ಕವನ: ಇವರೆ ಇವರೆ

0
607

ಇವರೆ ಇವರೆ

ಇವರೆ ಇವರೆ ಇವರೆ
ಸಮತೆಯ ಕಿಡಿಯನು
ಹಚ್ಚಿದ ಬುದ್ದನ
ದೇಶವ ಬಿಡಿಸಿ
ಓಡಿಸಿದವರು ಇವರೆ

ಕ್ರಾಂತಿ ಪ್ರಜ್ಞೆಯ
ಬೆಳಗಿದ ಬಸವನ
ಶರಣರ ಮಾರಣ
ಮಾಡಿದವರು ಇವರೆ

ಸತ್ಯದ ಮೂರ್ತಿ ಶಾಂತಿಯ ಕೀರ್ತಿ
ಗಾಂಧಿಯನ್ನು
ಗುಂಡಿಟ್ಟು ಎದೆಗೆ
ಕೊಂದವರು ಇವರೆ

ರಕ್ಕಸರ ಹಸಿವು
ತಣಿಯಲೇ ಇಲ್ಲ
ಮತ್ತೆ ಕೊಂದರು
ದಾಭೋಲ್ಕರ್ ನು ಇವರೆ

ಸಜ್ಜನ ವ್ಯಕ್ತಿ
ಕಮ್ಯುನಿಸ್ಟ್ ಶಕ್ತಿ
ಗೋವಿಂದ ಪನ್ಸರೆ
ಕೊಂದವರು ಇವರೆ

ಕನ್ನಡ ಮಗ ಕಲಬುರ್ಗಿ
ಅವರ ಹಣೆಗೆ
ಗುಂಡಿಟ್ಟು ಕೊಂದವರು
ಇವರೆ

ಬಿಡಲೇ ಇಲ್ಲ
ಗೌರಿಯನ್ನು
ಸಂಜೆಗೆ ಮನೆಯಲಿ
ಕೊಂದವರು ಇವರೆ

ಕೊಲ್ಲುವ ನೀಚರು
ಧರ್ಮವ ಪಠಿಸುತ
ದೇಶವ ಒಡೆದ ದುಷ್ಟರು
ಇವರೆ

ಹೆಣಗಳ ಮೇಲೆ
ಕುಣಿಯುವ ಜೋಗುತಿ
ರಾಷ್ಟ್ರವ ಮಸಣವ
ಮಾಡಿದವರು ಇವರೆ

ಬಗ್ಗುವದಿಲ್ಲ ಬಳಕುವುದಿಲ್ಲ
ಅಂಜುವುದಿಲ್ಲ ಅಳಕುವುದಿಲ್ಲ
ಸಮತೆಯ ಸಮರಕೆ ಕಹಳೆಯು
ಮೊಳಗಿದೆ ದೇಶವ ಕಟ್ಟುವ
ಮೆಟ್ಟುತ ಇವರನು


ಡಾ ಶಶಿಕಾಂತ ಪಟ್ಟಣ ಪುಣೆ