ಸಂವಿಧಾನ ಪಾಲಿಸುವುದೇ ರಚನಾಕಾರರಿಗೆ ನೀಡುವ ಗೌರವ- ಈರಣ್ಣ ಕಡಾಡಿ

Must Read

ಮೂಡಲಗಿ: ನಮ್ಮ ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸಿ ಕಟಿಬದ್ಧವಾಗಿ ಪಾಲಿಸುವುದೇ ದೇಶಕ್ಕೆ ಮತ್ತು ಸಂವಿಧಾನ ರಚನಾಕಾರರಿಗೆ ಸಲ್ಲಿಸುವ ಶ್ರೇಷ್ಠ ಗೌರವ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಕಲ್ಲೋಳಿ ಪಟ್ಟಣದಲ್ಲಿ ಗುರುವಾರ ಜ.26 ರಂದು ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ. ಇದರ ಆಡಳಿತ ಕಛೇರಿಯಲ್ಲಿ ಭಾರತ ಮಾತೆ, ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ  ಅವರು, ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡಿದೆ, ಜಾತಿ, ಮತ, ಪಂಥಗಳ ಭೇದ ತೊರೆದು ಭಾರತೀಯ ಎನ್ನುವ ತತ್ವದಡಿ ದೇಶದಲ್ಲಿ ಸಾಮರಸ್ಯ ಮೂಡಿಸಬೇಕಾಗಿದೆ. ಅದೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರಿಗೆ ನೀಡುವ ಅತಿದೊಡ್ಡ ಗೌರವವಾಗಿದೆ ಎಂದರು.

ಶ್ರೀ ಮಹಾಲಕ್ಷ್ಮೀ ಪಿ.ಕೆ.ಪಿ.ಎಸ್, ಕಲ್ಲೋಳಿ ಹಾಲು ಉತ್ಪಾಧಕರ ಸಹಕಾರಿ ಸಂಘ, ಸೇವಾ ಸಂಸ್ಥೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿದರು.

ಸಹಕಾರಿ ಉಪಾಧ್ಯಕ್ಷ ಶ್ರೀಶೈಲ ತುಪ್ಪದ, ಬಿ.ಡಿ.ಸಿ.ಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ, ನಿರ್ದೇಶಕರಾದ ಬಾಳಪ್ಪ ಸಂಗಟಿ, ಶಿವಗೊಂಡ ವ್ಯಾಪಾರಿ, ಸಹದೇವ ಹೆಬ್ಬಾಳ, ಮಾರುತಿ ಮಕ್ಕಳಗೇರಿ, ಪ್ರಭು ಕಡಾಡಿ, ಹಣಮಂತ ಸಂಗಟಿ, ಅಡಿವೆಪ್ಪ ಕುರಬೇಟ, ತುಕಾರಾಮ ಪಾಲ್ಕಿ, ಸಿದ್ದಪ್ಪ ಹೆಬ್ಬಾಳ, ಮಲ್ಲಪ್ಪ ಹೆಬ್ಬಾಳ, ಧರೆಪ್ಪ ಖಾನಗೌಡ್ರ, ಅಜೀತ ಚಿಕ್ಕೋಡಿ, ಪ್ರಧಾನ ವ್ಯವಸ್ಥಾಪಕ ಹಣಮಂತ ಕಲಕುಟ್ರಿ, ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ, ಶಿವಾನಂದ ಬಡಿಗೇರ, ದೊಡ್ಡಪ್ಪ ಉಜ್ಜಿನಕೊಪ್ಪ ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರೂ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group