ಸಿಂದಗಿ; ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸುವುದನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿ ತಾಲೂಕು ಪಂಚಮಸಾಲಿ ಸಮಾಜದಿಂದ ಟೈರ್‌ಗೆ ಬೆಂಕಿ ಹಚ್ಚುವ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯಾದ್ಯಕ್ಷ ವಿಜಯೇಂದ್ರರ ಪ್ರತಿಕೃತಿ ಸುಟ್ಟು ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ತಾಲೂಕು ಅದ್ಯಕ್ಷ ಎಂ.ಎಂ.ಹಂಗರಗಿ ಮಾತನಾಡಿ, ವಾಜಪೇಯಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಕೇಂದ್ರ ಮಂತ್ರಿಯಾಗಿ ಬಿಜೆಪಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿದ ಮೇರು ವ್ಯಕ್ತಿತ್ವದ ರಾಜಕಾರಣಿ ಹಾಗೂ ಪಂಚಮಸಾಲಿ ಸಮಾಜಕ್ಕೆ ೨ಎ ಮಿಸಲಾತಿ ಕೊಡಿಸುವ ನಿಟ್ಟಿನಲ್ಲಿ ಸದನದ ಒಳ-ಹೊರಗು ದ್ವನಿ ಎತ್ತಿದ ಏಕೈಕ ವ್ಯಕ್ತಿ, ಕಟ್ಟಾ ಹಿಂದೂತ್ವವಾದಿ ಬಸನಗೌಡ ಪಾಟೀಲ ಅವರನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಮಾತಿಗೆ ಜೋತು ಬಿದ್ದು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿದ ವ್ಯಕ್ತಿಯನ್ನು ಬಿಜೆಪಿ ಪಕ್ಷದ ಕೇಂದ್ರ ವರಿಷ್ಠರು ೬ ವರ್ಷಗಳ ಕಾಲ ಪ್ರಾಥಮಿಕ ಸದಸ್ಯತ್ವದಿಂದ ಉಚ್ವಾಟಿಸಿರುವುದು ಖೇದಕರ ಸಂಗತಿಯಾಗಿದೆ ಇದು ಪಕ್ಷಕ್ಕೆ ದೊಡ್ಡ ಹೊಡೆತ ಬೀಳುವ ಸಾದ್ಯತೆಗಳಿವೆ ಕಾರಣ ವರಿಷ್ಠರು ಈ ಪಕ್ಷ ನಿಷ್ಠೆಯಲ್ಲಿ ದುಡಿಯುತ್ತಿರುವ ಬಸನಗೌಡ ಪಾಟೀಲ ಅವರನ್ನು ಮರುಪರಿಶೀಲಿಸಿ ಉಚ್ಚಾಟಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಮಹೇಶ ನಾಗರಳ್ಳಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಸ್ತಿತ್ವಕ್ಕೆ ಬರಬೇಕಾದರೆ ಬಸನಗೌಡ ಪಾಟೀಲರ ಕೊಡುಗೆ ಅಪಾರವಿದೆ ಅಂಥವರನ್ನು ಪಕ್ಷದಿಂದ ಉಚ್ಚಾಟಿಸಬೇಕಾದರೆ ರಾಜ್ಯದ ಹಾಗೂ ಜಿಲ್ಲೆಯ ವರಿಷ್ಠರ ಸಮಾಲೋಚನೆ ಮಾಡುವ ಮೂಲಕ ಭೂತ್ ಮಟ್ಟದ ಕಾರ್ಯಕರ್ತರ ಚರ್ಚೆಗೆ ತೆಗದುಕೊಂಡು ಇಂತಹ ನಿರ್ಣಯ ತೆಗೆದುಕೊಳ್ಳಬೇಕಾಗಿತ್ತು ಈ ಬೆಳವಣಿಗೆಯಿಂದ ಬಸನಗೌಡ ಪಾಟೀಲರ ವೈಯಕ್ತಿಕ ವರ್ಚಸ್ಸಿಗಿಂತ ಬಿಜೆಪಿ ಪಕ್ಷಕ್ಕೆ ದೊಡ್ಡ ಪೆಟ್ಟು ಬಿಳುತ್ತದೆ. ಈ ಬಾರಿ ೬೭ ಸ್ಥಾನಗಳು ಬಂದಿರಬಹುದು ಆದರೆ ಇವರಲ್ಲಿ ಬರೀ ಮೂವತ್ತು ಸ್ಥಾನಗಳನ್ನು ಗೆಲ್ಲಿಸಿ ತೋರಿಸಲಿ ಎಂದು ಸವಾಲೆಸೆದರು.
ಭಾರತೀಯ ಕಿಸಾನ ಸಂಘದ ಬಸವರಾಜ ಐರೋಡಗಿ, ಶಿವರಾಜ ಪೊಲೀಸಪಾಟೀಲ, ಕಾರ್ಯದರ್ಶಿ ಆನಂದ ಶಾಬಾದಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರವೀಣ ಬಿರಾದಾರ, ಮಲ್ಲನಗೌಡ ಪಾಟೀಲ ಇಬ್ರಾಹೀಂಪುರ, ಕಲ್ಯಾಣಿ ಬಿರಾದಾರ, ಸಂಗಮೇಶ ಯಲಗೋಡ, ಶಿವು ಬಡಾನೂರ, ರಾಜು ಮುಜಗೊಂಡ, ಅಶೋಕ ಬಾದನ್, ಈರಣ್ಣ ಕಲಬುರ್ಗಿ, ಸಂತೋಷ ನಂದಶೆಟ್ಟಿ, ನಾನಾಗೌಡ ಪಾಟೀಲ, ಗಿರೀಶ ಪಾಟೀಲ ಕೊರಳ್ಳಿ, ಶ್ರೀಶೈಲ ಗಾಡದ, ಅನೀಲ ಪಾಟೀಲ, ಅಮೀತ ಬಿರಾದಾರ, ಗುರು ನೆಗಿನಾಳ, ಶ್ರೀಶೈಲ ಗುಂದಗಿ, ಮಲ್ಲು ನಂದಶೆಟ್ಟಿ, ಹಣಮಂತ ಗಾಡದ, ಬಸು ಗಾಡದ, ಕಿರಣ ನಂದಶೆಟ್ಟಿ, ಸುನೀಲ ಪಾಟೀಲ, ಗುರು ಬಡಾನೂರ, ರಾಮನಗೌಡ ಬಂದಾಳ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.