spot_img
spot_img

ಸೋನೆ ಮಳೆ- ಹಸಿರು ಇಳೆ ಕವಿಗೋಷ್ಠಿ. ‘ಪರರಿಗೆ ನೆರಳಾಗುವ ಬದುಕು ನಮ್ಮದಾಗಲಿ’ – ರವೀಂದ್ರ ಶೆಟ್ಟಿ

Must Read

spot_img
- Advertisement -

ಮಂಗಳೂರು : ಮರಗಳು ಬಿಸಿಲಿಗೆ ಬಾಡಿದರೂ ತಂಪಾದ ನೆರಳು ನೀಡುತ್ತವೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾನವ ಬದುಕಿಗೆ ನೆರವಾಗುತ್ತಿರುವ ಪ್ರಕೃತಿಯಿಂದ ನಾವು ಪ್ರೇರಣೆ ಪಡೆಯಬೇಕು. ಪರರಿಗೆ ನೆರಳಾಗುವ ಬದುಕು ನಮ್ಮದಾಗಬೇಕು ಎಂದು ದೇರಳಕಟ್ಟೆಯ ವಿದ್ಯಾರತ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದ.ಕ.ಜಿಲ್ಲಾ ಸಮಿತಿ ವತಿಯಿಂದ ಅರಣ್ಯ ಇಲಾಖೆ ಮತ್ತು ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಸಹಯೋಗದಲ್ಲಿ ನಗರದ ಲಾಲ್‌ಬಾಗ್‌ನ ಇಂದಿರಾ ಪ್ರಿಯದರ್ಶಿನಿ ಪಾರ್ಕ್‌ನಲ್ಲಿ 17-7-24 ಬುಧವಾರ ನಡೆದ ವನಮಹೋತ್ಸವ ಹಾಗೂ ಸೋನೆ ಮಳೆ-ಹಸಿರು ಇಳೆ ಪರಿಸರ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ವನಮಹೋತ್ಸವಕ್ಕೆ ಚಾಲನೆ ನೀಡಿದ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ್ ಶೆಟ್ಟಿ ಮಾತನಾಡಿ ‘ ಮಾನವ ಸ್ವಾರ್ಥದಿಂದ ಪ್ರಕೃತಿ ನಾಶವಾಗುವುದನ್ನು ತಡೆಯಲು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರ ನಡೆಯಬೇಕಾಗಿದೆ ಎಂದರು.

- Advertisement -

ಅಭಾಸಾಪ ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಕವಿಗಳಿಗೆ ಅಭಿನಂದನಾ ಪತ್ರ ವಿತರಿಸಿದರು. ಮಂಂಗಳೂರು ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಕಾರ್ಪೋರೇಟರ್ ಸಂಧ್ಯಾ ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ಅಭಾಸಾಪ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷೆ ಮೀನಾಕ್ಷಿ ರಾಮಚಂದ್ರ, ಪರಿಸರವಾದಿ ಕೃಷ್ಣಪ್ಪ ಉಪಸ್ಥಿತರಿದ್ದರು.

ಅಭಾಸಾಪ ಜಿಲ್ಲಾ ಕೋಶಾಧಿಕಾರಿ ಭಾಸ್ಕರ ರೈ ಕಟ್ಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ ಕಾರ್ಯಕ್ರಮ ನಿರೂಪಿಸಿದರು.ಹಿರಿಯ ಕವಿ ಗುಣಾಜೆ ರಾಮಚಂದ್ರ ಭಟ್ ಕವಿಗೋಷ್ಠಿಗೆ ಚಾಲನೆ ನೀಡಿದರು.

ಡಾ.ಸುರೇಶ್ ನೆಗಳಗುಳಿ ಗೋಷ್ಠಿಯಅಧ್ಯಕ್ಷತೆ ವಹಿಸಿದ್ದರು.
ಕಾವ್ಯದ ನೈಜ ಅಭಿವ್ಯಕ್ತಿ ಹಾಗೂ ಅಕ್ಷರ ವಿನ್ಯಾಸದ ಮಹತ್ವದ ಬಗೆಗೆ ಅವರು ಕಿವಿಮಾತು ಹೇಳಿ ಪರಿಸರ ಸಂಬಂಧೀ ಸ್ವರಚಿತ ಗಜಲ್ ವಾಚಿಸಿದರು.

- Advertisement -

ರೇಖಾ ಸುದೇಶ್ ರಾವ್ ನಿರೂಪಿಸಿದ ಸೋನೆ ಮಳೆ- ಹಸಿರು ಇಳೆಕವಿಗೋಷ್ಠಿಯಲ್ಲಿ ಸುಮನಾ ಘಾಟೆ, ರೇಣುಕಾ ಸುಧೀರ್, ಗೀತಾ ಲಕ್ಷ್ಮೀಶ, ವಿದ್ಯಾಶ್ರೀ ಅಡೂರು, ಅರುಣಾ ನಾಗರಾಜ್, ದಿವ್ಯಾ .ಎ ಗಿರೀಶ್, ಚಂದನಾ ಕಾರ್ತಟ್ಟು, ಕೊಳ್ಚಪ್ಪೆ ಗೋವಿಂದ ಭಟ್, ರೇಖಾ ಸುದೇಶ ರಾವ್, ನಿಶಾನ್ ಅಂಚನ್, ಮನ್ಸೂರ್ ಮೂಲ್ಕಿ, ವೆಂಕಟೇಶ ಗಟ್ಟಿ, ಉಮೇಶ ಕಾರಂತ, ರಾಣಿ ಪುಷ್ಪಲತಾ ದೇವಿ,ಅನುರಾಧಾ ರಾಜೀವ್, ಸುಲೋಚನಾ ನವೀನ್, ದೀಪಾ ಜಿ .ಎಂ.,ಅನಿತಾ ಶೆಣೈ , ರೇಖಾ ಸುದೇಶ್ ರಾವ್ ಇವರುಗಳು ಸ್ವರಚಿತ ಕವನ ವಾಚಿಸಿದರು.

ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ ಮಂಗಳೂರಿನ ಜನತೆಗೆ ಸ್ವಚ್ಛ ಹಾಗೂ ಹಸುರಿನಿಂದ ಕೂಡಿದ ಪರಿಸರ ಲಭಿಸಲು ಮಂಗಳೂರು ಮಹಾ ನಗರ ಪಾಲಿಕೆ ವಿಶೇಷ ಆದ್ಯತೆ ನೀಡಿದೆ. ಜನತೆಯ ಸಹಕಾರದಿಂದ ಹಸಿರು ಮಂಗಳೂರು ಸಾಕಾರವಾಗಲಿದೆ ಎಂದರು.

ವರದಿ – ಡಾ ಸುರೇಶ ನೆಗಳಗುಳಿ
ಸುಹಾಸ
ಬಜಾಲ್ ಪಕ್ಕಲಡ್ಕ ಮಂಗಳೂರು
೯೪೪೮೨೧೬೬೭೪

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group