ಒಬ್ಬ ಸಾಧಕ ಇನ್ನೊಬ್ಬ ಸಾಧಕನನ್ನು ಗುರುತಿಸಿ ಗೌರವಿಸುವಂಥಾಗಬೇಕು-ಹಣಮಂತ ಹಾವಣ್ಣವರ

Must Read

ಹಳ್ಳೂರ – ಸಮಾಜದಲ್ಲಿ ಒಬ್ಬ ಸಾಧಕ ಸಾಧನೆ ಮಾಡುತ್ತಿರುವ ಇನ್ನೊಬ್ಬ ಸಾಧಕನನ್ನು ಗುರುತಿಸಿ ಗೌರವಿಸಿದರೆ ಸ್ಫೂರ್ತಿ ನೀಡಿದಂತಾಗುತ್ತದೆ ಸಮಾಜದಲ್ಲಿ ಒಳ್ಳೆ ಕೆಲಸ ಕಾರ್ಯ, ಸಾಧನೆ ಮಾಡುವವರಿಗೆ ಅಡ್ಡಗಾಲು ಹಾಕಿ ಅವಮಾನಿಸದೆ ಸಹಾಯ ಸಹಕಾರ ನೀಡಬೇಕೆಂದು ಗುಲಗಂಜಿ ಕೊಪ್ಪದ ಗ್ರಾಮ ಪಂಚಾಯತ್ ಸದಸ್ಯ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಹನಮಂತ ಹಾವಣ್ಣವರ ಹೇಳಿದರು.

ಅವರು ಹಳ್ಳೂರ ಗ್ರಾಮದ ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಅವರ ಮನೆಗೆ ಭೆಟ್ಟಿ ನೀಡಿ ಆವರಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಸುವರ್ಣ ಕರ್ನಾಟಕ ಸಾಧಕ ರಾಷ್ಟ್ರ ಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ ಸ್ವೀಕರಿಸಿದ್ದಕ್ಕಾಗಿ ಸನ್ಮಾನಿಸಿ ಗೌರವಿಸಿ ಅಯೋಧ್ಯೆಯ ಪುರುಷೋತ್ತಮ ಶ್ರೀ ರಾಮನ ಪ್ರಸಾದ ನೀಡಿ ಶುಭ ಹಾರೈಸಿ ಮಾತನಾಡಿ ಸಮಾಜದ ಬಡ ಜನರ ಹಿತಾಸಕ್ತಿ ಕಾಪಾಡಿ ನಿರಂತರ ಸಮಾಜ ಸೇವೆ ಜೊತೆಗೆ ಪತ್ರಕರ್ತ, ಹಾಗೂ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ನೌಕರಿ ಮಾಡುತ್ತಾ ಚಿಕ್ಕ ವಯಸಿನಲ್ಲಿಯೇ ರಾಜ್ಯ ಮಟ್ಟದಲ್ಲಿ ಅನೇಕ ಪ್ರಶಸ್ತಿ ಪಡೆದುಕೊಂಡು ಹೆಸರು ವಾಸಿಯಾಗಿದ್ದಾರೆ ಎಂದರು

ಬಸವಣ್ಣವರ ತತ್ವ ಜೀವನದಲ್ಲಿ ಅಳವಡಿಸಿಕೊಂಡು ಹಗಲಿರುಳು ಕಾಯಕದಲ್ಲಿ ತೊಡಗಿ ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಕೆಟ್ಟವರ ಸಹವಾಸ ಮಾಡದೇ ನೇರ ನುಡಿಯುಳ್ಳ ಸಮಾಜಕ್ಕೆ ಸಹಾಯ ಮಾಡಬೇಕೆನ್ನುವ ಸಹೃದಯದಿಂದ ಸಮಾಜ ಸೇವೆ ರೂಪದಲ್ಲಿ ಕೊಡುಗೆ ನೀಡುತ್ತಿರುವ ಮುರಿಗೆಪ್ಪ ಮಾಲಗಾರ ಅವರು ಸಮಾಜಕ್ಕೆ ಈಗಿನ ಯುವ ಜನಾಂಗದವರಿಗೆ ಮಾದರಿಯಾಗಿದ್ದಾರೆ ನಿಜಕ್ಕೂ ಇವರು ಮಾಡುವ ಕಾರ್ಯ ಶ್ಲಾಘನೀಯವಾದದ್ದು ಎಂದು ಹಾವಣ್ಣವರ ಹೇಳಿದರು.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group