spot_img
spot_img

ಮಾ.10ರಂದು ಈವಿವಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಮಾರೋಪ ಸಮಾರಂಭ

Must Read

- Advertisement -

ಮೈಸೂರು – ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಮಾ.10ರಂದು ಭಾನುವಾರ ಬೆಳಿಗ್ಗೆ 11ಕ್ಕೆ ಒಂಟಿಕೊಪ್ಪಲು ಕಾಳಿದಾಸ ರಸ್ತೆ, ಚಂದ್ರಕಲಾ ಆಸ್ಪತ್ರೆ ಸಮೀಪದ ‘ಓಂ ಶಾಂತಿ ಮಂಟಪ’ದಲ್ಲಿ ‘ಮಹಿಳಾ ಅಭಿವೃದ್ಧಿ – ಸವಾಲುಗಳು ಮತ್ತು ಸಾಧ್ಯತೆಗಳು’ ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಗಿದೆ.

ಉದ್ಘಾಟನೆಯನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪ್ರಭಾವತಿ ಹಿರೇಮಠ್ ಅವರು ನೆರವೇರಿಸಲಿದ್ದು, ವಿಶೇಷ ಅತಿಥಿಯಾಗಿ ಸುಪ್ರಸಿದ್ಧ ಭರತನಾಟ್ಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ ಆಗಮಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಮತಿ ಸಿ.ದೇವಿಕಾ, ಕರಾಮುವಿವಿ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಟಿ.ಎಂ.ಗೀತಾಂಜಲಿ, ದಾಂಡೇಲಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ. ಶ್ರೀಮತಿ ರೋಹಿಣ  ಡಿ.ಬಸಾಪುರ್, ಮನಶಾಸ್ತ್ರಜ್ಞರು ಮತ್ತು ಸಮಾಲೋಚಕರಾದ ಡಾ.ಭಾರತಿ ಕುಲಶೇಖರ ಮತ್ತು ಶ್ರೀರಾಂಪುರ ಎಸ್.ಬಿ.ಐ. ವ್ಯವಸ್ಥಾಪಕರಾದ ಶ್ರೀಮತಿ ನಳಿನಾಕ್ಷಿ ಬಿ. ಇವರುಗಳು ಭಾಗವಹಿಸಲಿದ್ದಾರೆ. 

- Advertisement -

ದಿವ್ಯ ಸಾನ್ನಿಧ್ಯವನ್ನು ಮುಖ್ಯ ಸಂಚಾಲಕಿ ಈವಿವಿ ಮೈಸೂರು ಉಪ ವಲಯದ ರಾಜಯೋಗಿನಿ ಬಿಕೆ ಲಕ್ಷ್ಮೀಜಿಯವರು ವಹಿಸಲಿದ್ದಾರೆ.88ನೇ ತ್ರಿಮೂರ್ತಿ ಶಿವಜಯಂತಿ ಸಮಾರೋಪ ಸಮಾರಂಭ ಮಾ.10ರಂದು ಮೇಲ್ಕಂಡ ಸ್ಥಳದಲ್ಲಿ ಸಂಜೆ 6.30ಕ್ಕೆ 88ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವದ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ. 

ಮುಖ್ಯ ಅತಿಥಿಯಾಗಿ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸರವರು ಆಗಮಿಸಲಿದ್ದು, ಸಮಾರೋಪ ಭಾಷಣವನ್ನು ಜೆಎಸ್‍ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಮೊರಬದ ಮಲ್ಲಿಕಾರ್ಜುನ ನುಡಿಯಲಿದ್ದಾರೆ. ಗೌರವ ಅತಿಥಿಯಾಗಿ ಬಾಗಲಕೋಟೆಯ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರಾದ ಪ್ರೊ.ಡಿ.ವೈ.ಬಸಾಪುರ್ ಅವರು ಆಗಮಿಸಲಿದ್ದು, ದಿವ್ಯ ಸಾನ್ನಿಧ್ಯವನ್ನು ಮುಖ್ಯ ಸಂಚಾಲಕಿ ಈವಿವಿ ಮೈಸೂರು ಉಪ ವಲಯದ ರಾಜಯೋಗಿನಿ ಬಿಕೆ ಲಕ್ಷ್ಮೀಜಿಯವರು ವಹಿಸಲಿದ್ದಾರೆ. ವೇದಿಕೆ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಕವಿತಾ ಮತ್ತು ತಂಡದವರಿಂದ ‘ಪುಣ್ಯಕೋಟಿ ನೃತ್ಯರೂಪಕ’ವನ್ನು ಏರ್ಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -
- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group