Homeಸುದ್ದಿಗಳುಕಾಯಕ ಜಂಗಮ ಲಿಂಗ ತತ್ವಗಳ ಪಾಲಕ ನೂಲಿಯ ಚಂದಯ್ಯ - ಡಾ ಅ ಬ ಇಟಗಿ

ಕಾಯಕ ಜಂಗಮ ಲಿಂಗ ತತ್ವಗಳ ಪಾಲಕ ನೂಲಿಯ ಚಂದಯ್ಯ – ಡಾ ಅ ಬ ಇಟಗಿ

ಬೆಳಗಾವಿಯ ಲಿಂಗಾಯತ ಸಂಘಟನೆ ಡಾ. ಫ. ಗು. ಹಳಕಟ್ಟಿ ಭವನ ಮಹಾಂತೇಶ ನಗರದಲ್ಲಿ ಪ್ರಾರಂಭದಲ್ಲಿ ವಚನ ಪ್ರಾರ್ಥನೆಯನ್ನು ಮಹಾದೇವಿ ಅರಳಿ ನಡೆಸಿಕೊಟ್ಟರು

ನೂಲಿ ಚಂದಯ್ಯ ಕುರಿತು ಉಪನ್ಯಾಸ ನೀಡುತ್ತಾ ಚಂದಯ್ಯನ ಕಾಯಕ ನಿಷ್ಠೆ ಜಂಗಮ ದಾಸೋಹದ ಮಹತ್ವ ಲಿಂಗದೇವನ ಪ್ರಸಂಗದ ಚರಿತ್ರೆಗಳನ್ನು ಸವಿವರವಾಗಿ ಮನವರಿಕೆ ಮಾಡುತ್ತಾ ಆತನ ಆರಂಭಿಕ ಬದುಕಿನಿಂದ ಹಿಡಿದು ಕಲ್ಯಾಣದಲ್ಲಿ ಅಂಗದ ಮೇಲೆ ಲಿಂಗವ ಪೂಜಿಸಿ ನಂತರ ಉಳವಿ ಮಾರ್ಗದ ಶರಣರ ಜೊತೆ ವಚನ ರಕ್ಷಣೆ ಧರ್ಮಪ್ರಚಾರಕ್ಕೆ ಒಂದು ಕೈಯಲ್ಲಿ ಖಡ್ಗ ಹಿಡಿದು ಮಲೆನಾಡಿನ ಬೆಟ್ಟಗುಡ್ಡ ಸುತ್ತುತ್ತ ಆರ್ ನುಲೆನೂರು ನಲ್ಲಿ ಲಿಂಗೈಕ್ಯರಾದರು ವೆಂದು ತಿಳಿಸಿದರು

ಸಂಗಮೇಶ ಅರಳಿ ಅಧ್ಯಕ್ಷತೆ ವಹಿಸಿದ್ದರು ಪ್ರಸಾದ ದಾಸೋಹಿಗಳಾದ ರುದ್ರಮ್ಮ ರಾಮಪ್ಪ ಅಕ್ಕನ್ನವರ ದಂಪತಿಗಳು, ಸುರೇಶ ನರಗುಂದ,ಶಂಕರಶೆಟ್ಟಿ, ಸದಾಶಿವ ದೇವರಮನಿ, ಶಂಕರ ಗುಡಸ, ವಿ ಕೆ ಪಾಟೀಲ, ಆನಂದ ಕಕಿ೯,ಎಂ ವೈ ಮೆಣಸಿನಕಾಯಿ, ಶಿವಾನಂದ ತಲ್ಲೂರ,ವಿರೂಪಾಕ್ಷ ದೊಡ್ಡಮನಿ,ಬಸವರಾಜ ಬಿಜ್ಜರಗಿ,ಮಂಗಲಾ ಕಾಗತಿಕರ,ಶೋಭಾ ದೇಯನ್ನವರ,ಅನ್ನಪೂಣ೯ ಕಾಡಣ್ಣವರ ಸಂಘಟನೆಯ ಪದಾಧಿಕಾರಿಗಳು ಸದಸ್ಯರು ನಗರದ ಬಸವ ಅಭಿಮಾನಿಗಳು ಭಾಗಿಯಾಗಿದ್ದರು ಸುರೇಶ ನರಗುಂದ ನಿರೂಪಿಸಿದರು

RELATED ARTICLES

Most Popular

error: Content is protected !!
Join WhatsApp Group