ಯಮಕನಮರ್ಡಿಯಲ್ಲಿ ಜನ ಬದಲಾವಣೆ ಬಯಸಿದ್ದಾರೆ; ಈರಣ್ಣಾ ಕಡಾಡಿ

0
239

ಬೆಳಗಾವಿ: ಪರಿವರ್ತನೆ ಎನ್ನುವುದು ಜಗತ್ತಿನ ನಿಯಮ.‌ ಆದರೆ ಇಲ್ಲಿಯವರು ಬದಲಾವಣೆ ಆಗಲು ಸಾಧ್ಯ ಇಲ್ಲ ಎಂದುಕೊಂಡಿದ್ದಾರೆ. ಆದರೆ ಯಮಕನಮರಡಿಯಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ ಎಂದು ಈರಣ್ಣಾ ಕಡಾಡಿ ಅವರು ತಿಳಿಸಿದ್ದಾರೆ.

ಯಮಕನಮರಡಿ ಕ್ಷೇತ್ರದಲ್ಲಿ ನಡೆದ ಬಿಜೆಪಿ ಎಸ್.ಟಿ ಸಮಾವೇಶದಲ್ಲಿ ಮಾತನಾಡಿದ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು,  2023ರ ಚುನಾವಣೆಯಲ್ಲಿ ನಾವು ಗೆದ್ದು ಮೋದಿಯವರ ಕೈ ಬಲಪಡಿಸಬೇಕು. ಡಬಲ್ ಎಂಜಿನ್ ಸರ್ಕಾರ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದೆ.‌ ಆದರೆ ಡಬಲ್ ಎಂಜಿನ್ ಸರ್ಕಾರದ ಯೋಜನೆಗಳು ಇಲ್ಲಿಯ ಜನರಿಗೆ ಸಿಕ್ಕಿಲ್ಲ. ಸರ್ಕಾರದ ಯೋಜನೆಯಿಂದ ಇಲ್ಲಿನ ಜನರು ವಂಚಿತ ಆಗಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಯಮಕನಮರಡಿಯಿಂದಲೂ ಬಿಜೆಪಿಗೆ ಜಯ ಸಿಗಬೇಕು. ಆಗ ಸರ್ಕಾರದ ಹೆಚ್ಚು ಯೋಜನೆಗಳು ನಿಮಗೆ ಸಿಗಬಹುದು. ಪ್ರತಿ ಬೂತ್ ಮಟ್ಟದಲ್ಲಿಯೂ ಬಿಜೆಪಿಗೆ ಹೆಚ್ಚು ಹೆಚ್ಚು ಮತ ಬರುವ ನಿಟ್ಟಿನಲ್ಲಿ ಕೆಲಸ ಆಗಬೇಕು ಎಂದು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ತಿಳಿಸಿದರು.