ಕವನ: ನಾವುಗಳೇ ಹಿಂಗ್ಯಾಕ

Must Read

ಹೋಗುವ ದಾರಿಯಲಿ ಬೆಕ್ಕು ಬಂದರೆ ಅಪಶಕುನ ಅಂತೀವಿ., ರಾತ್ರಿ ವೇಳೆ

ಶಕುನದ ಹಕ್ಕಿ ಕೂಗಿದರೆ,
ಭಯಪಡುತೀವಿ
ನಾವುಗಳೇ ಹಿಂಗ್ಯಾಕೆ?

ಗಂಡು ಹೆಣ್ಣು ಸೇರುವ ಹೊತ್ತಲಿ ಘಳಿಗೆ ಮೂಹೂರ್ತ ನೋಡ್ತೀವಿ ಸೇರುವ ಸಮಯ ಸರಿಯಿರದಿರೆ, ಅಪಶಕುನ ಅಂತೀವಿ
ರಾಹುಕಾಲ,ಗುಳಿಕಕಾಲ ಅಂತಾ,ಪರದಾಡ್ತೀವಿ ನಾವುಗಳೇ ಹಿಂಗ್ಯಾಕ?

ಮೂರು ದಿನದ ಬದುಕಿನಲಿ ನಾನು ನನ್ನದು ಅಂತೀವಿ
ಮರಣಿಸಿದಾಗ
ಎಲ್ಲವನೂ ಬಿಟ್ಟು ಹೋಗ್ತೀವಿ ನೇರವಾಗಿ ನುಡಿಯುವವರೆದುರು
ಉದಾಸೀನವಾಗ್ತೀವಿ
ನಯವಂಚಕರೆದುರು
ಹಲ್ಕಿರಿದು ಸಾಗ್ತೀವಿ,
ನಾವುಗಳೇ ಹಿಂಗ್ಯಾಕ ?

ಬೆಳ್ಳಿ ಬಂಗಾರದ
ವ್ಯಾಮೋಹದಲಿ
ಅವರಿವರಿಗೆ ಮೋಸ ಮಾಡ್ತೀವಿ
ಹೆಣ್ಣು,ಮಣ್ಣಿಗೆ ಬಡಿದಾಡಿ ಸಾಯ್ತೀವಿ
ಪಶು ಪಕ್ಷಿ,
ಪ್ರಾಣಿಗಳಿಗಿಲ್ಲ ಈ ಮೋಹ!
ನಾವುಗಳೇ ಹಿಂಗ್ಯಾಕ ?


ರಾಹುಲ್ ಸುಭಾಷ್ ಸರೋದೆ
ಗಂಗಾವತಿ
9482448733

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group