spot_img
spot_img

ನೂತನ ಡಿ ಡಿ ಪಿ ಆಯ್ ಹಾಗೂ ಬಿ ಇ ಓ ರವರಿಗೆ ಅಭಿನಂದನೆಯ ಸನ್ಮಾನ

Must Read

- Advertisement -

ಬೆಳಗಾವಿ -ಶುಕ್ರವಾರ ಸಂಜೆ ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯ ನೂತನ ಡಿ ಡಿ ಪಿ ಐ ಶ್ರೀಮತಿ ಲೀಲಾವತಿ ಹಿರೇಮಠರ ರವರನ್ನು ಹಾಗೂ ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ರವರನ್ನು ಸಮಾನ ಮನಸ್ಕ ಶಿಕ್ಷಕರ ಗೆಳೆಯರ ಬಳಗದ ವತಿಯಿಂದ ಸನ್ಮಾನ ಮಾಡಿ ಅಭಿನಂದಿಸಲಾಯಿತು

ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಮಾಸ್ತಮರಡಿ ಮಾದರಿ ಕನ್ನಡ ಶಾಲೆಯ ಹಿರಿಯ ಮುಖ್ಯ ಶಿಕ್ಷಕರಾದ ಬಸವರಾಜ ಫಕೀರಪ್ಪ ಸುಣಗಾರ, ಶಿಕ್ಷಕರ ಸಂಘಟನೆಯ ಮುಖ್ಯಸ್ಥರಾದ ಕುಮಾರ ಸ್ವಾಮಿ ಚರಂತಿಮಠ ರವರು, ವಿಜಯನಗರ ಮರಾಠಿ ಶಾಲೆಯ ಕನ್ನಡ ಶಿಕ್ಷಕರಾದ ಆರ್ ಆಯ್ ಮೆಟ್ಯಾಲಮಠ ರವರು ಅವರನ್ನು ಅಭಿಮಾನ ಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಿದರು, ಅವರ ಅಧಿಕಾರದ ಅವಧಿಯಲ್ಲಿ ಶಿಕ್ಷಕರ ಸ್ನೇಹಿ ಆಡಳಿತ ನೀಡಿ ಶಿಕ್ಷಕರ ಬೇಕು ಬೇಡಿಕೆಗಳು, ಸಮಸ್ಯೆಗಳು ಪರಿಹಾರ ವಾಗಲೆಂದು ಆಶಿಸಿ ಅಭಿನಂದಿಸಿದರು

ಈ ಸಮಯದಲ್ಲಿ ಜಿಲ್ಲಾ ಎಸ್ ಎಸ್ಎ, ಉಪಯೋಜನಾಧಿಕಾರಿ ಗಳಾದ ಬಿ,ಎಚ್,ಮಿಲ್ಲಾನಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಬೆಳಗಾವಿ ಗ್ರಾಮೀಣದ ಎಸ್ ಪಿ ದಾಸಪ್ಪನವರ, ಬೈಲಹೊಂಗಲದ ಎ ಎನ್ ಪ್ಯಾಟಿ, ರಾಮದುರ್ಗದ ಆರ್ ಟಿ ಬಳಿಗಾರ, ಸವದತ್ತಿಯ ಮೋಹನ ದಂಡಿನ, ನಗರ ಬಿ ಆರ್ ಸಿಯ ಸಮನ್ವಯಾಧಿಕಾರಿ ಆಯ್ ಡಿ ಹಿರೇಮಠ,ಎಸ್ ಸಿ ಎಸ್ ಟಿ ಶಿಕ್ಷಕರ ಸಂಘಟನೆಯ ರಾಜ್ಯಾಧ್ಯಕ್ಷರಾದ ಭರತ ಬಳ್ಳಾರಿ, ಅಶೋಕ ಕೋಲಕಾರ, ವಿಜಯಕುಮಾರ ಪಾಶ್ಚಾಪುರ, ಬಿ ಎಮ್ ರಸೂಲಖಾನ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group