Homeಸುದ್ದಿಗಳುYadawad: ಯಾದವಾಡದಲ್ಲಿ ಬಕ್ರೀದ ಹಬ್ಬದ ನಿಮಿತ್ತ ಶಾಂತಿ ಸಭೆ

Yadawad: ಯಾದವಾಡದಲ್ಲಿ ಬಕ್ರೀದ ಹಬ್ಬದ ನಿಮಿತ್ತ ಶಾಂತಿ ಸಭೆ

ಮೂಡಲಗಿ: ಶಾಂತಿ ಸುವ್ಯವಸ್ಥೆ ಹಾಳಾಗುವ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೇ ಶಾಂತಿಯುತವಾಗಿ ಬಕ್ರೀದ ಹಬ್ಬ ಆಚರಿಸಬೇಕೆಂದು ಕುಲಗೋಡ ಪೊಲೀಸ್ ಠಾಣೆ ಪಿ.ಎಸ್. ಐ ಗೋವಿಂದಗೌಡ ಪಾಟೀಲ ಪಾಟೀಲ ಹೇಳಿದರು.

ಅವರು ಮೂಡಲಗಿ ತಾಲೂಕಿನ ಯಾದವಾಡ-ಕಾಮನಕಟ್ಟಿ ಗ್ರಾಮದಲ್ಲಿ ನಡೆದ ಬಕ್ರೀದ್ ಹಬ್ಬದ  ಶಾಂತಿ ಸಭೆಯಲ್ಲಿ ಮಾತನಾಡಿ, ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು, ನಿಯಮ ಬದ್ದವಾಗಿ ಅನುಮತಿಸಿದ ಜಾನುವಾರು ಮತ್ತು ವಯಸ್ಸಿನ ದೃಢಿಕರಣ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪತ್ರ ಪಡೆದು ಬಕ್ರೀದ ಹಬವನ್ನು ಆಚರಿಸಬೇಕು, ಪ್ರಾಣಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಕಾನೂನು ಪಾಲನೆ ಮಾಡದೇ ಇದ್ದರೇ ಮುಲ್ಲಾಜಿಲ್ಲದೆ ಕ್ರಮ ಕೈಗೊಳಲಾಗುವದು. ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುದೇ ಜಾತಿ ಭೇದಬಾವ ಇಲ್ಲದೆ ಹಬ್ಬಗಳನ್ನು ಆಚರಿಸಬೇಕು ಎಂದರು.

ಈ ಸಂದರ್ಭದಲ್ಲಿ ಆರಕ್ಷಕ ಸಿಬ್ಬಂದಿಗಳಾದ ಎಲ್. ಎಂ.ನಾಯಿಕ. ಎಸ್. ಎಸ್.ವಜ್ರಮಟ್ಟಿ ಹಾಗೂ ಮುಖಂಡರಾದ ಅಮೀನಸಾಬ ಯಳ್ಳೂರ, ಶಿಖಂದರ ಮೋಮಿನ, ಹಸನ ಮುಧೋಳ,ಹಣಮಂತ ಮೋಡಿ ಹಾಗೂ ಗ್ರಾಮಸ್ತರು ಇದ್ದರು.

RELATED ARTICLES

Most Popular

error: Content is protected !!
Join WhatsApp Group