- Advertisement -
ಸಿಂದಗಿ; ಸಾರ್ವಜನಿಕರು ಗ್ರಾಮಸ್ಥರ ಬೇಡಿಕೆಯ ಮೇರೆಗೆ ಸಿಂದಗಿ ಯಿಂದ ಮೋರಟಗಿ – ಕುಳೆಕುಮಟಗಿ – ಶಿರಸಗಿ – ಬಮ್ಮನಳ್ಳಿ – ಗುಂದಗಿ ಮಾರ್ಗವಾಗಿ ಆಲಮೇಲ ಪಟ್ಟಣಕ್ಕೆ ಹಾಗೂ ಸಿಂದಗಿ ಯಿಂದ ಮಲಘಾಣ – ದೇವರನಾವದಗಿ – ಕುಮಸಗಿ – ದೇವಣಗಾಂವ ಮಾರ್ಗವಾಗಿ ಅಫಜಲಪುರ್ ತಲುಪುವ ಹಾಗೂ ಆಲಮೆಲ ದಿಂದ ಬ್ಯಾಡಗಿಹಾಳ ಗ್ರಾಮಕ್ಕೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಶಾಸಕ ಅಶೋಕ ಮನಗೂಳಿ ಬಸ್ಸುಗಳಿಗೆ ಚಾಲನೆ ನೀಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಕೋರಿದ್ದಾರೆ.
ಇದೆ ಸಂದರ್ಭದಲ್ಲಿ ಡಿಪೋ ವ್ಯವಸ್ಥಾಪಕ ರೇವಣಸಿದ್ದಪ್ಪ ಖೈನೂರ ಸೇರಿದಂತೆ ಕೆ. ಎಸ್.ಆರ್.ಟಿ.ಸಿ ಸಿಬ್ಬಂದಿಗಳು ಹಾಗೂ ಮಂಡಲ ಅದ್ಯಕ್ಷ ಸುರೇಶ ಪೂಜಾರಿ, ಪಕ್ಷದ ಮುಖಂಡರಾದ ಪ್ರವೀಣ ಕಂಠಿಗೊಂಡ, ಸಾಯಬಣ್ಣಾ ಪುರದಾಳ, ವಿಜಯಕುಮಾರ ಯಾಳವಾರ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.