ಸಿಂದಗಿ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರಷ್ಟೇ ಕಾರಣರಲ್ಲ ಪೋಷಕರು ಕೂಡ ಮುಖ್ಯ. ಹೀಗಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕಾಳಜಿ ವಹಿಸಬೇಕು. ಪ್ರಶಿಕ್ಷಣಾರ್ಥಿಗಳು ಹೆಚ್ಚಾಗಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಎಚ್.ಟಿ.ಕುಲಕರ್ಣಿ ಗುರುಗಳು ಹೇಳಿದರು.
ಪಟ್ಟಣದ ಜೆ ಎಚ್ ಪಟೇಲ್ ಶಿಕ್ಷಣ ಮಹಾವಿದ್ಯಾಲಯ ಸಭಾ ಭವನದಲ್ಲಿ ಹಮ್ಮಿಕೊಂಡ 2021-22 ಸಾಲಿನ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಶಿಕ್ಷಕರು ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಕಾಳಜಿ ವಹಿಸಿ ಅವರ ಪ್ರಗತಿಗೆ ಪೂರಕವಾಗಿ ಕಾರ್ಯೋನ್ಮುಖರಾಗಬೇಕು. ವಿದ್ಯಾರ್ಥಿಗಳ ಸಮಸ್ಯೆ, ಕಷ್ಟ ದುಃಖಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಶಿಕ್ಷಕರು, ವಿದ್ಯಾರ್ಥಿಗಳಾಗಲಿ ಶಿಸ್ತನ್ನು ಮೈಗೂಡಿಸಿಕೊಳ್ಳದಿದ್ದರೇ ನಮ್ಮ ಧ್ಯೆಯವನ್ನು ಸುಲಭವಾಗಿ ಈಡೇರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶಿಸ್ತಿಗೆ ಆದ್ಯತೆ ನೀಡಬೇಕು ಎಂದರು.
ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಚಾರ್ಯ ಡಾ. ಎ.ಬಿ.ಸಿಂದಗಿ, ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಶಾಲೆಯ ಉತ್ತಮ ಫಲಿತಾಂಶಕ್ಕೆ ಹೆಚ್ಚು ಮನ್ನಣೆ ನೀಡಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕನ ಪಾತ್ರ ಮಹತ್ತರವಾದದ್ದು, ಸತತ ಅಧ್ಯಯನಶೀಲರಾಗಬೇಕು, ಈಗಿನ ವಿದ್ಯಾರ್ಥಿಗಳಲ್ಲಿ ಶಿಕ್ಷಕರ ಮೇಲಿನ ಗೌರವದ ಕೊರತೆ ಎದ್ದು ಕಾಣುತ್ತಿದೆ ಮೇಲಾಗಿ ಸಮಾಜದ ಬದಲಾವಣೆಯಲ್ಲಿ ಶೈಕ್ಷಣಿಕ ಪ್ರಪಂಚದಲ್ಲಿ ಪ್ರತಿಯೊಬ್ಬರ ಪಾತ್ರವು ಪ್ರಮುಖವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್.ಎ.ಜಾಗೀರದಾರ, ಉಪನ್ಯಾಸಕರಾದ ಎಸ್.ಬಿ.ಅಂಕಲಗಿ ಪ್ರದೀಪ ಕತ್ತಿ, ಸರೋಜಿನಿ ಹಿರೇಮಠ ಎಚ್.ಸಿ.ಕೆಂಭಾವಿ, ಮಂಜುನಾಥ ಪರಮಾನಂದ, ಎಸ್.ಆರ್.ಬಿರಾದಾರ, ಸುನೀಲ ದೇವರಮನಿ, ಪಪ್ಪು ಪತ್ರಿಕೆ ವಿದ್ಯಾರ್ಥಿ ಪ್ರತಿನಿಧಿ ಭಾಗೇಶ ಪಾಟೀಲ ಸೇರಿದಂತೆ ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು.
ಕು. ತಾಯಮ್ಮ ಮಾದರ ಪ್ರಾರ್ಥಿಸಿದರು. ಕು. ಪುಷ್ಪಾ ಗಬಸಾವಳಗಿ ಸ್ವಾಗತಿಸಿದರು. ಆಕಾಶ ಕುಲಕರ್ಣಿ ವಂದಿಸಿದರು.