spot_img
spot_img

ಸಂಪಾದಕರ ಸಮಸ್ಯೆಗಳಿಗೆ ಅಂತ್ಯಹಾಡಲು ಪ್ರತಿ ಜಿಲ್ಲೆಯಲ್ಲಿ ಸಂಘಟನೆಯ ಅಗತ್ಯವಿದೆ : ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ

Must Read

- Advertisement -

ಬೀದರ್: ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ವಿಜಯಕುಮಾರ ಪಾಟೀಲ ಚಾಂಬೋಳ್ ಆಯ್ಕೆ ಮಾಡಲಾಯಿತು.

ಸೆಪ್ಟಂಬರ್ 19 ರ ಗುರುವಾರ ಬೆಳಿಗ್ಗೆ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಕಾ ಆಯ್ಕೆ ಸಮಿತಿ ಸಭೆ ಜರುಗಿತು.

ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ವಿಜಯಕುಮಾರ ಪಾಟೀಲ ಚಾಂಬೋಳ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕುಮಾರ ಪಾಟೀಲ ಸಂಗಮ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

- Advertisement -

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಈ ಸಂದರ್ಭದಲ್ಲಿ ಮಾತನಾಡಿ, ಸಂಪಾದಕರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರೆಲ್ಲರ ಸಮಸ್ಯೆಗಳಿಗೆ ಅಂತ್ಯ ಹಾಡಲು ಪ್ರತಿ ಜಿಲ್ಲೆಯಲ್ಲಿ ಸಂಘಟನೆ ಅತೀ ಅಗತ್ಯವಾಗಿದೆ ಎಂದರು.

ವಾರ್ತಾ ಇಲಾಖೆಯಿಂದ 2021 ರಲ್ಲಿ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಶೇ.12 ರಷ್ಟು ಜಾಹೀರಾತು ಹೆಚ್ಚಳ ಮಾಡಲಾಗಿದೆ.ನಂತರ ಹೆಚ್ಚಳ ಮಾಡಿಲ್ಲ. ದರ ಹೆಚ್ಚಳ ಮಾಡುವಂತೆ ಮಾನ್ಯ ಮುಖ್ಯಮಂತ್ರಿಯವರಿಗೆ, ಸರ್ಕಾರಕ್ಕೆ , ಇಲಾಖೆಗೆ ಕೂಡ ಸಂಘದಿಂದ ಜನವರಿ 24 ರ ಮಾಹೆಯಿಂದ ಮನವಿಗಳನ್ನು ಸಲ್ಲಿಸ ಬರಲಾಗುತ್ತಿದೆ. ಇದುವರೆಗೂ ದರ ಹೆಚ್ಚಳಕ್ಕೆ ಮುಂದಾಗದ ಇಲಾಖೆಯ ನಡೆಗೆ ಬೇಸರ ವ್ಯಕ್ತಪಡಿಸಿದ ಅವರು ಇಲಾಖೆಯಿಂದ ಎಜೆನ್ಸಿಗಳ ಮೂಲಕ ಪತ್ರಿಕೆಗಳಿಗೆ ಬಿಡುಗಡೆ ಮಾಡುವ ಜಾಹೀರಾತಗಳ ಒಟ್ಟು ಬಿಲ್ಲಿನ ಮೊತ್ತದಲ್ಲಿ ಶೇ.15 ರಷ್ಟು ಕಮೀಷನ್ ಅನ್ನು ಸರ್ಕಾರದ ಯಾವುದೇ ಆದೇಶ ಇಲ್ಲದಿದ್ದರೂ ಸಹ ಐಎನ್ ಎಸ್ ನ ರೀತ್ಯ ಕಾನೂನು ಬಾಹಿರವಾಗಿ ಕಟ್ ಮಾಡಲಾಗುತ್ತಿದೆ. ಇದು ರದ್ದಾಗಬೇಕೆಂದು ಮನವಿ ಸಲ್ಲಿಸಲಾಗಿದೆ.ಇದಕ್ಕೆ ಸಹ ಇಲಾಖೆ ಸ್ಪಂದಿಸಿಲ್ಲ. ಐದು ವರ್ಷದೊಳಗಿನ ಒಬಿಸಿ, ಬ್ರಾಹ್ಮಣ ಸಮುದಾಯದವರ ಪತ್ರಿಕೆಗಳಿಗೆ ಮಾಸಿಕ ಒಂದು ಪುಟ ಜಾಹೀರಾತು ಬಿಡುಗಡೆಗೆ ಮನವಿ ಮಾಡಲಾಗಿದೆ. ಬಾಕಿ ಇರುವ ಜಾಹೀರಾತು ಹಣ ಬಿಡುಗಡೆ ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಂಘದಿಂದ ನಿರ್ಧರಿಸಲಾಗಿದೆ.
ಇದಕ್ಕೆ ಜಿಲ್ಲಾ ಸಂಘಟನೆಗಳ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ನೂತನ ಅಧ್ಯಕ್ಷ ವಿಜಯಕುಮಾರ ಪಾಟೀಲ ಹಾಗೂ ಶಶಿಕುಮಾರ ಪಾಟೀಲ್ ಅವರುಗಳು ಮುಂದಿನ ದಿನಗಳಲ್ಲಿ ಬೀದರ ಜಿಲ್ಲೆಯಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು. ಉಳಿದ ಪದಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾ ಘಟಕದ ಪಟ್ಟಿಯನ್ನು ಸಲ್ಲಿಸಬೇಕೆಂದು ತಿಳಿಸಿದರು.

