ತಳವಾರ,ಪರಿವಾರ ಸಮುದಾಯಕ್ಕೆ ಎಸ್.ಟಿ.ಪ್ರಮಾಣಪತ್ರ ನೀಡಬೇಕು – ಮಡಿವಾಳ ನಾಯ್ಕೋಡಿ

Must Read

ಸಿಂದಗಿ: ರಾಜ್ಯದಲ್ಲಿರುವ ಲಕ್ಷಾಂತರ ತಳವಾರ ಮತ್ತು ಪರಿವಾರ ಸಮುದಾಯದ ಮಕ್ಕಳು ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಸಿಗದೇ ನಿರುದ್ಯೋಗಿಗಳಾಗಿದ್ದಾರೆ ರಾಜ್ಯ ಸರ್ಕಾರ 15000 ಶಿಕ್ಷಕರ ನೇಮಕಾತಿ ಆದೇಶ ಹೊರಡಿಸಿದ್ದು, ತಳವಾರ ಸಮಾಜದ ಅಭ್ಯರ್ಥಿಗಳಿಗೆ ಎಸ್.ಟಿ.ಪ್ರಮಾಣಪತ್ರ ನೀಡಿ ಅವರಿಗೆ ನೇಮಕಾತಿಯಲ್ಲಿ ಮೀಸಲಾತಿ ಸಿಗುವಂತೆ ಕೂಡಲೇ ತಳವಾರ,ಪರಿವಾರ ಸಮಾಜಕ್ಕೆ ಸರ್ಕಾರ ಸಾಮಾಜಿಕ ನ್ಯಾಯ ಮರೆಮಾಚದೇ ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡದಡಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕೆಂದು ಚಎಂದು ತಳವಾರ ಮತ್ತು ಪರಿವಾರ ಸಮಾಜ ಸೇವಾ ಸಮಿತಿಯ ಯುವ ಘಟಕದ ಅಧ್ಯಕ್ಷ ಮಡಿವಾಳ.ನಾಯ್ಕೋಡಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿಕ್ಷಕರ ನೇಮಕಾತಿ ಆದೇಶ ಹೊರಡಿಸಿದ್ದು ತಳವಾರ ಸಮಾಜದ ಅಭ್ಯರ್ಥಿಗಳಿಗೆ ಸಂವಿಧಾನ ಬದ್ಧವಾಗಿ ನೀಡಬೇಕಾದ ಎಸ್.ಟಿ.ಪ್ರಮಾಣಪತ್ರ ನೀಡಿ ಅವರಿಗೆ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕು,ರಾಜ್ಯದಲ್ಲಿರುವ ತಳವಾರ,ಪರಿವಾರ ಸಮುದಾಯಕ್ಕೆ ಎಸ್.ಟಿ.ಪ್ರಮಾಣಪತ್ರ ನೀಡಬೇಕೆಂದು ಕೇಂದ್ರ ಸರ್ಕಾರ ಮಾರ್ಚ 2020 ರಂದು ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಗೆಜೆಟ್ ಹೊರಡಿಸಿದೆ.ಜೊತೆಗೆ ರಾಜ್ಯ ಸರ್ಕಾರ ಮೇ 2020 ರಂದು ರಾಜ್ಯಪತ್ರ ಹೊರಡಿಸಿದೆ ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ತಳವಾರ ಸಮಾಜಕ್ಕೆ ಎಸ್.ಟಿ.ಪ್ರಮಾಣಪತ್ರ ನೀಡದೆ ಅನ್ಯಾಯ ಮಾಡುತ್ತಿದ್ದಾರೆ ಜನೇವರಿ 2022 ರಂದು ಸಮಾಜಕಲ್ಯಾಣ ಇಲಾಖೆಯಿಂದ ಹಾಗೂ ಜಿಲ್ಲಾಧಿಕಾರಿಗಳು,ತಹಶಿಲ್ದಾರರು ಇವರಿಗೆ ತಳವಾರ ಸಮಾಜದವರಿಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವಂತೆ ಸಂಬಂಧಿಸಿದ ತಹಶೀಲ್ದಾರರಿಗೆ ಆದೇಶ ಮಾಡಿದ್ದಾರೆ ಆದರೆ ತಹಶಿಲ್ದಾರರು ಸ್ಥಳ ಪರಿಶೀಲನೆ ನಡೆಸದೇ,ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ ಇಂತಹ ಪ್ರಮಾದ ಮತ್ತೆ ನಡೆಯದ ಹಾಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group