ಮೂಡಲಗಿಯಲ್ಲಿ ಸಶಸ್ತ್ರ ಸೀಮಾಬಲ ಪಡೆಯಿಂದ ಪಥ ಸಂಚಲನ

Must Read

ಮೂಡಲಗಿ: ವಿಧಾನಸಭೆ ಚುನಾವಣೆ ಹಿನ್ನೆಲೆ ಮತದಾರರು ಧೈರ್ಯದಿಂದ ಮತದಾನ ಮಾಡಿ ಸಂವಿಧಾನ ಹಕ್ಕು ಪಡೆಯಬೇಕು ಎಂದು ಸಶಸ್ತ್ರ ಸೀಮಾಬಲ ಪಡೆ ಮತ್ತು ಪಟ್ಟಣದ ಪೊಲೀಸ್ ಸಿಬ್ಬಂದಿ ಪಥ ಸಂಚಲನ ಕೈಗೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಮೂಡಲಗಿ ಪಟ್ಟಣದ  ವಿದ್ಯಾನಗರ, ಅಂಬೇಡ್ಕರ್ ನಗರ, ಕಲ್ಮೇಶ್ವರ ವೃತ್ತ, ಸಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕರೆಮ್ಮ ಸರ್ಕಲ್, ಚೆನ್ನಮ್ಮ ಸರ್ಕಲ್ ಮಾರ್ಗವಾಗಿ  ಮುಖ್ಯ ರಸ್ತೆಗಳಲ್ಲಿ ಶನಿವಾರ ಸಶಸ್ತ್ರ ಸೀಮಾಬಲ ಪಡೆಯ  ಸುಮಾರು 100 ಯೋಧರು ಹಾಗೂ ಪೋಲೀಸ್ ಸಿಬ್ಬಂದಿ ಪಥ ಸಂಚಲನ ಮಾಡಿದರು.

ಈ ಸಂದರ್ಭದಲ್ಲಿ  ಸಿಪಿಐ ಶ್ರೀಶೈಲ ಬ್ಯಾಕೋಡ, ಪಿಎಸ್‍ಐ ಸೋಮೇಶ ಗೆಜ್ಜಿ, ಹೆಚ್ಚುವರಿ ಪಿಎಸ್‍ಐ ಶಿವಕುಮಾರ್ ಬಿರಾದಾರ್, ಕುಲಗೋಡು ಪೊಲೀಸ್ ಠಾಣೆಯ ಪಿಎಸ್‍ಐ ಗೋವಿಂದಗೌಡ ಪಾಟೀಲ್ ಹಾಗೂ  ಸಶಸ್ತ್ರ ಸಿಮಾಬಲ ಪಡೆಯ ಯೋಧರು ಮತ್ತು ಪೊಲೀಸ್ ಸಿಬ್ಬಂದಿಗಳು ಪಥ ಸಂಚಲದಲ್ಲಿ ಭಾಗವಹಿಸಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group