Homeಸುದ್ದಿಗಳುಅಜೀಂ ಪ್ರೇಮಜಿ ಫೌಂಡೇಶನ್ ಅಧಿಕಾರಿಗಳಿಂದ ಮೊಟ್ಟೆ ವಿತರಣೆ ಪರಿಶೀಲನೆ

ಅಜೀಂ ಪ್ರೇಮಜಿ ಫೌಂಡೇಶನ್ ಅಧಿಕಾರಿಗಳಿಂದ ಮೊಟ್ಟೆ ವಿತರಣೆ ಪರಿಶೀಲನೆ

ಕಿತ್ತೂರ ತಾಲ್ಲೂಕಿನ ಕೆ.ಬಿ.ಎಸ್.ಎಮ್.ಕೆ. ಹುಬ್ಬಳ್ಳಿ ಶಾಲೆಗೆ ಇಂದು ಅಜೀಂ ಪ್ರೇಮಜಿ ಫೌಂಡೇಶನ್‌ನ ಯೋಜನಾ ಮುಖ್ಯಸ್ಥರಾದ ಸಚಿನ್ ಮೂಲೆ ಹಾಗೂ ಬೆಳಗಾವಿ ಜಿಲ್ಲಾ ನೂಡಲ್ ಅಧಿಕಾರಿ ನಾಗರಾಜ ದುಂದೂರ ಅವರು ಭೇಟಿ ನೀಡಿ, ಶಾಲೆಯಲ್ಲಿ ನಡೆಯುತ್ತಿರುವ ಪಿ ಎಮ್ ಪೋಷಣ ಯೋಜನೆಯಡಿಯಲ್ಲಿ ಮೊಟ್ಟೆ ವಿತರಣೆ ಕುರಿತಾಗಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಅವರು ಮಕ್ಕಳೊಂದಿಗೆ ಸಂವಹನ ನಡೆಸಿ, ಮೊಟ್ಟೆ ವಿತರಣೆ ಕುರಿತು ಅವರ ಅಭಿಪ್ರಾಯಗಳನ್ನು ತಿಳಿದು ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪೋಷಣ ಯೋಜನೆಯ ಸಹಾಯಕ ನಿರ್ದೇಶಕರಾದ  ಪ್ರಕಾಶ ಮೆಳವಂಕಿ, ಕಿತ್ತೂರ ವಲಯದ ಸಿ ಆರ್ ಪಿ ಗಳಾದ ವಿನೋದ ಪಾಟೀಲ ಹಾಗೂ ಶ್ರೀಮತಿ ವಸೀಮಾಬಾನು ದಡವಾಡ, ಶಾಲೆಯ ಮುಖ್ಯಶಿಕ್ಷಕರಾದ ಸಿದ್ದಯ್ಯ ಹಿರೇಮಠ ಹಾಗೂ ಇತರ ಸಹಶಿಕ್ಷಕರು ಉಪಸ್ಥಿತರಿದ್ದರು.

ಈ ಯೋಜನೆಯ ಪರಿಣಾಮವಾಗಿ ಮಕ್ಕಳ ಪೌಷ್ಟಿಕತೆ ಹಾಗೂ ಹಾಜರಾತಿಯಲ್ಲಿನ ವೃದ್ಧಿಯಾಗಿದೆ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು.

RELATED ARTICLES

Most Popular

error: Content is protected !!
Join WhatsApp Group