- Advertisement -

ಸಭೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಬಸವ ಬಾಗಲವಾಡ, ರಾಜ್ಯ ಉಪಾಧ್ಯಕ್ಷ ಭೀಮರಾಯ ಹದ್ದಿನಾಳ, ಕಾರ್ಯದರ್ಶಿ ಟಿ.ಎಸ್. ಕೃಷ್ಣಮೂರ್ತಿ ಮಾತನಾಡಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರಮೇಶ ರೆಡ್ಡಿ, ಬೀದರ್ ಜಿಲ್ಲೆಯ ಸಂಪಾದಕರಾದ ಗಂಧರ್ವ ಸೇನಾ, ಅಶೋಕಕುಮಾರ ಕರಂಜಿ, ಮಾಳಪ್ಪ ಅಡಸಾರೆ, ಕಾಜಿ ಅಲಿಯೊದ್ದಿನ್, ಅನಂದ ದೇವಪ್ಪ, ಬಸವರಾಜ ಪವಾರ, ಅಬ್ದುಲ್ ಅಲಿ, ಅಬ್ದುಲ್ ಖದೀರ್, ರಾಮಚಂದ್ರ ಭೋಸ್ಲೆ, ಶ್ರೀನಿವಾಸ ಚೌದ್ರಿ, ಅಂಬರೀಶ ಚಿದ್ರಿ, ಜಗನ್ನಾಥ ಜೀರ್ಗಾ, ಅಜಯ್‌ ಭೋಸ್ಲೆ, ಶರದ್ ಘಂಟೆ, ಪ್ರಥ್ವಿರಾಜ.ಎಸ್, ಪ್ರದೀಪ ಬಿರಾದಾರ, ನಂದಕುಮಾರ ಕರಂಜಿ, ಸುನಿಲ ಕುಲಕರ್ಣಿ, ರಾಜಕುಮಾರ ಕಡ್ಯಾಳ್, ಜಯಕುಮಾರ ದಂಪತಿಗಳು ಈ ಸಂದರ್ಭದಲ್ಲಿ ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ : ಕಳಂಕ

ಕಳಂಕ ಭಾರತ ಮಾತೆಯ ಕನಸಿನ ಕೂಸಿಗೆ ಹಚ್ಚದಿರಿ ಕೊಲೆ,ಸುಲಿಗೆ,ಅತ್ಯಾಚಾರವೆಂಬ ಕಳಂಕ ಭಾರತಮಾತೆಯು ಪವಿತ್ರಳೆನ್ನುವಿರಿ ಆ ಪಾವಿತ್ರ್ಯತೆ ನಮ್ಮಲ್ಲಿ ಎಳ್ಕಾಳಷ್ಟು ಕಾಣಲಿಲ್ಲ. ಮೂರೊತ್ತಿನ ಊಟಕ್ಕೆ ದಾರಿಮಾಡಿ ಕೊಟ್ಟರೆ, ಭಾರತಮಾತೆ ಸ್ವತ್ತು ನಮ್ಮದೆಂದು ಸೊಕ್ಕಿನಿಂದ ಬೀಗುವಿರಿ..... ಲವ್ ಜಿಹಾದ್ ಆಮಿಷಗಳಿಗೆ ಹಿಂದೂ...
- Advertisement -

More Articles Like This

- Advertisement -
close
error: Content is protected !!
Join WhatsApp Group