ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಳ್ಳಿ

Must Read

ಸಿಂದಗಿ – ದಿನಾಂಕ: ೦೧-ಸಪ್ಟೆಂಬರ್-೨೦೨೫ ರಂದು ಬಸವನಬಾಗೆವಾಡಿ ಯಲ್ಲಿ ಸಾಂಸ್ಕೃತಿಕ ನಾಯಕ ಸ್ತ್ರೀ, ಪಥಿತ, ದೀನ-ದಲಿತ ಕುಲೋದ್ದಾರಕ, ಇಷ್ಟಲಿಂಗ ಜನಕ, ಲಿಂಗಾಯತ ಧರ್ಮಗುರು, ವಿಶ್ವದ ಮೊದಲ ಪ್ರಜಾಪ್ರಭುತ್ವದ ಜನಕ, ಜಗಜ್ಯೋತಿ ಬಸವಣ್ಣನವರ ಬಸವ ಸಂಸ್ಕೃತಿ ಅಭಿಯಾನ ವನ್ನು ಲಿಂಗಾಯತ ಪೀಠಾಧಿಪತಿಗಳ ಒಕ್ಕೂಟ ಹಾಗೂ ಬಸವ ಪರ ಎಲ್ಲಾ ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದೆ.

ಆಸಕ್ತರು ಈ ಅವಿಸ್ಮರಣೀಯ ಮತ್ತು ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸವ ಕೃಪೆಗೆ ಪಾತ್ರರಾಗಬೇಕೆಂದು ವಿಜಯಪುರ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಎಲ್ಲಾ ಬಸವಪರ ಸಂಘಟನೆಗಳ ಪರವಾಗಿ ಶ್ರೀಮತಿ ಅಂಬಿಕಾ ಪಾಟೀಲ ಮಾರ್ಸನಳ್ಳಿ ವಿನಂತಿಸಿದ್ದಾರೆ..

ಕಾರ್ಯಕ್ರಮಕ್ಕೆ ಆಗಮಿಸಲು ಇಚ್ಛಿಸುವ ಸರ್ವರು, ಮಹಿಳೆಯರು- ಇಳಕಲ ಸೀರೆಯನ್ನು ಧರಿಸಬೇಕು, ಪುರುಷರು- ನೆಹರು ಶರ್ಟ, ಗಾಂಧಿ ಟೊಪ್ಪಿಗೆ, ಬಿಳಿ ಲುಂಗಿ/ಪೈಜಾಮಾ ಅಥವಾ ಧೋತಿಯನ್ನು ಧರಸಿ ಬರಬೇಕು.

ಈ ಮೇಲೆ ತಿಳಿಸಿದ ಉಡುಗೆಳನ್ನು ಧರಿಸಿ ಸಾಂಸ್ಕೃತಿಕ ಅಭಿಯಾನಕ್ಕೆ ಶೋಭೆ ತರಬೇಕೆಂದು ಅಲ್ಲದೆ  ದಿ. ೨೭ ಮತ್ತು ೨೮  ರ ಒಳಗಾಗಿ ತಮ್ಮ ಮಾಹಿತಿಯನ್ನು ನೀಡಿ ಸ್ಥಳ ಕಾಯ್ದಿರಿಸಿಕೊಳ್ಳಬೇಕು.  ಮೊ:-೮೧೨೩೪೬೦೫೮೨, ೯೪೪೮೧೧೮೫೯೩, ೭೭೯೫೩೪೪೦೨೩ ಸಂಪರ್ಕಿಸುವಂತೆ ಕೋರಿದ್ದಾರೆ.

Latest News

ಕವನ : ದೀಪಾವಳಿ

ದೀಪಾವಳಿ ಸಾಲು ಸಾಲು ದೀಪಗಳು ಕಣ್ಣುಗಳು ಕೋರೈಸಲು ಒಳಗಣ್ಣು ತೆರೆದು ನೋಡಲು ಜೀವನದ ಮರ್ಮ ಕರ್ಮ ಧರ್ಮಗಳನು ಅರಿಯಲು ಸಾಲು ಸಾಲು ದೀಪಗಳು ಮೌಢ್ಯವ ಅಳಿಸಲು ಜ್ಞಾನವ ಉಳಿಸಿ ಬೆಳೆಸಲು ಸಾಲು ಸಾಲು ದೀಪಗಳು ಮನೆಯನು ಬೆಳಗಲು ಮನವನು ತೊಳೆಯಲು ಸಾಲು ಸಾಲು ದೀಪಗಳು ನಮ್ಮ ನಿಮ್ಮ ಎಲ್ಲರ ಮನೆ ಹಾಗೂ ಮನವನು ಬೆಳಗಲಿ ಮಾನವೀಯತೆಯ ಜ್ಯೋತಿ ಎಲ್ಲೆಡೆ ಪಸರಿಸಲಿ ಶುಭ ದೀಪಾವಳಿ 🌹ಡಾ....

More Articles Like This

error: Content is protected !!
Join WhatsApp Group