ಸಿಂದಗಿ ಮತಕ್ಷೇತ್ರಕ್ಕೆ ಪಂಚರತ್ನ ಯಾತ್ರೆ ಜ.18 ರಂದು

0
236

ಸಿಂದಗಿ: ಜ. 18ರಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದ ಮಹತ್ವದ  ಪಂಚರತ್ನ ಯೋಜನೆ ರಥಯಾತ್ರೆ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲರ ನೇತೃತ್ವದಲ್ಲಿ  ಸಿಂದಗಿ ಮತಕ್ಷೇತ್ರದಲ್ಲಿ ಸಂಚರಿಸಲಿದೆ.

ಕನ್ನೋಳ್ಳಿಯಲ್ಲಿ ಸ್ವಾಗತಿಸಿ ಬೆಳಿಗ್ಗೆ 9.30 ಗಂಟೆಗೆ ಚಿಕ್ಕಸಿಂದಗಿ ಗ್ರಾಮಕ್ಕೆ ಆಗಮಿಸಲಿದ್ದು ಅಲ್ಲಿಂದ ರೋಡ ಶೋ ಮೂಲಕ ಬಸವೇಶ್ವರ ವೃತ್ತದಿಂದ ಮಹಾತ್ಮಾ ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಿ ನಂತರ ಬಸ್ ನಿಲ್ದಾಣ ಎದುರಿನಲ್ಲಿರುವ ಅಂಜುಮನ್ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ ಕಾರಣ ಪಕ್ಷದ ಅಭಿಮಾನಿಗಳು, ಸಾರ್ವಜನಿಕರು, ಪಕ್ಷದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜೆಡಿಎಸ್ ತಾಲೂಕಾಧ್ಯಕ್ಷ ದಾನಪ್ಪಗೌಡ ಚನಗೊಂಡ ಕರೆ ನೀಡಿದರು.

ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ರಾಜ್ಯದಿಂದ ಸಿಂದಗಿ ಪಟ್ಟಣಕ್ಕೆ ಆಗಮಿಸುತ್ತಿರುವ ಪಂಚರತ್ನ ಯಾತ್ರೆಯ ಹಿನ್ನೆಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಂತರ ಯರಗಲ್, ಗಬಸಾವಳಗಿ, ಹಂಚಿನಳ, ಮೋರಟಗಿ, ಕುಳೇಕುಮಟಗಿ, ಶಿರಸಗಿ, ದೇವರ ನಾವದಗಿ, ಬಮ್ಮನಳ್ಳಿ, ಗುಂದಗಿ, ಆಲಮೇಲ, ಹೂವಿನಹಳ್ಳಿ ಕ್ರಾಸ್, ಕೊರಳ್ಳಿ, ಬಳಗಾನೂರ, ಸುರಗಿಹಳ್ಳಿ, ಬಂಥನಾಳ, ತಂಬಾ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿ ಬಂಥನಾಳ ಗ್ರಾಮವಾಸ್ತವ್ಯ ಮಾಡಲಿದ್ದಾರೆ. 

ಈ ಪಂಚರತ್ನ ರಥಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ಜೆಡಿಎಸ್ ನಾಯಕರು ಆಗಮಿಸಿ ಪಂಚರತ್ನ ಯೋಜನೆಯ ಶಿಕ್ಷಣವೇ ಆಧುನಿಕ ಶಕ್ತಿ, ಪ್ರತಿಯೊಂದು ಗ್ರಾಪಂಯಲ್ಲಿ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣದಿಂದ ಆರೋಗ್ಯ ಸಂಪತ್ತು, ಆಧುನಿಕ ತಂತ್ರಜ್ಞಾನದ ಕೃಷಿ ಪದ್ದತಿ ಅಳವಡಿಕೆಯ ರೈತ ಚೈತನ್ಯ, ಯುವ ನವ ಮಾರ್ಗ ಹಾಗೂ ಯುವಜನತೆ ಹಾಗೂ ಮಹಿಳೆರಿಗೆ ಉದ್ಯೋಗ ಪಡೆಯಲು ಅಗತ್ಯ ತರಬೇತಿ ಹಗೂ ಮಾರ್ಗದರ್ಶನದ ಮಹಿಳಾ ಸಬಲೀಕರಣ, ವಸತಿ ಇಲ್ಲದವರಿಗೆ ಸರಕಾರದಿಂಲೇ ವಸತಿ ಕಟ್ಟಿಕೊಡುವ ಯೋಜನೆ ವಸತಿಯ ಆಸರೆ ಹೀಗೆ ಹೊಸ ಯೋಜನೆಗಳನ್ನು ಪ್ರಾದೇಶಿಕ ಪಕ್ಷಗಳಿಂದ ದೊರಕಲು ಸಾಧ್ಯ ಎನ್ನುವ ಮತದಾರರ ಅಭಿಲಾಷೆಯಂತೆ ಈ ಪಂಚರತ್ನ ಯೋಜನೆ ರಥಯಾತ್ರೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಡೀ ರಾಜ್ಯಾದ್ಯಂತ 4 ವಲಯಗಳಲ್ಲಿ ಈ ಕಾರ್ಯಕ್ರಮ ಹಮಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಈ ಮತಕ್ಷೇತ್ರದ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜ್ಯಾಳ, ಪ್ರಕಾಶ ಹಿರೇಕುರಬರ, ಪುರಸಭೆ ಸದಸ್ಯರಾದ ರಾಜಣ್ಣಿ ನಾರಾಯಣಕರ, ಶರಣಗೌಡ ಪಾಟೀಲ, ಶರಣಪ್ಪ ಸುಲ್ಪಿ, ಆಲಮೇಲ ತಾಲೂಕಾ ಅಧ್ಯಕ್ಷ ಮಹ್ಮದಸಾಬ ಉಸ್ತಾದ, ಸಿಂದಗಿ ತಾಲೂಕಾ ಯುವ ಘಟಕ ಅಧ್ಯಕ್ಷ ಸಂತೋಷ ಶಿರಕನಳ್ಳಿ, ಸಿಂದಗಿ ತಾಲೂಕಾ ಯುವ ಘಟಕ ಅದ್ಯಕ್ಷ ಕಾಶಿನಾಥ ಕ್ಷತ್ರಿ, ಸಿಂದಗಿ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಗುಡಿಮನಿ, ಜಿಲ್ಲಾ ಉಪಾಧ್ಯಕ್ಷ ಗೂಂಡುರಾವ್ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗರಾಜ ಬಗಲಿ, ಮಹಾಂತೇಶ ಪರಗೊಂಡ ಸೇರಿದಂತೆ ಅನೇಕರಿದ್ದರು.