ಮೂಡಲಗಿ ; ಬಸ್ಸಿಲ್ಲದೇ ಪ್ರಯಾಣಿಕರು ಪರದಾಡುವ ಪರಿಸ್ಥಿತಿ

Must Read

ಮೂಡಲಗಿ:-ಪಟ್ಟಣದ ಬಸ್ ನಿಲ್ದಾಣದಲ್ಲಿ ಜನವೋ.. ಜನ. ಸುಮಾರು ಮೂವತ್ತು ವರ್ಷಗಳ ಹಿಂದೆ ಮೂಡಲಗಿಯಲ್ಲಿ ಡಿಪೋ ಆಗಿದೆ ಅಂತ ಕೇಳಿದ್ದೇವೆ,ಆದರೆ ಇಲ್ಲಿಯವರೆಗೂ ಅದರಿಂದ ಪ್ರಯಾಣಿಕರಿಗೆ ಯಾವುದೇ ಪ್ರಯೋಜನ ಆಗಿಲ್ಲ ಅಷ್ಟೇ ಯಾಕೆ ಇಲ್ಲಿ ಬಸ್ ಡಿಪೋ ಇದೆಯೆಂಬುದೇ ಗೊತ್ತಿಲ್ಲ !

ಒಳ್ಳೆಯ ಕಲೆಕ್ಷನ್ ಇದ್ದರು ಸಹ ಮೂಡಲಗಿಗೆ ಬರುವ ಕೆಲ ಬಸ್ ಗಳನ್ನು ಬಂದ್ ಮಾಡಿದ್ದಾರೆ. ಮೂಡಲಗಿ ಈಗ ತಾಲೂಕು ಕೇಂದ್ರವಾಗಿದ್ದರೂ ಇಲ್ಲಿಂದ ಪ್ರಯಾಣಿಸುವವರಿಗೆ ಬಸ್ಸಿನ ಸೌಲಭ್ಯ ಇಲ್ಲದೆ ಪರದಾಡುವ ಪರಿಸ್ಥಿತಿ ಒದಗಿದೆ. ಜನರ ಗೋಳಾಟ ಕೇಳುವವರಿಲ್ಲ. ಸಾಮಾನ್ಯ ಜನರು ಬಸ್ಸನೇ ಅವಲಂಬಿಸಬೇಕಾಗುತ್ತದೆ.

ಮೂಡಲಗಿಯಲ್ಲಿ ಹಲವಾರು ಶಾಲಾ ಕಾಲೇಜುಗಳಿದ್ದು ಸುತ್ತಮುತ್ತಲಿನಿಂದ ಸಾವಿರಾರು ವಿದ್ಯಾರ್ಥಿಗಳು ಕಲಿಯಲು ಬರುತ್ತಾರೆ. ಬಸ್ ನಿಲ್ದಾಣ ಬೆಳಿಗ್ಗೆ ಹಾಗೂ ಸಾಯಂಕಾಲ ವಿದ್ಯಾರ್ಥಿಗಳಿಂದಲೇ ತುಂಬಿ ತುಳುಕುತ್ತದೆ. ಕೆಲವು ಬಸ್ ಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳ ನಡುವೆ ಹೆಂಗಸರು, ಮಕ್ಕಳು, ವೃದ್ಧರು ಬಸ್ ಹತ್ತಲು ತುಂಬಾ ತೊಂದರೆಯಾಗುತ್ತದೆ. ಇದನ್ನು ನಿವಾರಿಸಲು ಬಸ್ ನಿಲ್ದಾಣದಲ್ಲಿ ಒಂದು ಶಿಸ್ತು ನಿರ್ಮಾಣ ಮಾಡಬೇಕಾದ ಜವಾಬ್ದಾರಿ ನಿಯಂತ್ರಕರಿಗೆ ಇದೆ. ಹಾಗೆಯೇ ಬಸ್ ಗಳ ಸಂಖ್ಯೆಯನ್ನೂ ಹೆಚ್ಚಳ ಮಾಡಿದರೆ ತುಂಬಾ ಅನುಕೂಲವಾಗುತ್ತದೆ.

ಗೋಕಾಕ ಡಿಪೋದಿಂದ ಇಂದಿನ ಬಸ್ಸಿನ ಸೌಲಭ್ಯ ಒದಗಿಸುವ ಕಾರ್ಯಕ್ಕೆ ಮುಂದಾಗಿ,ಪ್ರಯಾಣಕರಿಗೆ ಅನುಕೂಲ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಸಾರ್ವಜನಿಕರು ಬಯಸುತ್ತಾರೆ.  ಇಷ್ಟು ವರ್ಷಗಳಾದರೂ, ನಗರ ಸಾಕಷ್ಟು ಬೆಳೆದಿದ್ದರೂ ಮೂಡಲಗಿಯಿಂದ ಮುಧೋಳ, ಮೂಡಲಗಿಯಿಂದ ಚಿಕ್ಕೋಡಿ ಮತ್ತು ಮೂಡಲಗಿ ತಾಲೂಕಿನ ಕೆಲ ಹಳ್ಳಿಗಳಿಗೆ ಬಸ್ಸಿನ ಸೌಕರ್ಯ ಇನ್ನೂ ಆಗಿಲ್ಲ, ಆದಷ್ಟು ಬೇಗನೇ ಬಸ್ಸಿನ ವ್ಯವಸ್ಥೆ ಆಗಲಿ ಎಂದು ಕೇಳುತ್ತಿದ್ದಾರೆ ಪ್ರಯಾಣಿಕರು. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕಾಗಿದೆ.

ವರದಿ : ಉಮೇಶ ಬೆಳಕೂಡ

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...

More Articles Like This

error: Content is protected !!
Join WhatsApp Group