ನಮ್ಮ ಉಸಿರು ಉಳಿಸಿದೆ ಸೇನೆ
ಹಿಮದ ನಡುಗಡ್ಡೆಯಲ್ಲಿ
ಕೊರೆಯುವ ಚಳಿಯಲ್ಲಿ
ಭಾರತಾಂಬೆಯ ಮಕ್ಕಳು
ಶತ್ರುಗಳ ಸದೆ ಬಡಿಯುತ್ತಾ
ಪ್ರಾಣ ಲೆಕ್ಕಿಸದೆ ನಿಂತಿಹರು
ತಾಯ್ನಾಡಿನ ವೀರಯೋಧರು
ಒಂದೇ ಬಾರಿಗೆ
ಮೈಮೇಲೆ ಬಂದೆರೆಗುವ
ರಕ್ಕಸ ಹಿಮದ ರಾಶಿ
ಅಂಜದೇ – ಕುಗ್ಗದೆ
ಎದೆಯೊಬ್ಬಿಸಿ ನಿಂತಿಹರು
ತಾಯ್ನಾಡಿನ ವೀರಯೋಧರು
ಕ್ಷಣ ಕ್ಷಣವೂ ಬದಲಾಗುವ
ಸಿಯಾಚಿನ್ ಪ್ರಕೃತಿಯ
ಮಡಿಲಲ್ಲಿ ಜೀವದ ಹಂಗು
ತೊರೆದು ನಮ್ಮೆಲ್ಲರಿಗೂ
ಉಸಿರು ನೀಡಿ ನಿಂತಿಹರು
ತಾಯ್ನಾಡಿನ ವೀರಯೋಧರು
ದೇಶದ ಗಡಿಯಲ್ಲಿ
ಅವರ ಉಸಿರನು ಲೆಕ್ಕಿಸದೆ
ವೀರ ಮರಣವನ್ನು ಎದೆಗಪ್ಪಿ
ಭಾರತಾಂಬೆಯ ಸೇವೆ
ಸಲ್ಲಿಸುತ್ತಾ ನಿಂತಿಹರು
ತಾಯ್ನಾಡಿನ ವೀರಯೋಧರು
ನಮ್ಮ ಹೆಮ್ಮೆಯ ಯೋಧರಿಗೆ
ಒಂದು ಹೃದಯ ಪೂರ್ವಕ ಸಲಾಂ
ಅನಂತ ಕಲ್ಲಾಪುರ , ತೀರ್ಥಹಳ್ಳಿ