ಬೆಂಗಳೂರು – ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಿಶ್ವ ಮಧ್ವ ಮತ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನೂತನ ಶುಭಕೃತ್ ನಾಮ ಸಂವತ್ಸರದ ದಿನದರ್ಶಿಕೆ ಲೋಕಾರ್ಪಣೆ ಮಾಡಿದರು ಹಾಗೂ ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ತವನಿಧಿಯೆನಿಸಿದ ಹರಿದಾಸ ಸಾಹಿತ್ಯದ ಪ್ರಚಾರಕರಾಗಿ ಅಂಕಿಸ್ಥರಾಗಿ ಇಂದಿಗೂ ಹರಿದಾಸ ಪರಂಪರೆಯನ್ನು ಅನುಸರಿಸುತ್ತ ಹರಿಸೇವಾತತ್ಪರರಾಗಿರುವ ಹರಿದಾಸರುಗಳಾದ ಕುರುಡಿ ಕೃಷ್ಣಮೂರ್ತಾಚಾರ್ಯರು, ಹಾರ್ಮೋನಿಯಂ ಕೃಷ್ಣಮೂರ್ತಿ,ರಮಾ ವಿಠ್ಠಲ್ ಮೊದಲಾದವರನ್ನು ಸನ್ಮಾನಿಸಿದರು.

ವಿಪ್ರ ಬ್ಯುಸೆನೆಸ್ ಫೋರಂ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಹೆಚ್.ಸತ್ಯನಾರಾಯಣಾಚಾರ್ಯ , ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ , ಜಗನ್ನಾಥದಾಸರು ಚಲನಚಿತ್ರದ ನಿರ್ಮಾಪಕ ತ್ರಿವಿಕ್ರಮ ಜೋಷಿ, ನಿರ್ದೇಶಕ ಡಾ.ಮಧುಸೂಧನ ಹವಾಲ್ದಾರ್ , ಪ್ರಭಂಜನ ದೇಶಪಾಂಡೆ , ಜಿಎಂಡಬ್ಲೂಎ ಸಂಸ್ಥಾಪಕ ಅಧ್ಯಕ್ಷ ವೆಂಕೋಬ ರಾವ್ ಪದಾಧಿಕಾರಿಗಳಾದ ಅನಿರುದ್ಧ , ಪ್ರಭಾಕರ್ , ರಾಘವೇಂದ್ರ ಜೋಷಿ ಹಾಗು ಶ್ರೀನಿವಾಸ ಜೋಷಿ ಮೊದಲಾದವರು ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ಯಾರ್ಥಿ ಹಾಗು ಅಧ್ಯಾಪಕ ವೃಂದಕ್ಕೆ ಜಗನ್ನಾಥದಾಸರು ಚಲನಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

