ಓ ಹೊಸ ವರ್ಷವೆ…
ಓ ಹೊಸ ವರ್ಷವೇ
ನೀನು ಲಂಡನ್ನಿನವನೋ,
ಪಾಶ್ಚಾತ್ಯ ಮೂಲೆಯವನೋ,
ನಿನ್ನ ಪಟಾಕಿ ಸುಟ್ಟು,
ಮೋಜು-ಮಸ್ತಿ ಮಾಡಿ
ಸ್ವಾಗತ ಮಾಡುತ್ತಾರೆಂದೋ
ಇನಿತೂ ಬೇಸರವಿಲ್ಲ,
ಜಗದ ಕೊಳೆಯ ತೊಳೆದು ಬಿಡು,
ಮಾನವ ಮನದೊಳಡಗಿರುವ
ಮೋಸ,ವಂಚನೆ,ದ್ವೇಷ,ಸ್ವಾರ್ಥ
ಮನೋಭಾವಗಳ ನೀಗಿಸಿಬಿಡು,
ಕಳೆದೆರಡು ವರ್ಷಗಳ
ಕರೋನಾ ಮರಣ ಮೃದಂಗವ ನೀಗಿಸಿಬಿಡು,
ಮಾನವ ಮಾನವನ ಕೊಲ್ಲುವ,
ಹಿಂಸೆ,ಅಮಾನವೀಯ ಪಾತಕಗಳ ನೀಗಿಸಿಬಿಡು..
ನಾವು ನಾವಾಗಿ ಬಾಳಲು,
ಸಾವಿನ ಭಯವ ತೊಳೆದುಬಿಡು,
ಇದೇ ನನ್ನ ಕೋರಿಕೆ..
ಡಾ.ಭೇರ್ಯ ರಾಮಕುಮಾರ್