಗ ಸೊಸಾಯಿಟಿಯಿಂದ ಎಲ್ಲ ಕ್ಷೇತ್ರದ ಉದ್ಯೋಗಕ್ಕೆ ನೆರವಾಗಲಿ ಎಂದು ಹಾರೈಸಿದರು.
ದಿವ್ಯ ಸಾನ್ನಿಧ್ಯವನ್ನು ನದಿ ಇಂಗಳಗಾಂವ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನ ಕಛೇರಿಯ ಅಧ್ಯಕ್ಷರಾದ ಶಿವಪ್ಪ ಕೌಜಲಗಿ ವಹಿಸಿದ್ದರು.
ಸಿದ್ದು ಹುಕ್ಕೇರಿ ನಿಡಗುಂದಿ ಶಾಖಾ ಸಲಹಾ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷ ಮಲ್ಲಪ್ಪ ತೇರದಾಳ, ಶಂಕರಯ್ಯ ಹಿರೇಮಠ, ಸಿದರಾಯ ಪೂಜೇರಿ, ಕಲ್ಲಪ್ಪ ಹುಬ್ಬಳ್ಳಿ, ಬಸವರಾಜ ರಬಕವಿ, ಕೆಂಪಣ್ಣ ಹುಬ್ಬಳ್ಳಿ, ಬಸಪ್ಪ ಮೇಲಾಪ್ಪಗೋಳ, ಬಸಪ್ಪ ತೇರದಾಳ, ಲಕ್ಷ್ಮಣ ಸಪ್ತಸಾಗರ,ಗಿರಮಲ್ಲಪ್ಪ ಸಂತಿ, ಸಿದ್ದು ಹುಕ್ಕೇರಿ, ಹಣಮಂತ ಅಥಣಿ, ರಾಜು ಗವಾಣಿ, ಶೇಖರ ಹಿರೇಮಠ, ಮುರಿಗೆಪ್ಪ ಮಾಲಗಾರ,ಪ್ರಕಾಶ ಅಕ್ಕಿಮರಡಿ, ರಮೇಶ ಪೋತದಾರ, ಬಸವರಾಜ ಅರಳಿಮಟ್ಟಿ, ಸುನೀತಾ ಹಿರೇಮಠ ಉಪಸ್ಥಿತರಿದ್ದರು.
ಪ್ರಧಾನ ಕಛೇರಿಯ ಪ್ರಧಾನ ವ್ಯವಸ್ಥಾಪಕ ಆನಂದ ಸಂತಿ ಸ್ವಾಗತಿಸಿದರು ಮತ್ತು ಸಿದ್ದಪ್ಪ ಮಹಾರಾಜಪ್ಪಗೊಳ ನಿರೂಪಿಸಿ, ವಂದಿಸಿದರು.