spot_img
spot_img

ಬಿದರಿ ಕಲೆಯ ಷಾ ರಶೀದ್ ಅಹ್ಮದ್ ಖಾದ್ರಿಗೆ ಒಲಿಯಿತು ಪದ್ಮಶ್ರೀ

Must Read

- Advertisement -

ಬೀದರ: ಬಿದರಿ ಕಲೆಯಲ್ಲಿ ವಿಶೇಷ ಸಾಧನೆ ಮಾಡಿರುವ ಬೀದರನ ಷಾ ಅಹ್ಮದ ಖಾದ್ರಿಯವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ.

1955 ರ ಜೂನ್‌ ನಲ್ಲಿ ಪ್ರತಿಷ್ಠಿತ ಬಿದ್ರಿ ಕಲೆಗಾರರ ಕುಟುಂಬದಲ್ಲಿ ಜನಿಸಿರುವ ಇವರು ತಮ್ಮ ತಂದೆಯಿಂದಲೇ ಬಿದ್ರಿ ಕರಕುಶಲವನ್ನು ಕಲಿತಿದ್ದಾರೆ.

- Advertisement -

ತಮ್ಮ ಪೂರ್ವಜರ ಕಾಲದಿಂದಲೂ ಬಿದ್ರಿ ಕರಕುಶಲದಲ್ಲಿ ತೊಡಗಿಸಿಕೊಂಡಿರುವ ಕುಟುಂಬದಿಂದ ಬಂದಿದ್ದರೂ, ಕಲೆಯಲ್ಲಿ ಅಲ್ಪ ಪ್ರಮಾಣದ ದುಡಿಮೆಯಷ್ಟೇ ಬರುತ್ತಿದ್ದುದರಿಂದ ಕುಟುಂಬದ ಸಾಂಪ್ರದಾಯಿಕ ಕಸುಬಿನಲ್ಲಿ ಮುಂದುವರಿಯುವುದು ಅವರ ತಂದೆಗೆ ಇಷ್ಟವಿರಲಿಲ್ಲ… ಆದಾಗ್ಯೂ ಪರಿಸ್ಥಿತಿಯ ಕಾರಣದಿಂದ ಕೊನೆಗೆ ಖಾದ್ರಿ ಅವರು ತಮ್ಮ ತಂದೆಯ ಮೇಲ್ವಿಚಾರಣೆಯಲ್ಲೇ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

‘ಈ ಕರಕುಶಲತೆಯಲ್ಲಿ ತಾನು ತೊಡಗಿಸಿಕೊಂಡ ನಂತರ ತನಗೆ ಸಾಕಷ್ಟು ಪ್ರೋತ್ಸಾಹ ಸಿಕ್ಕಿತು. ಈ ಪ್ರಾಚೀನ ಹಳೆಯ ಕರಕುಶಲತೆಯ ಸುಧಾರಣೆ ಮತ್ತು ಅಭಿವೃದ್ಧಿಗಾಗಿ ಹೊಸ ಮಾದರಿ, ವಿನ್ಯಾಸ ಕಂಡುಹಿಡಿಯಲು ಪ್ರಾರಂಭಿಸಿದೆ’ ಎಂದು ಖಾದ್ರಿ ಅವರು ಹೇಳುತ್ತಾರೆ.

- Advertisement -

ತಂದೆಯಿಂದ ತರಬೇತಿ ಪಡೆದ ನಂತರ, 1970 ರಿಂದ ಸ್ವತಂತ್ರವಾಗಿ ಕೆಲಸ ಮಾಡಲು ಪ್ರಾರಂಭಿಸಿದ ಅವರು ಈ ಕಲೆಗೆ ಹೊಸ ವಿನ್ಯಾಸದ ಮಾದರಿಗಳನ್ನು ಪರಿಚಯಿಸಿದ್ದು, ಕಠಿಣ ಪ್ರಯತ್ನಗಳೊಂದಿಗೆ ಕರಕುಶಲತೆಯನ್ನು ಅಭಿವೃದ್ಧಿಪಡಿಸಲು ಪ್ರಮುಖ ಪಾತ್ರ ವಹಿಸಿದರು.

ಈ ಸಂಬಂಧ ಪತ್ರಿಕೆಯೊಡನೆ ಮಾತನಾಡಿದ ಷಾ ರಶೀದ್, ಪದ್ಮಶ್ರೀ ಪ್ರಶಸ್ತಿ ಸಿಕ್ಕಿದ್ದು ನನಗೆ ಬಹಳ ಖುಷಿಯಾಗಿದೆ. ಈ ಪ್ರಶಸ್ತಿಯನ್ನು ನಾನು ಬೀದರ ಜನರಿಗೆ ಮತ್ತು ಬಿದರಿ ಕಲೆ ಕುಟುಂಬಕ್ಕೆ ಅರ್ಪಿಸುತ್ತೇನೆ ಎಂದರು.

ಕೋವಿಡ್ ಸಂದರ್ಭದಲ್ಲಿ ಬಿದರಿ ಮಾಡಲು ಸ್ವಲ್ಪ ಕಷ್ಟ ಆಯಿತು. ಭಾರತ ದೇಶದಲ್ಲಿ ೧೦% ಮಾತ್ರ ನನ್ನ ಬಿದರಿ ಕಲೆ ಮಾರಾಟ ಆಗುತ್ತದೆ ಆದರೆ ವಿದೇಶದಲ್ಲಿ ನನ್ನ ಬಿದರಿ ಕಲೆಗೆ ಬಹಳ ಮಹತ್ವ ಪಡೆದಿದೆ ಎಂದು ಹೇಳಿದರು. ಹೊರದೇಶಗಳಲ್ಲಿ ನನ್ನ ಬಿದರಿ ಕಲೆಯ ೯೦% ಮಾರಾಟ ಆಗುತ್ತದೆ ಎಂದು ಷಾ ಹೇಳಿದರು.

ಅಮೇರಿಕ (ಯುಎಸ್‌ಎ), ಇಟಲಿ, ಸಿಂಗಾಪುರ, ಹಾಲೆಂಡ್, ಸ್ಪೇನ್, ಕಿಂಗ್‌ಡಮ್ ಆಫ್ ಬಹ್ರೇನ್, ಮಸ್ಕತ್ , ಸ್ವಿಝರ್‌ಲ್ಯಾಂಡ್‌ ಸೇರಿದಂತೆ ವಿದೇಶಗಳಲ್ಲೂ ಕರಕುಶಲ ಪ್ರದರ್ಶನ ನಡೆಸಿ ತಮ್ಮ ಛಾಪನ್ನು ಅವರು ಮೂಡಿಸಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

Yuva Movie: ಯುವ ರಾಜ್‌ಕುಮಾರ್ ಅವರ ಚಿತ್ರದ ಕಥೆ ಲೀಕ್ ಆಯ್ತಾ?

ಕನ್ನಡ ಚಲನಚಿತ್ರ "ಯುವ" ಮಾರ್ಚ್ 2024 ರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಪ್ರಸಿದ್ಧ ಕನ್ನಡ ನಟ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್...
- Advertisement -

More Articles Like This

- Advertisement -
close
error: Content is protected !!
Join WhatsApp Group