- Advertisement -
ಮೈಸೂರು -ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಗಣಿತ ಶಾಸ್ತ್ರ ವಿಭಾಗದಲ್ಲಿ 2ನೇ ವರ್ಷದ ಎಂ.ಎಸ್ಸಿ. ವಿದ್ಯಾರ್ಥಿಯಾದ ಮುರುಳೀಧರ್ ಎ.ಎಸ್. 2023-24ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದ ಲಂಡನ್‍ನ ಟ್ರೀನಿಟಿ ಕಾಲೇಜು ನಡೆಸಿದ ರಾಜ್ಯ ಮಟ್ಟದ ಪಾಶ್ಚಿಮಾತ್ಯ ಸಂಗೀತ ಪರೀಕ್ಷೆಯಲ್ಲಿ ಗ್ರೇಡ್-2 ದರ್ಜೆಯಲ್ಲಿ ತೇರ್ಗಡೆ ಹೊಂದಿ ಕೀರ್ತಿ ತಂದಿದ್ದಾರೆ.
ಮುರುಳೀಧರ್ ಅವರು ಈಗಾಗಲೇ ಯುವ ಕವಿಯಾಗಿದ್ದು, ಬಾಲ್ಯದ ನೆನಪು, ನಾದಬ್ರಹ್ಮ ಡಾ.ಹಂಸಲೇಖ ಎಂಬ ಎರಡು ವಿಶೇಷ ಕೃತಿಗಳನ್ನು ಹೊರತಂದಿದ್ದಾರೆ.
ಮುರುಳೀಧರ್ ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಆಲಂಬಾಡಿ ಗ್ರಾಮದ ಡಾ.ಶಿವಣ್ಣ ರೇಣುಕ ಎಸ್.ಜೆ. ಅವರ ಪುತ್ರರಾಗಿದ್ದಾರೆ.