spot_img
spot_img

ಕಾರ್ಮಿಕ ವರ್ಗದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ-ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

- Advertisement -

ಯಾದವಾಡ(ಗಿರಿಸಾಗರ) ಗ್ರಾಮದಲ್ಲಿ ಜೈ ಭವಾನಿ ಕಟ್ಟಡ ಕಾರ್ಮಿಕರ ಸಂಘವನ್ನು ಉದ್ಘಾಟಿಸಿದ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.

ಮೂಡಲಗಿ: ಕಾರ್ಮಿಕರ ವರ್ಗದಿಂದ ಮಾತ್ರ ಈ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ದೈಹಿಕ ಇಲ್ಲವೇ ಬೌದ್ಧಿಕ ಶ್ರಮವನ್ನು ಮಾಡುತ್ತಿರುವ ವ್ಯಕ್ತಿಯು ಕಾರ್ಮಿಕನಾಗಿದ್ದು, ಅಂತಹ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿರುವುದಾಗಿ ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಯಾದವಾಡ (ಗಿರಿಸಾಗರ) ಗ್ರಾಮದಲ್ಲಿ ಇತ್ತೀಚೆಗೆ ಜೈ ಭವಾನಿ ಕಟ್ಟಡ ಮತ್ತು ಇತರೆ ನಿರ್ಮಾಣದ ಕಾರ್ಮಿಕರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರ ಏಳ್ಗೆಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.

- Advertisement -

ಕಟ್ಟಡ ಕಾರ್ಮಿಕರಿಗಾಗಿ ವೈದ್ಯಕೀಯ ಸೌಲಭ್ಯಗಳ ಕುರಿತು ಕೆಲ ಸಮಸ್ಯೆಗಳಿದ್ದು, ಅವುಗಳ ಈಡೇರಿಕೆಗಾಗಿ ಪ್ರಯತ್ನಿಸುತ್ತೇನೆ. ಕಾರ್ಮಿಕರ ಆರೋಗ್ಯ ವಿಮೆ (ಇಎಸ್‌ಐ) ದೊರಕಿಸಿಕೊಡಲು ಮುಂದಿನ ದಿನಗಳಲ್ಲಿ ಕಾರ್ಮಿಕರಿಗೆ ಅನುಕೂಲವಾಗಲು ಪ್ರಯತ್ನ ಪಡುತ್ತೇನೆ. ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಕೇವಲ ಘಟಪ್ರಭಾದ ಜೆಜಿಕೋ ಆಸ್ಪತ್ರೆಯಲ್ಲಿ ಮಾತ್ರ ಈ ಸೌಲಭ್ಯವಿದ್ದು, ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಮಿಕರಿಗಾಗಿ ವೈದ್ಯಕೀಯ ಸೌಲಭ್ಯ ದೊರಕಿಸಿಕೊಡುವಂತೆ ಸಂಘಟನೆಗಳು ಮನವಿ ಸಲ್ಲಿಸಿವೆ ಎಂದು ಅವರು ಹೇಳಿದರು.

ಯಾದವಾಡದಲ್ಲಿ ದಾಲ್ಮಿಯಾ ಕಾರ್ಖಾನೆ ಸಹಯೋಗದೊಂದಿಗೆ ಬಡ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗಲು ಎಲ್ಲ ವೈದ್ಯಕೀಯ ಸೌಲಭ್ಯಗಳನ್ನೊಳಗೊಂಡ ಸರಕಾರಿ ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದೇವೆ. ಗೋಕಾಕ ಮತ್ತು ಮುಧೋಳ ಪಟ್ಟಣಗಳಿಗೆ ಹೋಗುವ ಬದಲು ನಿಮ್ಮ ಗ್ರಾಮದಲ್ಲಿಯೇ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಬದ್ಧರಿದ್ದೇವೆ. ಉಚಿತವಾಗಿ ಬಡ ಕುಟುಂಬಗಳು ಇದರ ಸದ್ಭಳಕೆ ಮಾಡಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಯಾದವಾಡ ಗ್ರಾಮಕ್ಕೆ ಹೊಂದಿಕೊಂಡಿರುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕಾಮಗಾರಿಗಳು ಸಹ ಈಗಾಗಲೇ ಪ್ರಗತಿಯಲ್ಲಿವೆ. ಬರುವ ಮಾರ್ಚ ತಿಂಗಳ ಅಂತ್ಯದೊಳಗೆ ಕ್ಷೇತ್ರದ ಎಲ್ಲ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

- Advertisement -

ಪತ್ರಿಮಠದ ಶ್ರೀಗಳು ಮತ್ತು ಚೌಕಿಮಠದ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ವೇದಿಕೆಯ ಮೇಲೆ ಮುಖಂಡರಾದ ರಂಗಪ್ಪ ಇಟ್ಟನ್ನವರ, ಶಂಕರ ಬೆಳಗಲಿ, ಹನಮಂತ ಹುಚ್ಚರಡ್ಡಿ, ಗೌಡಪ್ಪ ಗುರಡ್ಡಿ, ಬಸವರಾಜ ಬೂತಾಳಿ, ಬಸವರಾಜ ಕೇರಿ, ಬಸವರಾಜ ಹಿಡ್ಕಲ್, ಬೀರಪ್ಪ ಮುಗಳಖೋಡ, ಯಲ್ಲಪ್ಪ ನ್ಯಾಮಗೌಡ್ರ, ಮಲ್ಲಪ್ಪ ಚಿಕ್ಕನ್ನವರ, ಅಮೀನಸಾಬ ಯಳ್ಳೂರ, ಶ್ರೀಶೈಲ ಢವಳೇಶ್ವರ, ಲಕ್ಷ್ಮೀ ಮಾಳೇದ, ದಾಲ್ಮೀಯಾ ಸಿಮೆಂಟ ಕಾರ್ಖಾನೆಯ ಅಧಿಕಾರಿಗಳಾದ ಮಯಾಂಕ ಪಾಠಕ, ಉಮೇಶ ದೇಸಾಯಿ, ಮೂಡಲಗಿ ಕಾರ್ಮಿಕ ಅಧಿಕಾರಿ ಪಾಂಡುರಂಗ ಮಾವರಕರ, ಇಮಾಮ ಬಾಗವಾನ, ಶಂಕರ ತೋಟಗಿ, ಗೋಕಾಕ ನಗರಸಭೆ ಉಪಾಧ್ಯಕ್ಷ ಬಸವರಾಜ ಆರೇನ್ನವರ, ಧರೆಪ್ಪ ಮುಧೋಳ, ಜೈ ಭವಾನಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶ ಧೂಮಾಳೆ ಹಾಗೂ ಪದಾಧಿಕಾರಿಗಳು, ಯಾದವಾಡ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಿಂದಗಿ ಮಂಡಲ ವತಿಯಿಂದ ರಸ್ತಾರೋಖೋ ಪ್ರತಿಭಟನೆ

ಸಿಂದಗಿ - ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿದ್ದು, ರಾಜ್ಯದಲ್ಲಿನ ಕಾನೂನ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹಾಗೂ ವಾಲ್ಮೀಕಿ ನಿಗಮದ ಹಗರಣದ...
- Advertisement -

More Articles Like This

- Advertisement -
close
error: Content is protected !!
Join WhatsApp Group