ಸರಕಾರ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕೆಂದು ಆಗ್ರಹಿಸಿ ಮನವಿ

0
221

ಮೂಡಲಗಿ: ಕೆಲವು ವರ್ಷಗಳಿಂದ ಸರರ್ಕಾರದಲ್ಲಿ ಖಾಲಿ ಇರುವ  ಹುದ್ದೆಗಳನ್ನು  ಸರಕಾರ  ಕೂಡಲೇ ಭರ್ತಿ ಮಾಡಲು ಸರಕಾರ  ಬೆಳಗಾವಿಯಲ್ಲಿ  ನಡೆಯುತ್ತಿರುವ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ಕಲ್ಲೋಳಿ ಪಟ್ಟಣದ ಜೈ ಹನುಮಾನ ಯುವ ಜನ ಸೇವಾ ಸಂಘದ ಅಧ್ಯಕ್ಷ ಪರಶುರಾಮ ಇಮಡೇರ ನೇತೃತ್ವದಲ್ಲಿ ಪದಾಧಿಕಾರಿಗಳು ಸೋಮವಾರದಂದು  ಮೂಡಲಗಿ ಗ್ರೇಡ್ ಟು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು

ಯುವಕರು/ ಯುವತಿಯರು ಹಗಲು  ರಾತ್ರಿಯನ್ನದೆ ಕಷ್ಟಪಟ್ಟು ಓದಿ ಹುದ್ದೆ ಸಿಗದೆ ಹತಾಶೆಯಲ್ಲಿದ್ದಾರೆ ಕಷ್ಟಪಟ್ಟು ಓದಿಸಿದ ತಂದೆ ತಾಯಂದಿರು  ಏನೇನೋ ಆಸೆ ಪಟ್ಟು ಏನೂ ಮಾಡದ ಪರಿಸ್ಥಿತಿಯಲ್ಲಿದ್ದಾರೆ ಸರಕಾರ ಈ ವಿಷಯದ ಬಗ್ಗೆ ಗಮನಹರಿಸುತ್ತಿಲ್ಲ. ಇದು ಹೀಗೆ ಮುಂದುವರೆದರೆ ಯವತಿ ಯುವಕರು ವಯೋಮಿತಿ ಮೀರಿ ಯಾವುದೆ ಹುದ್ದೆಗೆ ಅರ್ಹತೆ ಸಿಗಲಾರದಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ ಕಾರಣ ಸರಕಾರ ಈ ಕೂಡಲೇ ಗಮನ ಹರಿಸಿ ಪರಿಹಾರ ಕಂಡು ಹಿಡಿಯಬೇಕೆಂದು ಮನವಿ ಮುಖಾಂತರ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪರಶುರಾಮ ಇಮಡೇರ, ಉಪಾಧ್ಯಕ್ಷ ಮಾಹಾಂತೇಶ ಕಡಗಲಿ, ರಾಜಪ್ಪ ಮಾವರಕರ, ಅನಿಲ ಕಾನಗೌಡರ, ಸಿದ್ದಪ್ಪ ಪೂಜೇರಿ ಸುರೇಶ ಕಲಾಲ, ಭೀಮಶಿ ಕಡಲಗಿ, ರಾಮಣ್ಣ ಕಾಡದವರ, ಪಾಂಡುರಂಗ ಬಡಿಗೇರ, ಹಣಮಂತ ತೋಟಗಿ ಮತ್ತಿತರರು ಉಪಸ್ಥಿತರಿದ್ದರು.